ಮುಂಬಯಿ : ಮುಂಬಯಿ ಶೇರು ಪೇಟೆಯ ಮಟ್ಟಿಗೆ ಇಂದು ಮಂಗಳವಾರ ದಾಖಲೆಗಳ ದಿನವೇ ಆಯಿತು; ಸೆನ್ಸೆಕ್ಸ್ ಮತ್ತು ನಿಫ್ಟಿ ಇಂದಿನ ವಹಿವಾಟಿನ ಅಂತ್ಯಕ್ಕೆ ಸಾರ್ವಕಾಲಿಕ ದಾಖಲೆಯ ಮಟ್ಟವನ್ನು ಏರಿದವು. ಕೊನೇ ತಾಸಿನಲ್ಲಿ ನಡೆದಿದ್ದ ಭರಾಟೆಯ ಶೇರು ಖರೀದಿಯೇ ಇದಕ್ಕೆ ಕಾರಣವಾಯಿತು.
ಇಂದು ಮಂಗಳವಾರದ ವಹಿವಾಟನ್ನು ಸೆನ್ಸೆಕ್ಸ್ 70.31 ಅಂಕಗಳ ಏರಿಕೆಯೊಂದಿಗೆ 34,010.61 ಅಂಕಗಳ ಸಾರ್ವಕಾಲಿಕ ದಾಖಲೆಯ ಎತ್ತರಕ್ಕೆ ಏರಿ ಕೊನೆಗೊಳಿಸಿತಾದರೆ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 38.50 ಅಂಕಗಳ ಏರಿಕೆಯನ್ನು ದಾಖಲಿಸಿ 10,531.50 ಅಂಕಗಳ ಸಾರ್ವಕಾಲಿಕ ಎತ್ತರವನ್ನು ತಲುಪಿತು.
ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 184.10 ಅಂಕಗಳ ಏರಿಕೆಯನ್ನು ದಾಖಲಿಸಿ 33,940.30 ಅಂಕಗಳ ಮಟ್ಟವನ್ನು ತಲುಪಿ ಸಮಾಪನಗೊಳಿಸಿತು.
ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಶೇರುಗಳನ್ನು ಖರೀದಿದಾರರು ಮತ್ತು ಹೂಡಿಕೆದಾರರು ವಿಶೇಷ ಒಲವಿನಿಂದ ಭರಾಟೆಯಲ್ಲಿ ಖರೀದಿಸುತ್ತಿರುವುದು ಶೇರು ಮಾರುಕಟ್ಟೆಯ ಏರಿಕೆಗೆ ಕಾರಣವಾಗಿದೆ.