ಮುಂಬಯಿ : ಕೊನೇ ಕ್ಷಣದ ವಹಿವಾಟಿನಲ್ಲಿ ಬ್ಯಾಂಕ್ ಮತ್ತು ಆಟೋ ರಂಗದ ಶೇರುಗಳ ಭರಾಟೆಯ ಖರೀದಿ ನಡೆದ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 238.69 ಅಂಕಗಳ ಜಿಗಿತದೊಂದಿಗೆ 38,939.22 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 67.45 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 11,671.95 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಎಸ್ ಬ್ಯಾಂಕ್ ಶೇರು ಶೇ.4.08ರಷ್ಟು ಏರುವ ಮೂಲಕ ಅತೀ ದೊಡ್ಡ ಗೇನರ್ ಎನಿಸಿಕೊಂಡಿತು.
ಇದನ್ನು ಅನುಸರಿಸಿ ಟಾಟಾ ಮೋಟರ್, ಐಸಿಐಸಿಐ ಬ್ಯಾಂಕ್, ಬಜಾಜ್ ಆಟೋ, ಕೋಲ್ ಇಂಡಿಯಾ, ಹೀರೋ ಮೋಟೋಕಾರ್ಪ್, ಎಚ್ ಸಿ ಎಲ್ ಟೆಕ್, ವೇದಾಂತ, ಟಿಸಿಎಸ್, ಎಚ್‌ಯುಎಲ್, ಎಸ್‌ಬಿಐ ಶೇರುಗಳು ಶೇ.2.67ರಷ್ಟು ಏರಿದವು.
ಆದರೆ ಇದೇ ವೇಳೆ ಏಶ್ಯನ್ ಪೇಂಟ್, ಇನ್‌ಫೋಸಿಸ್, ಭಾರ್ತಿ ಏರ್‌ಟೆಲ್, ಬಜಾಜ್ ಫಿನಾನ್ಸ್, ಒಎನ್‌ಜಿಸಿ ಶೇರುಗಳು ಶೇ. 3.54ರ ಹಿನ್ನಡೆಯನ್ನು ಕಂಡವು.
ಡಾಲರ್ ಎದುರು ರೂಪಾಯಿ ಇಂದು ವಹಿವಾಟಿನ ನಡುವೆ 25 ಪೈಸೆಗಳ ಏರಿಕೆಯನ್ನು ದಾಖಲಿಸಿ 69.41 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,699 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,142 ಶೇರುಗಳು ಮುನ್ನಡೆ ಸಾಧಿಸಿದವು; 1.399 ಶೇರುಗಳು ಹಿನ್ನಡೆಗೆ ಗುರಿಯಾದವು; 158 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.