ಮುಂಬಯಿ : ಹೂಡಿಕೆದಾರರು ಮತ್ತು ವಹಿವಾಟುದಾರರು ಲಾಭನಗದೀಕರಣದ ಶೇರು ಮಾರಾಟಕ್ಕೆ ಮುಂದಾದ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 184 ಅಂಕಗಳ ನಷ್ಟದೊಂದಿಗೆ 40,083.54 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 66.90 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 12,021.65 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ಟಾಪ್ ಲೂಸರ್‌ಗಳಾದ ಹೀರೋ ಮೋಟೋ ಕಾರ್ಪ್, ಎಚ್ ಸಿ ಎಲ್ ಟೆಕ್, ಟಿಸಿಎಸ್, ಏಶ್ಯನ್ ಪೇಂಟ್, ಇಂಡಸ್ ಇಂಡ್ ಬ್ಯಾಂಕ್, ಇನ್‌ಫೋಸಿಸ್ ಶೇರುಗಳು ಶೇ.3.08ರ ವರೆಗಿನ ನಷ್ಟಕ್ಕೆ ಗುರಿಯಾದವು.
ಡಾಲರ್ ಎದುರು ರೂಪಾಯಿ ಇಂದು 69.28 ರೂ. ಮಟ್ಟಕ್ಕೆ ಕುಸಿಯಿತು. ಬ್ರೆಂಟ್ ಕಚ್ಚಾ ತೈಲ ಶೇ.1.53ರ ಕುಸಿತವನ್ನು ಕಂಡು ಬ್ಯಾರಲ್ ಗೆ 60.34 ಡಾಲರ್ ನಲ್ಲಿ ಬಿಕರಿಯಗುತ್ತಿತ್ತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,741 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,109 ಶೇರುಗಳು ಮುನ್ನಡೆ ಸಾಧಿಸಿದವು; 1,453 ಶೇರುಗಳು ಹಿನ್ನಡೆಗೆ ಗುರಿಯಾದವು; 179 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.