Advertisement

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 125 ಅಂಕ ಜಿಗಿತ, 16 ಸಾವಿರ ಅಂಕ ದಾಟಿದ ನಿಫ್ಟಿ

04:51 PM Aug 09, 2021 | Team Udayavani |

ಮುಂಬಯಿ: ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಸೋಮವಾರ (ಆಗಸ್ಟ್ 09) 125.13 ಅಂಕಗಳ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟನ್ನು ಸಾರ್ವಕಾಲಿಕ ಏರಿಕೆಯಲ್ಲಿ ಮುಕ್ತಾಯಗೊಳಿಸಿದೆ.

Advertisement

ಇದನ್ನೂ ಓದಿ:ಸ್ವಾತಂತ್ರ್ಯ ದಿನಾಚರಣೆ: ಉಗ್ರರ ದಾಳಿ ಸಂಚು ವಿಫಲಗೊಳಿಸಿದ ಬಿಎಸ್ ಎಫ್, ಅಪಾರ ಸ್ಫೋಟಕ ವಶ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 125.13 ಅಂಕಗಳ ಏರಿಕೆಯೊಂದಿಗೆ 54,402.85 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ. ಇದೇ ರೀತಿ ರಾಷ್ಟ್ರೀಯ ಷೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ 20.10 ಅಂಕಗಳ ಏರಿಕೆಯೊಂದಿಗೆ 16,258.30 ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಟೆಕ್ ಮಹೀಂದ್ರಾ, ಆ್ಯಕ್ಸಿಸ್ ಬ್ಯಾಂಕ್, ಬಜಾಜ್ ಫಿನ್ ಸರ್ವ್, ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ಲಾಭ ಗಳಿಸಿದೆ.  ಟಾಟಾ ಸ್ಟೀಲ್, ಎನ್ ಟಿಪಿಸ, ಭಾರ್ತಿ ಏರ್ ಟೆಲ್, ಪಿಎಸ್ ಯು ಬ್ಯಾಂಕ್, ಆಟೋ ಷೇರುಗಳು ನಷ್ಟ ಕಂಡಿದೆ.

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಇಂದು ಬೆಳಗ್ಗೆ 219.52 ಅಂಕಗಳಷ್ಟು ಏರಿಕೆಯೊಂದಿಗೆ 54,492.24 ಅಂಕಗಳೊಂದಿಗೆ ವಹಿವಾಟು ನಡೆಸಿತ್ತು. ಇದೇ ರೀತಿ ಎನ್ ಎಸ್ ಇ ನಿಫ್ಟಿ 65.05 ಅಂಶ ಏರಿಕೆಯೊಂದಿಗೆ 16,303.25 ಅಂಕಗಳ ಮುನ್ನಡೆಯೊಂದಿಗೆ ವಹಿವಾಟು ನಡೆಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next