ಮುಂಬಯಿ: ಹಣದುಬ್ಬರ, ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ತಮ ವಹಿವಾಟು, ಸಾಲದ ಬಡ್ಡಿ ದರ ಇಳಿಕೆ ನಿರೀಕ್ಷೆಯಿಂದ ಮುಂಬಯಿ ಷೇರುಪೇಟೆ ಗುರುವಾರ 32 ಸಾವಿರ ಅಂಶಗಳನ್ನು ದಾಟಿತು. ಗುರುವಾರದ ವೇಳೆಗೆ 32,037.38ಕ್ಕೆ ಜಿಗಿಯಿತು. ಅಂದರೆ ಒಟ್ಟು 232.56 ಪಾಯಿಂಟ್‌ಗಳಷ್ಟು ಏರಿಕೆ ದಾಖಲಿಸಿದೆ. 4 ದಿನಗಳಲ್ಲಿ ಸೂಚ್ಯಂಕ 676.75 ಅಂಶ ಏರಿಕೆ ಕಂಡಿದೆ. ನಿಫ್ಟಿ ಕೂಡ 75.60 ಅಂಶಗಳಷ್ಟು ಜಿಗಿದು 9,891.70ರಷ್ಟು ಏರಿಕೆ ಕಂಡಿತು.
Advertisement