Advertisement

1,330 ಅಂಕ ಏರಿಕ ಕಂಡ ಸೆನ್ಸೆಕ್ಸ್‌: 7.3 ಲಕ್ಷ ಕೋಟಿ ರೂ. ಲಾಭ

01:12 AM Aug 17, 2024 | |

ಮುಂಬಯಿ: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಶುಕ್ರವಾರ 1,330 ಅಂಕಗಳ ಏರಿಕೆ ಕಂಡಿದ್ದು, 2 ತಿಂಗಳಿನಲ್ಲೇ ಗರಿಷ್ಠ ಏಕದಿನದ ಏರಿಕೆ ಕಂಡಿದೆ. ವಹಿವಾಟಿನ ಅಂತ್ಯಕ್ಕೆ 80,436 ಅಂಕಗಳನ್ನು ತಲುಪಿದೆ. ಮತ್ತೂಂದೆಡೆ ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ ಸಹ 397 ಅಂಕ ಏರಿಕೆ ಕಂಡಿದ್ದು, 24,541 ಅಂಕಗಳಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಅಮೆರಿಕದ ಷೇರುಪೇಟೆಯಲ್ಲಿ ಕುಸಿತ ಇದ್ದರೂ ಹೆಚ್ಚಿನ ಪ್ರಮಾಣದಲ್ಲಿ ಐಟಿ ಷೇರನ್ನು ಕೊಂಡದ್ದರಿಂದ ಈ ಏರಿಕೆಯಾ ಗಿದೆ. ಹೂಡಿಕೆದಾರರಿಗೆ 7.3 ಲಕ್ಷ ಕೋಟಿ ರೂ. ಲಾಭವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next