Advertisement

ವೈಜ್ಞಾನಿಕ ಮನೋಭಾವ ಬಿತ್ತಿ

10:57 AM Aug 28, 2017 | Team Udayavani |

ಆಳಂದ: ಶಾಲೆ, ಕಾಲೇಜು ವಿದ್ಯಾರ್ಥಿಗಳಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ವಿಜ್ಞಾನದ ತಿರುವಾದ ವೈಜ್ಞಾನಿಕ ಮನೋಭಾವ ಬಿತ್ತರಣೆ ಕಾರ್ಯವನ್ನು ಸಮಾರೋಪಾದಿಯಲ್ಲಿ ಮಾಡುವುದು ಅಗತ್ಯವಾಗಿದೆ ಎಂದು ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಶಿವಶರಣಪ್ಪ ಬಿರಾದಾರ ಹೇಳಿದರು. ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಜ್ಞಾನ ವಿಜ್ಞಾನ ಸಮಿತಿ ತಾಲೂಕು ಘಟಕ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿಯೂ ವಿಜ್ಞಾನವಿಲ್ಲದೆ ಜೀವನ ಸಾಗಿಸುವುದು ಅಸಾಧ್ಯ. ನಗರ ಸೇರಿ ಗ್ರಾಮೀಣ ಭಾಗದಲ್ಲಿ ವಿಜ್ಞಾನದ ಮಹತ್ವ ಅರಿವು ಮೂಡಿಸುವ ಮೂಲಕ ಮೂಢನಂಬಿಕೆ ತೊಡೆದು ಹಾಕುವ ಕೆಲಸಕ್ಕೆ ಕಲಿತವರು ಶ್ರಮಿಸಬೇಕು ಎಂದರು. ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಅಧ್ಯಕ್ಷ ಶಿವಶರಣಪ್ಪ ಮುಳೆಗಾಂವ ಮಾತನಾಡಿ, ಸಮಿತಿ ಉದ್ದೇಶ ಈಡೇರಲು ಹೆಚ್ಚಿನ ಘಟಕಗಳನ್ನು ಸ್ಥಾಪಿಸುವ ಮೂಲಕ ಕಾರ್ಯ ಪ್ರವರ್ತರಾಗಬೇಕು ಎಂದು ಸಲಹೆ ನೀಡಿದರು. ರಾಜ್ಯ ಸಮಿತಿ ಸದಸ್ಯ ಪ್ರಭಾಕರ ಸಲಗರೆ, ಸಮಿತಿ ತಾಲೂಕು ಘಟಕದ ಅಧ್ಯಕ್ಷ ಅಶೋಕ ರೆಡ್ಡಿ, ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಪ್ರಾಚಾರ್ಯ ಬಾಬುರಾವ್‌ ಚವ್ಹಾಣ ಮಾತನಾಡಿದರು. ಶ್ರೀಶೈಲ ಮಾಡಿಯಳ ಸಮಿತಿಯ ಚಟುವಟಿಕೆಗಳ ವಾರ್ಷಿಕ ವರದಿ ಮಂಡಿಸಿದರು. ನಿರಂತರವಾಗಿ ಜ್ಞಾನ ವಿಜ್ಞಾನ ಸಮಿತಿಯಿಂದ ಚಟುವಟಿಕೆ ಕೈಗೊಳ್ಳುವುದು, ಶಾಲೆ-ಕಾಲೇಜುಗಳಲ್ಲಿ ವಿಜ್ಞಾನ ಘಟಕ ಸ್ಥಾಪನೆ ಮಾಡುವುದು ಹಾಗೂ ವಿಜ್ಞಾನ ಶಿಕ್ಷಕರೊಳಗೊಂಡ ಸರಣಿ ಉಪನ್ಯಾಸ ಕಾರ್ಯಕ್ರಮ, ಕಾರ್ಯಾಗಾರ ಹಮ್ಮಿಕೊಳ್ಳಲು ನಿರ್ಣಯ ಕೈಗೊಳ್ಳಲಾಯಿತು. ಎಂಎಆರ್‌ಜಿ ಕಾಲೇಜು ಪ್ರಾಚಾರ್ಯ ಡಾ| ಅಪ್ಪಸಾಬ ಬಿರಾದಾರ, ರಾಜಕುಮಾರ ಸುತಾರ, ಶಿಕ್ಷಕ ಧರ್ಮರಾಯ ಕೊರಳ್ಳಿ, ಅನಿಲ ಗೊಳೆ, ಉಪನ್ಯಾಸಕ ಸಂತೋಷ ಹೂಗಾರ ಇತರರು ಹಾಜರಿದ್ದರು. ಅನಿಲ ಯಲಶೆಟ್ಟಿ ಸ್ವಾಗತಿಸಿದರು. ಗಜಾನಂದ ಕುಂಬಾರ ನಿರೂಪಿಸಿದರು. ಸಮಿತಿ ತಾಲೂಕು ಕಾರ್ಯದರ್ಶಿ ಕಲ್ಯಾಣಿ ತುಕಾಣಿ ವಂದಿಸಿದ.

Advertisement
Advertisement

Udayavani is now on Telegram. Click here to join our channel and stay updated with the latest news.

Next