Advertisement

All-time high; ಸೆನ್ಸೆಕ್ಸ್‌, ನಿಫ್ಟಿ ಸಾರ್ವಕಾಲಿಕ ಗರಿಷ್ಠ; ಕಾರಣ?: 4 ಲಕ್ಷ ಕೋಟಿ ಲಾಭ

12:03 AM Mar 02, 2024 | Team Udayavani |

ನವದೆಹಲಿ: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಹಾಗೂ ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ ಶುಕ್ರವಾರ ಸಾರ್ವಕಾಲಿಕ ಗರಿಷ್ಠಕ್ಕೆ ಏರಿಕೆ ಕಂಡಿವೆ. ವಾರದ ವಹಿವಾಟಿನ ಕೊನೆಯ ದಿನ ಸೆನ್ಸೆಕ್ಸ್‌ 1245 ಅಂಕಗಳ ಏರಿಕೆಯೊಂದಿಗೆ 73745 ಅಂಕಕ್ಕೆ ತಲುಪಿದ್ದು, ನಿಫ್ಟಿ 355 ಅಂಕಗಳ ಏರಿಕೆ ಯೊಂದಿಗೆ 22,338 ಅಂಕಗಳಲ್ಲಿ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ.

Advertisement

ಷೇರುಪೇಟೆ ಏರಿಕೆಯಿಂದ ಹೂಡಿಕೆದಾರರಿಗೆ ಬರೋಬ್ಬರಿ 4.29 ಲಕ್ಷ ಕೋಟಿ ರೂ. ಲಾಭವಾಗಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಹೂಡಿಕೆ ಮತ್ತು ವಾಹನಗಳ ಮಾರಾಟದಲ್ಲಿ ಉಂಟಾದ ಹೆಚ್ಚಳದಿಂದ ಷೇರುಪೇಟೆ ಏರಿಕೆ ಕಂಡಿದೆ. ಟಾಟಾ ಸ್ಟೀಲ್‌ನ ಷೇರುಗಳು ಅತಿಹೆಚ್ಚು ಶೇ.6ರಷ್ಟು ಏರಿಕೆ ಕಂಡಿವೆ.

ಏರಿಕೆಗೆ ಕಾರಣ?
ನಿರೀಕ್ಷೆಗೂ ಮೀರಿ ಜಿಡಿಪಿ ಪ್ರಗತಿ ದರ ಹೆಚ್ಚಳ
ಜಾಗತಿಕ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಬೆಳವಣಿಗೆ
ವಿದೇಶಿ ನೇರ ಬಂಡವಾಳದ ಹರಿವು ಹೆಚ್ಚಳ
ಅಮೆರಿಕದ ಫೆಡರಲ್‌ ರಿಸರ್ವ್‌ನಿಂದ ಬಡ್ಡಿ ದರ ಕಡಿತದ ಸುಳಿವು

Advertisement

Udayavani is now on Telegram. Click here to join our channel and stay updated with the latest news.

Next