Advertisement
ಇದು ಆಕ್ಲೆಂಡ್‌ನ “ಈಡನ್ ಪಾರ್ಕ್’ ಕ್ರೀಡಾಂಗಣದಲ್ಲಿ ಶುಕ್ರವಾರದ ಟಿ20 ಪಂದ್ಯದ ವೇಳೆ ನಡೆದ ಘಟನೆ. ಹೌದು, ಕಿವೀಸ್-ಆಸೀಸ್ ನಡುವಿನ ತ್ರಿಕೋನ ಸರಣಿಯ ಪಂದ್ಯ ವೀಕ್ಷಿಸಲು ಮಿಚೆಲ್ ಗ್ರಿಮ್ಸ್‌ಟೋನ್ ತನ್ನ ಸ್ನೇಹಿತರೊಂದಿಗೆ ಸ್ಟೇಡಿಯಂಗೆ ಆಗಮಿಸಿದ್ದ. ಪಂದ್ಯದ ವೇಳೆ ಕಿವೀಸ್ ಬ್ಯಾಟ್ಸ್‌ಮನ್ ರಾಸ್ ಟಯ್ಲರ್ ಸ್ಕ್ವೇರ್ ಲೆಗ್ ಮೂಲಕ ಚೆಂಡನ್ನು ಸಿಕ್ಸರ್‌ಗೆ ಬಾರಿಸಿದರು. ಚೆಂಡು ಪ್ರೇಕ್ಷಕರ ಗ್ಯಾಲರಿ ಬಳಿ ನುಗ್ಗಿ ಬಂತು. ಈ ವೇಳೆ ಮಿಚೆಲ್ ಒಂದೇ ಕೈನಲ್ಲಿ ಕ್ಯಾಚ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಕೂಡಲೇ ಹತ್ತಿರವಿದ್ದ ಕ್ರಿಕೆಟ್ ಅಭಿಮಾನಿಗಳೆಲ್ಲ ಮಿಚೆಲ್‌ಗೆ ಅಭಿನಂದನೆ ಸಲ್ಲಿಸಿದರು. ಬಳಿಕ ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ಮಿಚೆಲ್‌ಗೆ 24 ಲಕ್ಷ ರೂ. ನೀಡಿತು.
Advertisement
ಕ್ಯಾಚ್ ಪಡೆದು ಲಕ್ಷಾಧಿಪತಿಯಾದ ವೀಕ್ಷಕ!
06:40 AM Feb 18, 2018 | |
Advertisement
Udayavani is now on Telegram. Click here to join our channel and stay updated with the latest news.