Advertisement

ಶಾಲಾ ಅಭಿವೃದ್ಧಿಗಾಗಿ ಪಣತೊಟ್ಟ ಹಿರಿಯ ವಿದ್ಯಾರ್ಥಿಗಳು

01:00 AM Feb 19, 2019 | Harsha Rao |

ಕಾರ್ಕಳ: ಒಂದು ಕಾಲದಲ್ಲಿ ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳ ಕಲರವ. ಇಂದು ಕೇವಲ 50 ಮಂದಿ ವಿದ್ಯಾರ್ಥಿಗಳ ಕಲಿಕೆ. ಇದು ಕಾರ್ಕಳ ಪೇಟೆಯಲ್ಲಿರುವ ಪುರಾತನ ಬೊರ್ಡ್‌ ಹೈಸ್ಕೂಲ್‌ನ ಪರಿಸ್ಥಿತಿ. ಅಂದು ವಿದ್ಯಾರ್ಥಿಗಳಿಂದ ತುಂಬಿ ತುಳುಕುತಿದ್ದ ಶಾಲೆಯೀಗ ವಿದ್ಯಾರ್ಥಿಗಳ ಸಂಖ್ಯೆಯಿಲ್ಲದೇ ಸೊರಗುತ್ತಿದೆ. ಪುರಾತನ, ಉತ್ತಮ ಶಾಲೆಯೆಂಬ ಹಿರಿಮೆ-ಗರಿಮೆ ಹೊಂದಿದ್ದ ಶಾಲೆಯನ್ನು ಪುನಃ ಉಚ್ಛಾ†ಯ ಸ್ಥಿತಿಗೆ ತರಬೇಕೆನ್ನುವ ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿಗಳು ನಾನಾ ಯೋಜನೆಗಳನ್ನು ರೂಪಿಸಿದ್ದು, ಖಾಸಗಿ ಶಾಲೆ ಮಾದರಿಯÇÉೇ ಅನುಷ್ಠಾನಗೊಳಿಸಲು ಪಣತೊಟ್ಟಿ¨ªಾರೆ.

Advertisement

1888ರಲ್ಲಿ ಸ್ಥಾಪನೆಯಾದ ಶಾಲೆ
130 ವರ್ಷಗಳ ಹಿಂದೆ ಸ್ಥಾಪನೆಯಾದ, ರಾಷ್ಟ್ರ ಮಟ್ಟದ ನಾಯಕರನ್ನು ಒದಗಿಸಿಕೊಟ್ಟ ಶಾಲೆಯೊಂದು ಖಾಸಗಿ ಶಾಲೆಯ ಪ್ರಭಾವ ಮತ್ತು ಸರಕಾರಿ ಶಾಲೆಯೆಂಬ ಅನಾಸಕ್ತಿಯಿಂದ ಅಲಕ್ಷÂಕ್ಕೀಡಾಗುತ್ತಾ ಬಂದಿರುವುದು ಖೇದಕರ ಸಂಗತಿ.

ಶಾಲೆಯ ದುಃಸ್ಥಿತಿಯನ್ನು ಮನಗಂಡ ಇಲ್ಲಿನ ಹಿರಿಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಹೊಸ ಮೆರುಗು ನೀಡಬೇಕೆನ್ನುವ ನಿಟ್ಟಿನಲ್ಲಿ ಸರ್ವ ಪ್ರಯತ್ನ ಮಾಡುತ್ತಿದ್ದು, ಅವರ ಈ ಕಾರ್ಯಕ್ಕೆ  ಸರ್ವರ ಸಹಕಾರವೂ ದೊರೆಯುತ್ತಿದೆ.

ಶಾಲೆಯಲ್ಲಿ ಕಲಿತ ಪ್ರಖ್ಯಾತರು
ಮಾಜಿ ಲೋಕಸಭಾ ಸ್ಪೀಕರ್‌, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಜ| ಕೆ.ಎಸ್‌. ಹೆಗ್ಡೆ, ನಿವೃತ್ತ ಏರ್‌ ವೈಸ್‌ ಮಾರ್ಷಲ್‌ ರಮೇಶ್‌ ಕಾರ್ಣಿಕ್‌, ಇಸ್ರೋ ವಿಜ್ಞಾನಿ, ಡಾ| ಎ.ಪಿ.ಜೆ. ಅಬ್ದುಲ್‌ ಕಲಾಂ ಅವರ ನಿಕಟವರ್ತಿ ಇಡ್ಯ ಜನಾರ್ದನ್‌, ಪಕ್ಷಿ ತಜ್ಞ, ಸಲಿಂ ಆಲಿಯ ಸಹವರ್ತಿ ಎಸ್‌.ಎ. ಹುಸೈನ್‌, ಲೇಖಕ ಡಾ.ಕೆ. ಪ್ರಭಾಕರ್‌ ಆಚಾರ್‌ ಅಲ್ಲದೇ ನಾನಾ ಕ್ಷೇತ್ರದಲ್ಲಿ ಅಗ್ರಗಣ್ಯರಾಗಿ ಗುರುತಿಸಿಕೊಂಡು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿನುಗಿದ ಅನೇಕರು ಕಲಿತ ಹೆಗ್ಗಳಿಕೆ ಈ ಶಾಲೆಯದ್ದು.

ಹೊಸ ಮೆರುಗು
ವಿದ್ಯಾರ್ಥಿಗಳ ಸಂಖ್ಯೆ ವೃದ್ಧಿಸಿ, ಶಾಲೆ ಗತವೈಭವಕ್ಕೆ ಮರಳಬೇಕೆನ್ನುವ ನಿಟ್ಟಿನಲ್ಲಿ ನಾನಾ ಯೋಜನೆಗಳನ್ನು ಹಿರಿಯ ವಿದ್ಯಾರ್ಥಿಗಳು ಕೈಗೊಂಡಿ¨ªಾರೆ. ಎಸ್‌ಡಿಎಂಸಿ, ಶಾಲಾ ಶಿಕ್ಷಕರು ಹಾಗೂ ಊರವರು ಈ ಮಹತ್‌ ಕಾರ್ಯಕ್ಕೆ ಸಾಥ್‌ ನೀಡುತ್ತಿದ್ದು, ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ಜ್ಞಾನ ನೀಡುವ ಸದುದ್ದೇಶದೊಂದಿಗೆ ಕಂಪ್ಯೂಟರ್‌ ಲ್ಯಾಬ್‌, ಆಧುನೀಕರಣಗೊಂಡ ವಿಜ್ಞಾನ ಪ್ರಯೋಗಾಲಯ, ಕನ್ನಡ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ, ಗ್ರಂಥಾಲಯಕ್ಕೆ ಬೇಕಾದ ಪುಸ್ತಕ,  ಶಾಲಾ ಆಟದ ಮೈದಾನವನ್ನು ಸುಸಜ್ಜಿತಗೊಳಿಸಲಾಗಿದೆ.

Advertisement

ರೋಟರಿ ಕ್ಲಬ್‌ ಕಾರ್ಕಳ ಇದರ ವತಿಯಿಂದ ಪೀಠೊಪಕರಣ, ಸೆಲ್ಕೋ ಸಂಸ್ಥೆ ಸ್ಮಾರ್ಟ್‌ ಕ್ಲಾಸ್‌ ಅನ್ನು ಕೊಡುಗೆಯಾಗಿ ನೀಡಿದೆ. ಇದರ ಜೊತೆಗೆ ಸರಕಾರದ ಅನುದಾನ 3 ಲಕ್ಷ ರೂ. ವೆಚ್ಚದಲ್ಲಿ ಶಾಲೆ ಮೇಲ್ಚಾವಣಿ ಕಾಮಗಾರಿ ನಡೆಸಲಾಗಿದೆ.

ಆಂಗ್ಲ ಮಾಧ್ಯಮ
ವರ್ತಮಾನದ ಪರಿಸ್ಥಿತಿಗೆ ಅನುಗುಣವಾಗಿ ಇದೀಗ ಈ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿಯನ್ನೂ ತೆರೆಯಲಾಗಿದೆ. ಇಂಗ್ಲಿಷ್‌ ಜ್ಞಾನ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ತಯಾರಾಗುವ ಸಲುವಾಗಿ ವಿವಿಧ ರೀತಿಯ ತರಗತಿಗಳನ್ನು ನಡೆಸುವ ಚಿಂತನೆ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ್ದು. ಎಸ್‌ಡಿಎಂಸಿ ಅಧ್ಯಕ್ಷ ಸುರೇಂದ್ರ ನಾಯಕ್‌, ಮುಖ್ಯಶಿಕ್ಷಕ ಮುರಳೀಧರ ಪ್ರಭು ಅವರ ತಂಡವೂ ಕ್ರೀಯಾಶೀಲವಾಗಿ ತೊಡಗಿಸಿಕೊಂಡಿದೆ.
ಶ್ರೀನಿವಾಸ ಕಿಣಿ, ಎಸ್‌.ಆರ್‌. ಆಚಾರ್‌, ರೆಂಜಾಳ ಹರಿ ಶೆಣೈ, ಶ್ಯಾಂರಾಯ್‌ ಶೆಟ್ಟಿ ಮೊದಲಾದವರು ಈ ಶಾಲೆಯ ಮುಖ್ಯಶಿಕ್ಷಕರಾಗಿ ಹು¨ªೆಗೆ ಘನತೆ, ಗೌರವ ತಂದುಕೊಟ್ಟಿರುವುದು ಮಾತ್ರವಲ್ಲೇ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಮೇಲ್ತಂಕಿ ಹಾಕಿಕೊಟ್ಟವರು ಎಂದು ಹಿರಿಯ ವಿದ್ಯಾರ್ಥಿ ಅರುಣ್‌ ಪುರಾಣಿಕ್‌ ನೆನಪಿಸುತ್ತಾರೆ.

ಕಲಿಕೆಗೆ ಪ್ರಥಮ ಪ್ರಾಶಸ್ತ್ಯ
ಇಂಗ್ಲಿಷ್‌ ಅನ್ನುವುದು ಕೇವಲ ಒಂದು ಭಾಷೆಯಾಗಿರಬೇಕೇ ಹೊರತು ಮಾಧ್ಯಮವಾಗಬಾರದು. ಬೋಧನೆಗಾಗಿಯೇ ಶಿಕ್ಷಕರು ತಮ್ಮ ಹೆಚ್ಚಿನ ಸಮಯ ವಿನಿಯೋಗಿಸಿದ್ದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲು ಸಾಧ್ಯ. ಸರಕಾರಿ ಶಾಲೆಯಲ್ಲೂ ಉತ್ತಮ ಇಂಗ್ಲೀಷ್‌ ಶಿಕ್ಷಕರಿದ್ದಲ್ಲಿ ಭಾಷಾ ಸಮಸ್ಯೆ ತಲೆದೋರದು.
-ಕೆ. ರಮೇಶ್‌ ಕಾರ್ಣಿಕ್‌, ನಿವೃತ್ತ ಏರ್‌ ವೈಸ್‌ ಮಾರ್ಷಲ್‌

ವಿಶೇಷ  ತರಬೇತಿಯ ಅಗತ್ಯ
ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಕ್ಕಳು ಗುಣಮಟ್ಟದ ಶಿಕ್ಷಣವನ್ನು ನಾವು ಕಲಿತ ಶಾಲೆಯಲ್ಲಿ ಪಡೆಯಬೇಕೆನ್ನುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳಾಗುತ್ತಿವೆ. ಸಂಪನ್ಮೂಲ ವ್ಯಕ್ತಿಗಳಿಂದ ಇಲ್ಲಿನ ಶಿಕ್ಷಕರಿಗೆ ಪೂರಕ ತರಬೇತಿ ನೀಡಿ, ಬಳಿಕ ವಿದ್ಯಾರ್ಥಿಗಳಿಗೆ ಬೋಧಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
– ಇಡ್ಯ ಜನಾರ್ದನ್‌, ನಿವೃತ್ತ ಇಸ್ರೋ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಕಲಾಂ ಅವರ ನಿಕಟವರ್ತಿ

– ರಾಮಚಂದ್ರ ಬರೆಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next