Advertisement

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

11:20 AM Apr 20, 2024 | Team Udayavani |

ಕಾರ್ಕಳ: ಕಾರ್ಕಳದಿಂದ ಹೆಬ್ರಿಯವರೆಗೆ ಸಾವಿರಾರು ವಾಹನಗಳ ಸರದಿಯ ಪಯಣ, ರಸ್ತೆಯ ಇಕ್ಕೆಲಗಳಲ್ಲಿ ಕಾಂಗ್ರೆಸ್‌ ಅಭಿಮಾನಿಗಳ ಹರಕೆ ಹಾರೈಕೆ, ತೆರೆದ ಜೀಪಿನಲ್ಲಿ ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಅವರ ಮೆರವಣಿಗೆ, ಸಾಗುವ ಹಾದಿಯಲ್ಲಿ ಸಾವಿರಾರು ಜನರಿಂದ ಕೈ ಪಕ್ಷಕ್ಕೆ ಜೈಕಾರ, ಇದು ವಿಜಯೋತ್ಸವವಲ್ಲ, ಆದರೆ ವಿಜಯಕ್ಕಾಗಿ ಉತ್ಸವ. ಇದು ಬದಲಾವಣೆ ದರ್ಶನ, ಕಾಂಗ್ರೆಸ್‌ನ ಶಕ್ತಿ ಪ್ರದರ್ಶನ.

Advertisement

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ ಪ್ರಚಾರ ಅತ್ಯಂತ ಬಿರುಸಿನಿಂದ ಸಾಗುತ್ತಿದೆ. ಶುಕ್ರವಾರ ಸಂಜೆ ಕಾರ್ಕಳದಿಂದ ಹೆಬ್ರಿಗೆ ಹೊರಟ ಕಾರು ಮತ್ತು ಬೈಕ್‌ಗಳ ಮೆರವಣಿಗೆ ಜನ ಬದಲಾವಣೆ ಬಯಸಿದ್ದಾರೆ ಎಂಬುದಕ್ಕೆ ಸಾಕ್ಷಿಯಾಯಿತು.

ಮಾಜಿ ಸಚಿವ ಅಭಯಚಂದ್ರ ಜೈನ್‌ ಅವರು ರ್‍ಯಾಲಿಗೆ ಚಾಲನೆ ನೀಡಿ ಶುಭ ಹಾರೈಸಿದರು. ಕಾಂಗ್ರೆಸ್‌ ಮುಖಂಡ ಮುನಿಯಾಲ ಉದಯ ಕುಮಾರ್‌ ಶೆಟ್ಟಿ, “ಇದೇ ಸ್ಫೂರ್ತಿ ಮತದಾನದ ದಿನದವರೆಗೂ ಇರಲಿ ಎಂದು ನೆರೆದ ಕಾಂಗ್ರೆಸ್‌ ಅಭಿಮಾನಿಗಳಿಗೆ ಶುಭ ಹಾರೈಸಿದರು.

ನಮ್ಮದು ಪಕ್ಷ ಬಿಜೆಪಿ, ಓಟು ಮಾತ್ರ ಜೆಪಿಗೆ ಮೆರವಣಿಗೆಯಲ್ಲಿ ಸಾಗುತ್ತಿರುವಾಗ ಕೇಳಿ ಬಂದ ಮಾತು, “ನಮ್ಮದು ಪಕ್ಷ ಬಿಜೆಪಿ, ಓಟು ಮಾತ್ರ ಜೆಪಿಗೆ ಎಂದು ಕೂಗುತ್ತ ಸಾಗುವುದನ್ನು ಕಂಡಾಗ ಜನ ಪಕ್ಷ ನೋಡಿ ಅಲ್ಲ, ವ್ಯಕ್ತಿ ನೋಡಿ ಮತ ಚಲಾಯಿಸುತ್ತಿದ್ದಾರೆ ಎಂಬುದು ಸ್ಪಷ್ಟ. ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಕೊಟ್ಟ ಮಾತಿನಂತೆ ನಡೆದುಕೊಂಡು ಎಲ್ಲ ಐದೂ ಗ್ಯಾರೆಂಟಿಗಳನ್ನು ಜನರಿಗೆ ನೀಡಿದೆ. ಇದರಿಂದಾಗಿ ಜನರಿಗೆ ಕಾಂಗ್ರೆಸ್‌ ಪಕ್ಷದ ಮೇಲೆ ಮತ್ತೆ ಭರವಸೆ ಮೂಡಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಲಿದೆ ಎಂಬ ಆತ್ಮವಿಶ್ವಾಸ ಮೂಡಿದೆ.

Advertisement

ಜಯಪ್ರಕಾಶ್‌ ಹೆಗ್ಡೆ ಅಧಿಕಾರದಲ್ಲಿರಲಿ ಇಲ್ಲದಿರಲಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನ ಮಾತನಾಡುತ್ತಿದ್ದಾರೆ. “ನಮ್ಮ ಮತ ನಿಮಗೇ” ಎಂದು ಮುಕ್ತ ಮನಸ್ಸಿನಿಂದ ಹೇಳುತ್ತಿದ್ದಾರೆ. ಒಬ್ಬ ಜನಪ್ರತಿನಿಧಿ ಜನಮಾನಸದಲ್ಲಿ ಉಳಿಯುವುದು ಅವರು ಮಾಡಿದ ಅಭಿವೃದ್ಧಿ ಕಾರ್ಯಗಳಿಂದ. ಜನಪ್ರತಿನಿಧಿ ಎನಿಸಿಕೊಂಡವ ಜನರ ನಡುವೆ ಇದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸಿದರೆ ಆತ ಯಾವುದೇ ಪಕ್ಷದಲ್ಲಿದ್ದರೂ ಜನ ಬೆಂಬಲಿಸುತ್ತಾರೆ ಎಂಬುದಕ್ಕೆ ಜಯಪ್ರಕಾಶ್‌ ಹೆಗ್ಡೆ ಉತ್ತಮ ನಿದರ್ಶನ.

ಹೆಗ್ಡೆ ಮತ ಯಾಚನೆ ಮಾಡುವಾಗಲೂ ಹಾಗೆ, ತನ್ನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಾರೆಯೇ ಹೊರತು ಜಾತಿ, ಧರ್ಮಗಳ ಬಗ್ಗೆ ಮಾತನಾಡುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿಸ್ಪರ್ಧಿಯನ್ನು ಟೀಕಿಸುವ ಕೆಲಸವನ್ನೂ ಜೆಪಿ ಮಾಡುತ್ತಿಲ್ಲ. ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗೆ ಪಕ್ಷದ ಪ್ರಣಾಳಿಕೆಯ ಜೊತೆಯಲ್ಲೇ ತನ್ನದೇ ಆದ ಪ್ರಣಾಳಿಕೆಯನ್ನು ರೂಪಿಸಿಕೊಂಡು ಗೆದ್ದು ಬಂದರೆ ಅವೆಲ್ಲವನ್ನೂ ಕಾನೂನಿನ ಚೌಕಟ್ಟಿನಲ್ಲಿ ಈಡೇರಿಸುವುದಾಗಿ ಜನರಲ್ಲಿ ಭರವಸೆ ಮೂಡಿಸಿದ್ದಾರೆ. ಯಾರದ್ದೋ ಅಲೆಗೆ ಸಿಲುಕಿ ತೇಲಿ ಹೋಗುವುದಕ್ಕಿಂತ ತಾನು ನಿಂತ ನೆಲದಲ್ಲೇ ಇದ್ದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಜನಪ್ರತಿನಿಧಿಯನ್ನು ಜನ ಬಯಸುತ್ತಿದ್ದಾರೆಂಬುದು ಸ್ಪಷ್ಟ.

Advertisement

Udayavani is now on Telegram. Click here to join our channel and stay updated with the latest news.

Next