ಬೆಂಗಳೂರು: ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ನೀಡುವ 2018ನೇ ಸಾಲಿನ ಸರ್ ಎಂ.ವಿಶ್ವೇಶ್ವರಯ್ಯ ಹಿರಿಯ ವಿಜ್ಞಾನಿ ಪ್ರಶಸ್ತಿಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ಗೌರವ ಪ್ರಾಧ್ಯಾಪಕ ಪ್ರೊ.ಎಸ್.ರಾಮಶೇಷ ಆಯ್ಕೆಯಾಗಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸಾಧನೆಗಾಗಿ ಈ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿ 2 ಲಕ್ಷ ರೂ.ನಗದು ಮತ್ತು ನೆನಪಿನ ಕಾಣಿಕೆ ಒಳಗೊಂಡಿದೆ. ಹಾಗೆಯೇ “ಡಾ.ರಾಜಾರಾಮಣ್ಣ ವಿಜ್ಞಾನಿ ಪ್ರಶಸ್ತಿ’ಗೆ ಸೆಂಟರ್ ಫಾರ್ ನ್ಯಾನೊ ಅಂಡ್ ಸಾಫ್ಟ್ ಮ್ಯಾಟರ್ ಸೈನ್ಸ್‌ನ ನಿರ್ದೇ ಶಕ ಪ್ರೊ.ಜಿ.ಯು. ಕುಲಕರ್ಣಿ ಹಾಗೂ ಬೆಂಗ ಳೂರಿನ ರಾಷ್ಟ್ರೀಯ ಮಾನ ಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ ಪ್ರಾಧ್ಯಾ ಪಕಿ ಡಾ.ಪ್ರತಿಮಾ ಮೂರ್ತಿ ಆಯ್ಕೆ ಯಾಗಿದ್ದಾರೆ. ಈ ಪ್ರಶಸ್ತಿ 1.5 ಲಕ್ಷ ರೂ.ನಗದು, ಸ್ಮರಣಿಕೆ ಒಳಗೊಂಡಿದೆ.
“ಸರ್.ಸಿ.ವಿ.ರಾಮನ್ ಯುವ ವಿಜ್ಞಾನಿ ಪ್ರಶಸ್ತಿ’ಗೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‌ನ ಪ್ರಾಧ್ಯಾಪಕಿ ಪ್ರೊ.ಅನ್ನಪೂರ್ಣಿ ಸುಬ್ರ ಮಣ್ಯಮ್, ಜವಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸಡ್ ಸೈಂಟಿಫಿಕ್ ರಿಸರ್ಚ್‌ನ ಸಹ ಪ್ರಾಧ್ಯಾಪಕಿ ಡಾ.ರಂಜನಿ ವಿಶ್ವನಾಥ್, ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಎಂ.ಎಂ.ಶ್ರೀನಿವಾಸ್ ಭರತ್, ಬೆಂಗಳೂರಿನ ನ್ಯಾಷ ನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸ್‌ನ ಸಹ ಪ್ರಾಧ್ಯಾಪಕ ಡಾ.ಪಡು ಬಿದರಿ ವಿ.ಶಿವಪ್ರಸಾದ್ ಆಯ್ಕೆಯಾಗಿದ್ದಾರೆ.
“ಪ್ರೊ.ಸತೀಶ್ ಧವನ್ ಯುವ ಎಂಜಿನಿಯರಿಂಗ್ ಪ್ರಶಸ್ತಿ’ಗೆ ಭಾರತೀಯ ವಿಜ್ಞಾನ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ.ಶಯನ್ ಶ್ರೀನಿವಾಸ ಗರಣಿ, ಡಾ.ಪ್ರಮೋದ್, ಎಚ್‌ಇಎಲ್‌ನ ಅಡಿಶನಲ್ ಜನರಲ್ ಮ್ಯಾನೇಜರ್ ಡಾ.ಸಿ.ಡಿ.ಮಧುಸೂದನ ಮತ್ತು ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯ ಡಾ.ಅಮಿ ತಾಭ್ ಸರಾಫ್ ಆಯ್ಕೆ ಆಗಿದ್ದಾರೆ.
ಹಾಗೆಯೇ, “ಡಾ.ಕಲ್ಪನಾ ಚಾವ್ಲಾ ಮಹಿಳಾ ಯುವ ವಿಜ್ಞಾನ ಪ್ರಶಸ್ತಿ’ಗೆ ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಪ್ರೊ.ಗಾಯತ್ರಿ ದೇವರಾಜ ಆಯ್ಕೆಯಾಗಿದ್ದು, ಪ್ರಶಸ್ತಿ 1 ಲಕ್ಷ ರೂ.ನಗದು ಮತ್ತು ಪ್ರಶಸ್ತಿ ಒಳಗೊಂಡಿದೆ. ಅ.22 ರಂದು ಸಂಜೆ 4 ಗಂಟೆಗೆ ಇಂಡಿ ಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್.ಯಡಿಯೂಪ್ಪ ಅವರು ಸಾಧ ಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.