Advertisement

ಹಿರಿಯ ಛಾಯಾಚಿತ್ರಗ್ರಾಹಕ ಪೆರುಮಾಳ್‌ ಇನ್ನಿಲ್ಲ

11:52 AM Feb 09, 2017 | Team Udayavani |

ಬೆಂಗಳೂರು: ಅಂತಾರಾಷ್ಟ್ರೀಯ ಖ್ಯಾತಿಯ, ಪ್ರಸಿದ್ಧ ವನ್ಯಜೀವಿ ಛಾಯಾಚಿತ್ರಗ್ರಾಹಕ ಟಿ.ಎನ್‌. ಎ. ಪೆರುಮಾಳ್‌ ಅವರು ಬುಧವಾರ ನಿಧನ ಹೊಂದಿದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಸುಮಾರು ಐವತ್ತು ವರ್ಷಗಳಿಂದ ದೇಶ ವಿದೇಶಗಳ ವನ್ಯಲೋಕವನ್ನು ಕ್ಯಾಮೆರಾ ಕಣ್ಣಿನ ಮೂಲಕ ಜಗತ್ತಿಗೆ ತೆರೆದಿಟ್ಟ ಖ್ಯಾತಿ ಅವರದ್ದು.

Advertisement

ತಂಜಾವೂರು ನಟೇಶಾಚಾರ್ಯ ಅಯ್ಯಂ ಪೆರುಮಾಳ್‌, ಕಪ್ಪು ಬಿಳುಪಿನ ಛಾಯಾಚಿತ್ರ, ವರ್ಣ ಛಾಯಾಚಿತ್ರದ ಮೂಲಕ ವನ್ಯ ಜೀವಿಗಳ ಬದುಕನ್ನು ತೋರಿಸಿಕೊಟ್ಟಿದ್ದಾರೆ. 1955ರಿಂದ ಛಾಯಾಚಿತ್ರ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದ ಪೆರುಮಾಳ್‌ ಅವರು “ನೇಚರ್‌ ಫೋಟೋಗ್ರಫಿ ವಲ್ಡ್‌ ಕಪ್‌’ನಲ್ಲಿ ಸತತ ನಾಲ್ಕು ಬಾರಿ ಭಾರತದ ತಂಡವನ್ನು ಮುನ್ನಡೆಸಿದ್ದಲ್ಲದೇ ಪ್ರಶಸ್ತಿ ಗೆದ್ದುಕೊಟ್ಟಿದ್ದರು.

ಪೆರುಮಾಳ್‌ ಅವರು ಕ್ಲಿಕ್ಕಿಸಿದ 1500ಕ್ಕೂ ಹೆಚ್ಚು ಛಾಯಾಚಿತ್ರಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರದರ್ಶನಗಳಲ್ಲಿ ಮನ್ನಣೆ ಪಡೆದಿದ್ದು 200ಕ್ಕೂ ಹೆಚ್ಚು ಪುರಸ್ಕಾರಗಳನ್ನು ಗಳಿಸಿವೆ. ಕರ್ನಾಟಕ ಲಲಿತ ಕಲಾ ಅಕಾಡೆಮಿ ಪುರಸ್ಕಾರ, ಭಾರತೀಯ ಪತ್ರಿಕಾ ಮಂಡಳಿ ಪ್ರಶಸ್ತಿ, ಇಂಡಿಯನ್‌ ಇಂಟರ್‌ನ್ಯಾಷನಲ್‌ ಫೋಟೋಗ್ರಾಫಿಕ್‌ ಕೌನ್ಸಿಲ್‌ ಗೌರವ ಫೆಲೋಶಿಪ್‌, ಬ್ರಿಟನ್‌ನ ರಾಯಲ್‌ ಫೋಟೋಗ್ರಾಫಿಕ್‌ ಸೊಸೈಟಿ ಫೆಲೋಶಿಪ್‌ ಸೇರಿ ಹಲವು ಸಂಮಾನಗಳಿಗೆ ಭಾಜನರಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next