ಮಲ್ಪೆ: ಮೂವತ್ತು ವರ್ಷದ ಹಿಂದೆ ಕಿದಿಯೂರು ವಿದ್ಯಾಸಮುದ್ರ ತೀರ್ಥ ಪ್ರೌಢಶಾಲಾ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಕೂಟವನ್ನು ಆಯೋಜಿಸಿದ್ದ ಕಿದಿಯೂರು ನ್ಪೋರ್ಟ್ಸ್ ಕ್ಲಬ್ ಆ ಸವಿ ನೆನಪಿನಲ್ಲಿ ಮತ್ತೆ ಒಗ್ಗೂಡಿಕೊಂಡು ಕ್ರಿಕೆಟ್ ಪಂದ್ಯಾಟವನ್ನು ಏರ್ಪಡಿಸಿ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಯಿತು.
ಅಂದಿನ ದಿನದಲ್ಲಿ ಅತಿಥಿಗಳಾಗಿದ್ದವರು, ತೀರ್ಪುಗಾರರು ವೀಕ್ಷಕ ವಿವರಣೆಗಾರರು ಇಂದಿನ ಪಂದ್ಯದಲ್ಲೂ ಪಾಲ್ಗೊಂಡಿರುವುದು ವಿಶೇಷವಾಗಿತ್ತು.
ರವಿವಾರ ಅದೇ ಶಾಲಾ ಮೈದಾನದಲ್ಲಿ ಪಂದ್ಯಾಟ ಜರಗಿದ್ದು ಮುಖ್ಯ ಅತಿಥಿಗಳಾಗಿ ಮತೊÕéàದ್ಯಮಿ ಹಿರಿಯಣ್ಣ ಟಿ. ಕಿದಿಯೂರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತಾಯಿ ನಾಡಿನ ಅಭಿಮಾನ ಮತ್ತು ಒಗ್ಗಟ್ಟಿನ ದ್ಯೋತಕವಾಗಿ ಈ ಪಂದ್ಯಾಟ ಜರಗುತ್ತಿರುವುದು ಶ್ಲಾಘನೀಯ.
ಕಿದಿಯೂರಿನಲ್ಲಿ ಸೌಹಾರ್ದ ಸಮೃದ್ಧಿಯನ್ನು ಬಯಸಿ, ಮುನ್ನಡೆದು ಬಂದಿರುವುದು ಇಂದಿನ ಪೀಳಿಗೆಗೆ ಮಾದರಿಯಾಗಿದೆ. ಈ ಸ್ನೇಹ ಸೌಹಾರ್ದ ನಿರಂತರವಾಗಿರಲಿ ಎಂದು ಶುಭ ಹಾರೈಸಿದರು.
ಬಾಲ ಮಾರುತಿ ವ್ಯಾಯಾಮ ಶಾಲೆಯ ಮಾರ್ಗದರ್ಶಕ ಲಕ್ಷ್ಮೀ ನಾರಾಯಣ ಕೆದ್ಲಾಯ ಅವರು ಪಂದ್ಯಾಕೂಟವನ್ನು ಉದ್ಘಾಟಿಸಿದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಕಾಂತ್ ಶೆಟ್ಟಿ, ವಿದ್ಯಾಸಮುದ್ರ ತೀರ್ಥ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಕ ಸಂಪತ್ ಕುಮಾರ್, ತೇಜಪಾಲ್ ಸುವರ್ಣ, ವನಜ ಕಿದಿಯೂರು, ರಾಘವ ಜಿ. ಕೆ., ಉಪಸ್ಥಿತರಿದ್ದರು.
ಕಿದಿಯೂರು ನ್ಪೋರ್ಟ್ಸ್
ಕ್ಲಬ್‌ನ ಅಧ್ಯಕ್ಷ ಹರೀಶ್ ಎಂ. ಕೆ., ಸ್ವಾಗತಿಸಿದರು. ನಿತಿನ್ ಕುಮಾರ್
ವಂದಿಸಿದರು.