Advertisement

ಮಣಿಪುರದಲ್ಲಿ ಕುಕಿ ರೆವಲ್ಯೂಶನರಿ ಆರ್ಮಿಯ ಹಿರಿಯ ನಾಯಕನ ಹತ್ಯೆ

12:09 PM Dec 14, 2018 | udayavani editorial |

ಇಂಪಾಲ : ಕುಕಿ ರೆವಲ್ಯೂಶನರಿ ಆರ್ಮಿ (ಕೆಆರ್‌ಎ) ಇದರ ಹಿರಿಯ ನಾಯಕ, 48ರ ಹರೆಯದ ಹೇಮ್‌ಖೊತಾಂಗ್‌ ಮಿಶಾವೋ ಅವರನ್ನು ಅಪರಿಚಿತ ವ್ಯಕ್ತಿಗಳು ಮಣಿಪುರದ ಕೊಂಗೋಕ್‌ಪೀ ಜಿಲ್ಲೆಯಲ್ಲಿ ಗುಂಡಿಕ್ಕಿ ಕೊಂದಿರುವುದಾಗಿ ಪೊಲೀಸರು ಇಂದು ಶುಕ್ರವಾರ ತಿಳಿಸಿದ್ದಾರೆ.

Advertisement

ಹೇಮ್‌ಖೊತಾಂಗ್‌ ಅವರು ಕೆಆರ್‌ಎ ಉಗ್ರ ಸಂಘಟನೆಯೆ ಮುಖ್ಯ ಹಣಕಾಸು ಕಾರ್ಯದರ್ಶಿಯಾಗಿದ್ದರು.

ನಿನ್ನೆ ಗುರುವಾರ ಸಂಜೆ ಕೊಂಗೋಕ್‌ಪೀ ಜಿಲ್ಲೆಯ ಸೈಕುಲ್‌ ಬಜಾರ್‌ ನಲ್ಲಿನ ಹೊಟೇಲೊಂದರ ಸಮೀಪ ಶಸ್ತ್ರಸಜ್ಜಿತ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದರು. 

ಕೆಆರ್‌ಎ ನಾಯಕನ ಹತ್ಯೆಗೆ ಈ ತನಕ ಯಾವುದೇ ವ್ಯಕ್ತಿ ಅಥವಾ ಸಂಘಟನೆ ಹೊಣೆ ಹೊತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಂತೆಯೇ ಈ ತನಕ ಯಾರನ್ನೂ ಬಂಧಿಸಿಲ್ಲ; ಸೈಕುಲ್‌ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿ ತನಿಖೆ ನಡೆಯುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next