Advertisement

ಬಿಸಿಎಎಸ್‌ ಮುಖ್ಯಸ್ಥರಾಗಿ ಕೊಡಗಿನ ಗಣಪತಿ ನೇಮಕ

11:08 PM Oct 08, 2020 | mahesh |

ಮಡಿಕೇರಿ: ಹಿರಿಯ ಐಪಿಎಸ್‌ ಅಧಿಕಾರಿ ಕೊಡಗಿನ ಮನೆಯಪಂಡ ಎ. ಗಣಪತಿ ಅವರನ್ನು ನಾಗರಿಕ ವಿಮಾನ ಯಾನದ ಭದ್ರತಾ ವಿಭಾಗ(ಬಿಸಿಎಎಸ್‌)ದ ಮಹಾ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

Advertisement

1986ನೇ ಸಾಲಿನ ಉತ್ತರಾಖಂಡ ಕೇಡರ್‌ನ ಹಿರಿಯ ಐಪಿಎಸ್‌ ಅಧಿಕಾರಿಯಾಗಿರುವ ಎಂ.ಎ. ಗಣಪತಿ ಅವರು ದಕ್ಷಿಣ ಕೊಡಗಿನ ಕುಂದಾ ಗ್ರಾಮದ ಮನೆಯಪಂಡ ಅಪ್ಪಯ್ಯ ಮತ್ತು ಪ್ರೇಮಲತಾ ದಂಪತಿಯ ಪುತ್ರರಾಗಿದ್ದಾರೆ. 2024ರ ಫೆಬ್ರವರಿಯಲ್ಲಿ ಅವರು ಸೇವಾ ನಿವೃತ್ತರಾಗಲಿದ್ದು, ಅಲ್ಲಿಯವರೆಗೆ ಬಿಸಿಎಎಸ್‌ ಮಹಾ ನಿರ್ದೇಶಕರಾಗಿ ಕರ್ತವ್ಯದಲ್ಲಿ ಮುಂದುವರಿಯಲಿದ್ದಾರೆ.

ಈ ಹಿಂದೆ ಬಿಸಿಎಎಸ್‌ ಮುಖ್ಯಸ್ಥರ ಹುದ್ದೆಯಲ್ಲಿದ್ದ ರಾಕೇಶ್‌ ಅಸ್ತಾನ ಅವರನ್ನು ಗಡಿ ಭದ್ರತಾ ಪಡೆಯ ಮಹಾ ನಿರ್ದೇಶಕರನ್ನಾಗಿ ನೇಮಕ ಮಾಡಿದ ಬಳಿಕ ಈ ಹುದ್ದೆ ಖಾಲಿ ಉಳಿದಿತ್ತು. ಗೃಹ ಇಲಾಖೆಯ ವಕ್ತಾರರಾಗಿ ಸೇವೆ ಸಲ್ಲಿಸಿದ್ದಗಣಪತಿ ಅವರನ್ನು 2016ರಲ್ಲಿ ಉತ್ತರಾಖಂಡ ರಾಜ್ಯದ ಪೊಲೀಸ್‌ ಮಹಾ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು. ಅವರು ಪ್ರಸ್ತುತ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಯ ವಿಶೇಷ ಮಹಾ ನಿರ್ದೇಶಕರಾಗಿ ಮತ್ತು ವಿಮಾನ ನಿಲ್ದಾಣದ ಮುಖ್ಯಸ್ಥರಾಗಿ ಕರ್ತವ್ಯದಲ್ಲಿದ್ದರು. 1999ರಲ್ಲಿ ಸಿಬಿಐಯಲ್ಲೂ ಸೇವೆ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next