Advertisement

Heart attack: ವರ್ಕೌಟ್‌ ವೇಳೆ ಹೃದಯಾಘಾತ; ಕುಸಿದು ಬಿದ್ದು ಪೊಲೀಸ್‌ ಅಧಿಕಾರಿ ಮೃತ್ಯು  

03:35 PM Oct 23, 2023 | Team Udayavani |

ಹರ್ಯಾಣ: ಜಿಮ್‌ ನಲ್ಲಿ ವರ್ಕೌಟ್‌ ಮಾಡುವಾಗ ಕುಸಿದು ಬಿದ್ದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮೃತಪಟ್ಟಿರುವ  ಹರ್ಯಾಣದಲ್ಲಿ ನಡೆದಿದೆ.

Advertisement

ಹರಿಯಾಣ ಪೊಲೀಸ್ ಉಪ ಅಧೀಕ್ಷಕರಾಗಿ ಕರ್ತವ್ಯ ನಿಭಾಯಿಸುತ್ತಿದ್ದ ಜೋಗಿಂದರ್ ದೇಸ್ವಾಲ್ ಮೃತಪಟ್ಟ ಪೊಲೀಸ್‌ ಅಧಿಕಾರಿ.

ಜೋಗಿಂದರ್ ದೇಸ್ವಾಲ್ ಅವರು ಜಿಮ್‌ನಲ್ಲಿ ವರ್ಕೌಟ್‌ ಮಾಡುವ ವೇಳೆ ಹೃದಯಾಘಾತವಾಗಿದೆ. ಹಠಾತ್ ಹೃದಯಾಘಾತವಾದ ಪರಿಣಾಮ ಕೂಡಲೇ ಅವರನ್ನು ಕರ್ನಾಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಅಲ್ಲಿ ಕೊನೆಯುಸಿರೆಳೆದಿದ್ದಾರೆ.

ದೇಸ್ವಾಲ್ ಅವರನ್ನು ಪಾಣಿಪತ್‌ನ ಜಿಲ್ಲಾ ಕಾರಾಗೃಹದ ಉಪ ಅಧೀಕ್ಷಕರಾಗಿ ನಿಯೋಜಿಸಲಾಗಿತ್ತು. ಅವರು ಕರ್ನಾಲ್‌ನ ನ್ಯಾಯಪುರಿ ಪ್ರದೇಶದಲ್ಲಿ ವಾಸಿಸುತ್ತಿದ್ದರು.

ಜಿಮ್‌ ನಲ್ಲಿ ವರ್ಕೌಟ್‌ ಮಾಡುವ ವೇಳೆ ಕುಸಿದು ಇಹಲೋಕ ತ್ಯಜಿಸಿರುವ ಘಟನೆ ಇದೇ ಮೊದಲಲ್ಲ. ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ವ್ಯಕ್ತಿಯೊಬ್ಬ ಜಿಮ್‌ನ ಟ್ರೆಡ್‌ಮಿಲ್ ಮೇಲೆ ಓಡುತ್ತಿದ್ದಾಗ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ನಡೆದಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next