Advertisement

ಹಿರಿಯ ಚಿತ್ರ ನಿರ್ದೇಶಕ ಶಂಕರ್‌ ಸುಗ್ನಳ್ಳಿ ನಿಧನ

06:05 AM Nov 17, 2018 | |

ಶಿರಹಟ್ಟಿ/ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಶಂಕರ್‌ ಸುಗ್ನಳ್ಳಿ (56 )ಚಿಕಿತ್ಸೆ ಫ‌ಲಕಾರಿಯಾಗದೆ ಗುರುವಾರ ನಿಧನರಾಗಿದ್ದಾರೆ. 

Advertisement

ಮೃತರು ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಎಚ್‌1ಎನ್‌1 ರೋಗದಿಂದ ಬಳಲುತ್ತಿದ್ದ ಶಂಕರ್‌ ಸುಗ್ನಳ್ಳಿ, ಕಳೆದ ಹಲವು ದಿನಗಳಿಂದ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಂಕು ಶ್ವಾಸಕೋಶಕ್ಕೂ ತಗುಲಿದ್ದರಿಂದ, ಚಿಕಿತ್ಸೆ ಫ‌ಲಕಾರಿಯಾಗದೆ ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದರು. ಮೃತರ ಅಂತ್ಯಕ್ರಿಯೆ ಗುರುವಾರ ಸಂಜೆ ಸ್ವಗ್ರಾಮ ಸುಗ್ನಳ್ಳಿಯಲ್ಲಿ ಜರುಗಿತು.

ಶಿರಹಟ್ಟಿ ತಾಲೂಕಿನ ಸುಗ್ನಳ್ಳಿ ಗ್ರಾಮದವರಾದ ಶಂಕರಲಿಂಗ ಅವರು, ಹಲವಾರು ಚಿತ್ರಗಳಲ್ಲಿ ನಟಿಸಿದ್ದರಲ್ಲದೇ ನಿರ್ದೇಶನವನ್ನೂ ಮಾಡಿದ್ದರು. ಮಹಾ ದಾಸೋಹಿ ಶರಣ ಬಸವ, ಏಳುಕೋಟಿ ಮಾರ್ತಾಂಡ ಭೈರವ, ವಿಜಯ ಕಂಕಣ, ಕಡ್ಲಿಮಟ್ಟಿ ಸ್ಟೇಷನ್‌ ಮಾಸ್ತರ, ಪ್ರೇಮ ದೇವತೆ, ಕತೆಯಾದ ಕಾಳ (ರಾಜ್ಯ ಪ್ರಶಸ್ತಿ ವಿಜೇತ ಚಿತ್ರ), ಹೋಳಿ, ಅದ್ನಾಡಿ ಅಳಿಯ, ಶ್ರೀ ಕಾಡಸಿದ್ದೇಶ್ವರ ಮಹಿಮೆ, ಫಕ್ಕಿರೇಶ್ವರ ಮಹಾತೆ¾, ಮಹಾಯೋಗಿ ಮಹಾದೇವ ವಿಜಯ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದರು. ಕಾಡು ನಮ್ಮ ನಾಡು, ಶ್ರೀ ಗುರು ಕೊಟ್ಟೂರೇಶ್ವರ ಚಿತ್ರಗಳನ್ನೂ ನಿರ್ದೇಶಿಸಿದ್ದು, ಅವು ಬಿಡುಗಡೆಯಾಗಬೇಕಿವೆ. ನಟಿ ರಾಗಿಣಿ ದ್ವಿವೇದಿ ಅವರನ್ನು “ಹೋಳಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ ಅವರಿಗಿದೆ. ನಿರ್ದೇಶಕ, ನಿರ್ಮಾಪಕ ಅಷ್ಟೇ ಅಲ್ಲದೆ ಛಾಯಾಗ್ರಹಕ ಮತ್ತು ನಟನಾಗಿಯೂ ಗುರುತಿಸಿಕೊಂಡಿದ್ದ ಶಂಕರಲಿಂಗ ಸುಗ್ನಳ್ಳಿ ಅವರ ನಿಧನಕ್ಕೆ ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next