Advertisement

ವಲಸಿಗರ ನಿರಾಶ್ರಿತರ ಕೇಂದ್ರಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶೆ ಭೇಟಿ

04:15 PM Apr 08, 2020 | keerthan |

ಯಲಬುರ್ಗಾ: ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್-19 ಕೊರೊನಾ ಮುಂಜಾಗೃತೆ ಕ್ರಮವಾಗಿ ಸ್ಥಾಪಿಸಲಾದ ವಲಸಿಗರ ನಿರಾಶ್ರಿತರ ಕೇಂದ್ರಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶೆ ಶುಭ ಬುಧವಾರ ಭೇಟಿ ನೀಡಿ ಕೇಂದ್ರದಲ್ಲಿರುವ ನಿರಾಶ್ರಿತರ ಆರೋಗ್ಯ ವಿಚಾರಣೆ ನಡೆಸಿ ಕೇಂದ್ರ ಪರಿಶೀಲನೆ ನಡೆಸಿದರು.

Advertisement

ಬಳಿಕ ಹಿರಿಯ ಸಿವಿಲ್ ನ್ಯಾಯಾಧೀಶೆ ಶುಭ ಮಾತನಾಡಿ, ಕೇಂದ್ರದಲ್ಲಿ ಮೈಸೂರಿನಿಂದ ಬಂದ 18 ಜನರನ್ನು ಈ ಕೇಂದ್ರದಲ್ಲಿ ಇರಿಸಲಾಗಿದೆ. ಕೇಂದ್ರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು ಮತ್ತು ಕೇಂದ್ರದಲ್ಲಿರುವ ಪ್ರತಿಯೊಬ್ಬರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಕೋವಿಡ್-19 ಮಹಾಮಾರಿ  ರೋಗವನ್ನು ಸಂಪೂರ್ಣ ನಿರ್ಮೂಲನೆಗೊಳಿಸಲು ಪ್ರತಿಯೊಬ್ಬರು ಆರೋಗ್ಯ ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಪ್ರತಿಯೊಬ್ಬರು ವಿಶೇಷವಾಗಿ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಲಾಕ್ ಡೌನ್ ಅನ್ನು ಪ್ರತಿಯೊಬ್ಬ ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು. ಮನೆಯಲ್ಲಿಯೇ ಇರಬೇಕು. ವಿನಾಕಾರಣ ರಸ್ತೆಗೆ ಇಳಿಯಬಾರದು. ಈಗಾಗಲೇ ಪಕ್ಕದ ಗದಗ ಜಿಲ್ಲೆಯಲ್ಲಿ ಸೋಂಕು ಪತ್ತೆಯಾಗಿದೆ. ಇನ್ನಾದರೂ ತಾಲೂಕಿನ ಜನತೆ ಅತೀ ಜಾಗೃತೆಯಿಂದ ಇರಬೇಕು ಎಂದರು.

ಈ ಸಂದರ್ಭದಲ್ಲಿ ಕಿರಿಯ ಶ್ರೇಣಿ ನ್ಯಾಯಾಧೀಶ ಶ್ರಿಶೈಲ ಬಾಗಡೆ, ಸಮಾಜ ಕಲ್ಯಾಣ ಅಧಿಕಾರಿ ವಿ.ಕೆ.ಬಡಿಗೇರ, ಬಿಸಿಎಂ ಅಧಿಕಾರಿ ಎಸ್.ವಿ.ಭಜಂತ್ರಿ, ವಸತಿ ಶಾಲೆಯ ಪ್ರಾಚಾರ್ಯ ಅಮೀದಸಾಬ ಅತ್ತರ, ಕೋರ್ಟ ಸಿಬ್ಬಂದಿ ರಾಘವೇಂದ್ರ ಕೋಳಿಹಾಳ  ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next