Advertisement

ಕೆಎಸ್‌ಆರ್‌ಟಿಸಿಯಿಂದ ಹಿರಿಯ ನಾಗರಿಕರ ವಿಶೇಷ ಗುರುತಿನ ಚೀಟಿ ಸ್ಥಗಿತ 

06:10 AM Jan 23, 2018 | Team Udayavani |

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದಿಂದ ಈ ಮೊದಲು ವಿತರಿಸಲಾಗುತ್ತಿದ್ದ ಹಿರಿಯ ನಾಗರಿಕರ ವಿಶೇಷ ಗುರುತಿನ ಚೀಟಿಯನ್ನು ಈಗ ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಬದಲಾಗಿ ಸರ್ಕಾರ ದಿಂದ ನೀಡಲಾಗಿರುವ ಯಾವುದಾದರೂ ಗುರುತಿನ ಚೀಟಿ ತೋರಿಸಿ ಫ‌ಲಾನುಭವಿಗಳು ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

Advertisement

ಅದರಂತೆ 60 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು ಕೆಳಕಂಡ ಯಾವುದಾದರೂ ಒಂದು ಮೂಲ ಗುರುತಿನ ಚೀಟಿ ತೋರಿಸಿ, ಪ್ರಯಾಣ ದರದಲ್ಲಿ ಶೇ.25ರಷ್ಟು ರಿಯಾಯ್ತಿ ಪಡೆಯಬಹುದು. ಪಾಸ್‌ಪೋರ್ಟ್‌,ಮತದಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌,ಚಾಲನಾ ಪರವಾನಗಿ (ಡ್ರೆ„ವಿಂಗ್‌ ಲೈಸೆನ್ಸ್‌), ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯ ಗುರುತಿನ ಚೀಟಿ, ಸರ್ಕಾರದ ಯಾವುದೇ ಇಲಾಖೆಯಿಂದ ಅಥವಾ ಸಾರ್ವಜನಿಕ ವಲಯದ ಘಟಕ/ ಸಂಸ್ಥೆ
(ಪಿಎಸ್‌ಯು)ಯಿಂದ ವಿತರಿಸಿರುವ ಹುಟ್ಟಿದ ದಿನಾಂಕ, ವರ್ಷ ನಮೂದಿಸಿರುವ ಗುರುತಿನ ಚೀಟಿ,ಸರ್ಕಾರದ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯದವರು ವಿತರಿಸಿರುವ ಭಾವಚಿತ್ರವಿ ರುವ ಗುರುತಿನ ಚೀಟಿ(60 ವರ್ಷ ಮೇಲ್ಪಟ್ಟ), ನಿಗಮದವತಿಯಿಂದ ವಿತರಿಸಿರುವ ಹಿರಿಯ ನಾಗರಿಕರ ಗುರುತಿನ ಚೀಟಿಯನ್ನು ತೋರಿಸಿ ಈ ಸೌಲಭ್ಯ ಪಡೆಯಬಹುದು ಎಂದು ಕೆಎಸ್‌ ಆರ್‌ಟಿಸಿ ಪ್ರಕಟಣೆ ತಿಳಿಸಿದೆ.

ಹಿರಿಯ ನಾಗರಿಕರಿಗಾಗಿ ನಿಗಮವು ನಗರ, ಹೊರ ವಲಯ, ಸಾಮಾನ್ಯ, ವೇಗದೂತ,ಅರೆ ಸುವಿಹಾರಿ ಮತ್ತು ರಾಜಹಂಸ ಬಸ್ಸುಗಳಲ್ಲಿ 60 ವರ್ಷ ಮೇಲ್ಪಟ್ಟ ಹಾಗೂ ಅದಕ್ಕೂ ಹೆಚ್ಚಿನ ವಯಸ್ಸಿನ ಕರ್ನಾಟಕ ರಾಜ್ಯದ ಹಿರಿಯ ನಾಗರಿಕರಿಗೆ ಟಿಕೆಟ್‌ ಪ್ರಯಾಣ ದರದಲ್ಲಿ ಶೇ.25ರಷ್ಟು ರಿಯಾಯಿತಿ ಸೌಲಭ್ಯ ಒದಗಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next