Advertisement

ಭಾರತದ ಮೇಲೆ ಚೀನಾ ಸರಕಾರ ಪ್ರಾಯೋಜಿತ ಬೇಹುಗಾರಿಕೆ – ಇಲ್ಲಿದೆ ಫುಲ್ ಡಿಟೇಲ್ಸ್

08:34 PM Sep 14, 2020 | Hari Prasad |

ಹೊಸದಿಲ್ಲಿ: ಭಾರತದ ವಿರುದ್ಧ ವಾಸ್ತವ ನಿಯಂತ್ರಣ ರೇಖೆ (LAC) ಬಳಿ ಕಾಲು ಕೆರೆದು ಜಗಳಕ್ಕೆ ಬರುತ್ತಿರುವ ಚೀನಾ ಇನ್ನೊಂದೆಡೆ ತನ್ನದೇ ಮಾಹಿತಿ ಸಂಗ್ರಹ ಕಂಪೆನಿಗಳನ್ನು ಛೂ ಬಿಟ್ಟು ಭಾರತ ಮತ್ತು ಇನ್ನಿತರ ದೇಶಗಳ ವಿರುದ್ಧ ಬೇಹುಗಾರಿಕೆ ನಡೆಸುತ್ತಿರುವ ಆಘಾತಕಾರಿ ವಿಚಾರ ಬಯಲಾಗಿದೆ.

Advertisement

ರಾಷ್ಟ್ರೀಯ ಭದ್ರತೆಗೆ ಅಪಾಯವನ್ನೊಡ್ಡುವ ಸಾಧ್ಯತೆ ಇರುವ ಈ ಸೂಕ್ಷ್ಮ ವಿಚಾರವನ್ನು ಸರಕಾರದ ಉನ್ನತ ಮೂಲಗಳನ್ನು ಉದ್ದೇಶಿಸಿ ಝೀ ನ್ಯೂಸ್ ವರದಿ ಮಾಡಿದೆ.

ಕ್ಸಿ ಝಿನ್ ಪಿಂಗ್ ಸರಕಾರದ ಉನ್ನತ ಅಧಿಕಾರಿಗಳೇ ಈ ಬೇಹುಗಾರಿಕೆಯಲ್ಲಿ ಭಾಗೀಯಾಗಿರುವ ಆತಂಕಕಾರಿ ವಿಚಾರ ಇದೀಗ ಬಯಲಾಗಿದ್ದು ಜಾಗತಿಕ ಮಟ್ಟದಲ್ಲಿ ಕೆಂಪು ರಾಷ್ಟ್ರದ ನರಿಬುದ್ದಿ ಇನ್ನೊಮ್ಮೆ ಜಾಹೀರಾದಂತಾಗಿದೆ.

ಇದನ್ನೂ ಓದಿ: 1962ರ ಭ್ರಮೆ ಬಿಡಿ! 15 ನಿಮಿಷದಲ್ಲಿ ಏನಾಗಲಿದೆ ಗೊತ್ತಾ…ಚೀನಾಕ್ಕೆ ಭಾರತ ಸೇನಾಪಡೆ ಸಡ್ಡು

ಶೆಂಝೆನ್ ಮೂಲದ ಝೆನ್ ಹುವಾ ಡಾಟಾ ಇನ್ಫಾರ್ಮೇಷನ್ ಟೆಕ್ನಾಲಜಿ ಕಂ. ಲಿಮಿಟೆಡ್ ಎಂಬ ಸಂಸ್ಥೆಯು ಚೀನಾ ಸರಕಾರದ ಬೆಂಬಲದೊಂದಿಗೆ ಈ ಬೇಹುಗಾರಿಕೆಯನ್ನು ನಡೆಸುತ್ತಿರುವ ವಿಚಾರವೂ ಇದೀಗ ಬಯಲಾಗಿದೆ.

Advertisement

ಇಷ್ಟು ಮಾತ್ರವಲ್ಲದೇ, ಜಗತ್ತಿಗೇ ಸಾರ್ವಭೌಮ ತಾನಾಗಬೇಕೆಂಬ ಹಪಾಹಪಿಯಲ್ಲಿರುವ ಚೀನಾ, ಭಾರತ ಮಾತ್ರವಲ್ಲದೇ ಜಗತ್ತಿನ ಇನ್ನಿತರ ಪ್ರಮುಖ ದೇಶಗಳಲ್ಲೂ ತನ್ನ ನೆಲದಲ್ಲಿರುವ ಕಂಪೆನಿಗಳು ಬೇಹುಗಾರಿಕೆ ನಡೆಸಲು ಬೆಂಬಲ ನೀಡುತ್ತಿರುವ ವಿಚಾರವೂ ಸಹ ಇದೀಗ ಬಯಲಾಗಿದೆ.

ಮತ್ತು ಇದೀಗ ಲಭ್ಯವಾಗಿರುವ ಮಾಹಿತಿಗಳೆಲ್ಲವೂ ಈ ಬೇಹುಗಾರಿಕೆ ಸಂಚಿನ ಹಿಂದೆ ಚೀನಾ ಸರಕಾರದ ಕೈವಾಡ ಇರುವ ಅಂಶ ದೃಢಪಟ್ಟಿದೆ ಎಂದು ಈ ವರದಿ ತಿಳಿಸಿದೆ.

ಇದಕ್ಕೆ ಪೂರಕವೆಂಬಂತೆ ದೇಶದ ಸಾರ್ವಭೌಮತೆಯನ್ನು ಕಾಪಾಡುವ ಉದ್ದೇಶದಿಂದಲೇ ಭಾರತ ಸರಕಾರ ಇತ್ತೀಚೆಗಷ್ಟೇ ಚೀನಾ ನೆಲಕ್ಕೆ ಸಂಬಂಧಿಸಿದ್ದ 200ಕ್ಕೂ ಹೆಚ್ಚಿನ ಮೊಬೈಲ್ ಅಪ್ಲಿಕೇಷನ್ ಗಳನ್ನು ಬ್ಯಾನ್ ಮಾಡಿತ್ತು ಮಾತ್ರವಲ್ಲದೇ ಚೀನಾ ಮೂಲದ ಹಲವಾರು ಕಂಪೆನಿಗಳು 4ಜಿ ಮತ್ತು 5ಜಿ ತರಂಗಾಂತರ ಬಿಡ್ಡಿಂಗ್ ನಲ್ಲಿ ಭಾಗವಹಿಸುವುದಕ್ಕೆ ನಿರ್ಬಂಧ ಹೇರಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ಬೀಜಿಂಗ್ ಬೆದರಿಕೆ ನಡುವೆ ಕೋವಿಡ್ 19 ಮೂಲದ ಬಗ್ಗೆ ಸಾಕ್ಷ್ಯ ಇದೆ ಎಂದ ಚೀನಾ ವೈರಾಲಜಿಸ್ಟ್!

ವರದಿಗಳು ಹೇಳುವಂತೆ ಚೀನಾ ಮೂಲದ ಈ ಕಂಪೆನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿರುವ ಮಾಹಿತಿಗಳನ್ನು ಬಳಸಿಕೊಂಡಿವೆ ಮತ್ತು ವಿಶ್ಲೇಷಣೆಗೊಳಪಡಿಸಿವೆ. ಆದರೆ ಈ ಆಧಾರದಲ್ಲಿ ಅಂತಹ ಕಂಪೆನಿಗಳ ವಿರುದ್ಧ ನಿಖರ ಕ್ರಮ ಕೈಗೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯವಾಗಿದ್ದರೂ, ಮುಂಬರುವ ದಿನಗಳಲ್ಲಿ ಇನ್ನಷ್ಟು ಚೀನಾ ಮೂಲದ ಆ್ಯಪ್ ಗಳು ಹಾಗೂ ಕಂಪೆನಿಗಳ ಮೇಲೆ ಸರಕಾರ ನಿಷೇಧ ಹೇರುವ ಸಾಧ್ಯತೆಗಳನ್ನು ಈ ಬೆಳವಣಿಗೆ ಹುಟ್ಟು ಹಾಕಿದೆ.

ಇದನ್ನೂ ಓದಿ: ಕೋವಿಡ್ 19 ವೈರಸ್ ಮೂಲದ ಶೀತಲ ಸಮರ: ಅಮೆರಿಕಕ್ಕೆ ಹುಷಾರ್ ಎಂದ ಚೀನಾ!

ಭಾರತದ ಸುಮಾರು 10 ಸಾವಿರ ಪ್ರತಿಷ್ಠಿತ ವ್ಯಕ್ತಿಗಳ ಮೇಲೆ ಚೀನಾ ನಿರಂತರವಾಗಿ ಬೇಹುಗಾರಿಕೆ ನಡೆಸುತ್ತಿದೆ ಎಂಬ ವಿಚಾರ ಇದೀಗ ಕಳವಳಕ್ಕೆ ಕಾರಣವಾಗಿದ್ದು, ಇವರಲ್ಲಿ ರಾಜಕೀಯ, ಉದ್ಯಮ, ಪತ್ರಿಕಾ ರಂಗ ಹಾಗೂ ಇನ್ನಿತರ ಕ್ಷೇತ್ರಗಳ ಪ್ರಭಾವಿ ವ್ಯಕ್ತಿಗಳೂ ಸಹ ಸೇರಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಮಾನಾಥ್ ಕೋವಿಂದ್, ಹಲವಾರು ಕೇಂದ್ರ ಸಚಿವರು, ವಿರೋಧ ಪಕ್ಷಗಳ ಪ್ರಮುಖ ನಾಯಕರು, ನ್ಯಾಯಾಧೀಶರು, ವಿಜ್ಞಾನಿಗಳು, ಶಿಕ್ಷಣ ತಜ್ಞರು, ನಟರು, ಕ್ರೀಡಾ ತಾರೆಗಳು ಸೇರಿದಂತೆ ದೇಶದ ವಿವಿಧ ಕ್ಷೇತ್ರಗಳಲ್ಲಿರುವ ಹೆಸರಾಂತ ಮತ್ತು ಜನಪ್ರಿಯ ವ್ಯಕ್ತಿಗಳ ಚಟುವಟಿಕೆಗಳನ್ನು ಶೆಂಝೇನ್ ಮೂಲದ ಈ ಕಂಪೆನಿ ನಿರಂತರವಾಗಿ ಗಮನಿಸುತ್ತಾ ಬೇಹುಗಾರಿಕೆ ನಡೆಸುತ್ತಿತ್ತು ಎಂದು ಈ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next