Advertisement
ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿ ನಗರದ ಸುಗುಣ ಆಸ್ಪತ್ರೆಗೆ ದಾಖಲಾಗಿದ್ದ ಅವರು ಬಹು ಅಂಗಾಂಗ ವೈಫಲ್ಯದಿಂದ ಸೋಮವಾರಬೆಳಗ್ಗೆ 11.15 ಕ್ಕೆ ಕೊನೆಯುಸಿರೆಳೆದರು. ಪತ್ನಿ ಸುಶೀಲ, ಪುತ್ರರಾದ ಪ್ರದೀಪ್, ಪ್ರತಾಪ್, ಸುಧೀರ ಸೇರಿ ಅಪಾರ ಅಭಿಮಾನಿಗಳನ್ನು ಶಿವಪ್ಪ ಅಗಲಿದ್ದಾರೆ.
ನಿಧನದ ಸುದ್ದಿ ತಿಳಿಯುತ್ತಿದ್ದಂತೆ ವಿವಿಧ ಪಕ್ಷದ ಮುಖಂಡರು, ಶಿವಪ್ಪ ಅವರ ಒಡನಾ ಡಿಗಳು ಆಸ್ಪತ್ರೆಗೆ ಧಾವಿಸಿ ಅಂತಿಮ ದರ್ಶನ ಪಡೆದು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಹದಿನೈದು ದಿನಗಳಿಂದ ಆಸ್ಪತ್ರೆಯಲ್ಲಿದ್ದ ಶಿವಪ್ಪ ಅವರ ಬಯಕೆ ತಮ್ಮ ಜೀವನದ ಕೊನೆಯುಸಿರಲ್ಲಿ ಹುಟ್ಟೂರಿನಲ್ಲೇ ಕಳೆಯಬೇಕು
ಎಂಬುದಾಗಿತ್ತು. ಆದರೆ, ದಿನದಿಂದ ದಿನಕ್ಕೆ ಆರೋಗ್ಯ ಏರುಪೇರಾಗುತ್ತಿದ್ದ ಕಾರಣ ವೈದ್ಯರು ಒಪ್ಪಿರಲಿಲ್ಲ. ಆದರೆ, ಸೋಮವಾರ ಬೆಳಗ್ಗೆ ಹುಟ್ಟೂರಿಗೆ ಕರೆದೊಯ್ಯಲು ಕುಟುಂಬಸ್ಥರು ಅನುಮತಿ ಕೇಳಿದ್ದರು. ಆದರೆ ವಿಧಿ ಇದಕ್ಕೆ ಅವಕಾಶವನ್ನೇ ನೀಡಲಿಲ್ಲ. ಸಾವಿನಲ್ಲೂ ಮಾನವೀಯತೆ ಮೆರೆದ ಶಿವಪ್ಪ ಅವರು ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ.
Related Articles
– ಬಿ.ಎಸ್.ಯಡಿಯೂರಪ್ಪ,ಬಿಜೆಪಿ ರಾಜ್ಯಾಧ್ಯಕ್ಷ
Advertisement