Advertisement
ತಮ್ಮ ಮಗ ಹಾಗೂ ಸೊಸೆಯೊಂದಿಗೆ ಕೆನಡಾದಲ್ಲಿ ವಾಸವಿದ್ದ ಅವರು, ಇತ್ತೀಚಿನ ವರ್ಷಗಳಲ್ಲಿ ಪ್ರೋಗ್ರೆಸ್ಸಿವ್ ಸುಪ್ರಾನ್ಯೂಕ್ಲಿಯರ್ ಪಾಲ್ಸಿ ಎಂಬ ನ್ಯೂನತೆಗೂ ಒಳಗಾಗಿದ್ದು, ದೇಹದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದರು. ಇತ್ತೀಚೆಗೆ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಮಧ್ಯಾಹ್ನದಿಂದ ಅವರು ಕೋಮಾ ಸ್ಥಿತಿಗೆ ತಲುಪಿದ್ದರೆಂದು ತಿಳಿಸಿರುವ ಅವರ ಪುತ್ರ ಹಾಗೂ ನಟ ಸಫìರಾಜ್, ಮೃತರ ಅಂತಿಮ ವಿಧಿ ವಿಧಾನಗಳನ್ನು ಕೆನಡಾದಲ್ಲಿಯೇ ನೆರವೇರಿಸಲಾಗುತ್ತದೆ ಎಂದಿದ್ದಾರೆ.
Related Articles
Advertisement
ಕಾಬೂಲ್‌ನಲ್ಲಿ 1937ರ ಅ.22ರಂದು ಜನಿಸಿದ್ದ ಖಾನ್, ಅನಂತರ ಬೆಳೆದಿದ್ದು ಮುಂಬೈನಲ್ಲಿ. 1972ರಲ್ಲಿ ತೆರೆಕಂಡ ರಣಧೀರ್ ಕಪೂರ್‌ರ “ಜವಾನಿ ದಿವಾನಿ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಚಿತ್ರ ಸಾಹಿತಿಯಾಗಿ, ದಿಲೀಪ್ ಕುಮಾರ್, ರಾಜೇಶ್ ಖನ್ನಾ, ಜೀತೇಂದ್ರ, ಫಿರೋಜ್ ಖಾನ್, ಅಮಿತಾಭ್ ಬಚ್ಚನ್, ಅನಿಲ್ ಕಪೂರ್, ಗೋವಿಂದಾ ಸೇರಿದಂತೆ ಸುಮಾರು ನಾಲ್ಕು ತಲೆಮಾರಿನ ಹೀರೋಗಳ ಚಿತ್ರಗಳಿಗೆ ಲೇಖನಿ ಹಿಡಿದ ಹೆಗ್ಗಳಿಕೆ ಅವರದ್ದು. ಬಚ್ಚನ್‌ರ “ಅಮರ್ ಅಕºರ್ ಅಂಥೋನಿ’, “ಶೋಲಾ ಔರ್ ಶಬ್ನಮ್’, “ಶರಾಬಿ’, “ಲಾವಾರಿಸ್’, “ಮುಕದ್ದರ್ ಕಾ ಸಿಕಂದರ್’, “ನಸೀಬ್’, “ಅಗ್ನಿ ಪಥ್’ ಚಿತ್ರಗಳಲ್ಲಿ ಅವರ ಸಂಭಾಷಣೆಗಳಂತೂ ಸೂಪರ್ ಹಿಟ್. ರಾಜೇಶ್ ಖನ್ನಾರ “ದಾಗ್’ ಚಿತ್ರದಿಂದ ನಟನೆಗೂ ಕಾಲಿಟ್ಟ ಅವರು, ಖಳನಟರಾಗಿ, ಹಾಸ್ಯನಟರಾಗಿಯೂ ಮಿಂಚಿದರಲ್ಲದೆ, 90ರ ದಶಕದಲ್ಲಿ ಗೋವಿಂದಾ-ಖಾನ್ ಅವರ ಜತೆ “ಕೂಲಿ ನಂ. 1′, “ರಾಜಾ ಬಾಬು’, “ಸಾಜನ್ ಚಲೇ ಸಸುರಾಲ್’, “ಹೀರೋ ನಂ. 1′, “ದುಲೆØ ರಾಜಾ’ ಮುಂತಾದ ಕಾಮಿಡಿ ಚಿತ್ರಗಳಲ್ಲಿ ನಟಿಸಿ ಮತ್ತಷ್ಟು ಜನಪ್ರಿಯರಾದರು. 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಇವರು, ಐದು ಫಿಲಂಫೇರ್ ಪ್ರಶಸ್ತಿ ಪಡೆದಿದ್ದರು. 2017ರಲ್ಲಿ ತೆರೆ ಕಂಡಿದ್ದ “ಮಸ್ತಿ ನಹೀ ಸಸ್ತಿ’ ಇವರು ಅಭಿನಯಿಸಿದ ಕೊನೆಯ ಚಿತ್ರ.