Advertisement
1. ರಾಗಿ ಶಾವಿಗೆಬೇಕಾದ ಸಾಮಗ್ರಿ: ರಾಗಿ ಹಿಟ್ಟು- 1ಕಪ್, ನೀರು- 1ಕಪ್, ಉಪ್ಪು- 1/2 ಚಮಚ
ರಾಗಿ ಹಿಟ್ಟನ್ನು ಒಂದು ಬಾಣಲೆಗೆ ಹಾಕಿ ಮಂದ ಉರಿಯಲ್ಲಿ ಹಸಿವಾಸನೆ ಹೋಗುವವರೆಗೂ ಹುರಿದುಕೊಳ್ಳಿ. ನಂತರ ತಣಿಸಿ. ಒಂದು ಪಾತ್ರೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಸಿ. ಅದು ಕುದಿಯುತ್ತಿರುವಂತೆ ತಣಿದ ರಾಗಿ ಹಿಟ್ಟಿಗೆ ಸ್ವಲ್ಪ ಸ್ವಲ್ಪವಾಗಿ ಸೇರಿಸಿ ಗಟ್ಟಿಯಾಗಿ ಹಿಟ್ಟನ್ನು ಕಲಸಿಕೊಳ್ಳಿ. ಈ ಹಿಟ್ಟನ್ನು ಶಾವಿಗೆ ಅಚ್ಚಿಗೆ ಹಾಕಿ ಇಡ್ಲಿ ಪ್ಲೇಟಿನಲ್ಲಿ ಚಿಕ್ಕವೃತ್ತದಂತೆ ಒತ್ತಿ ಉಗಿಯಲ್ಲಿ ಹತ್ತು ನಿಮಿಷಗಳ ಕಾಲ ಬೇಯಿಸಿ. ಆರೋಗ್ಯಕರವಾದ ರಾಗಿ ಶಾವಿಗೆಯನ್ನು ಚಟ್ನಿಯೊಂದಿಗೆ ಸವಿಯಿರಿ. 2. ಅಕ್ಕಿಹಿಟ್ಟಿನ ಶಾವಿಗೆ
ಬೇಕಾದ ಸಾಮಗ್ರಿ: ಅಕ್ಕಿಹಿಟ್ಟು- 1ಕಪ್, ನೀರು- 3/4ಕಪ್, ಉಪ್ಪು- 1ಚಮಚ, ಎಣ್ಣೆ- 2ಚಮಚ
Related Articles
ಒಂದು ಪಾತ್ರೆಯಲ್ಲಿ ನೀರು, ಉಪ್ಪು, ಎಣ್ಣೆ ಹಾಕಿ ಕುದಿಸಿ. ಅದು ಕುದಿಯುತ್ತಿರುವಂತೆ ಅಕ್ಕಿಹಿಟ್ಟನ್ನು ಸೇರಿಸಿ. 5 ಸೆಕೆಂಡುಗಳ ಕಾಲ ನೀರು ಅಕ್ಕಿ ಹಿಟ್ಟಿನೊಂದಿಗೆ ಕುದಿಯಲು ಬಿಡಿ. ನಂತರ ಚೆನ್ನಾಗಿ ಕಲಸಿ. ಬೆಂಕಿ ಆರಿಸಿ ಒಂದು ಪ್ಲೇಟಿಗೆ ಹಿಟ್ಟನ್ನು ವರ್ಗಾಯಿಸಿ. ಬೆಚ್ಚಗೆ ಇರುವಾಗಲೇ ಚೆನ್ನಾಗಿ ನಾದಿಕೊಂಡು 5 ಚಿಕ್ಕ ಉಂಡೆಗಳಾಗಿ ವಿಭಾಗಿಸಿ. ಈ ಉಂಡೆಗಳನ್ನು ಹಬೆಯಲ್ಲಿ 10ರಿಂದ 15ನಿಮಿಷಗಳ ಕಾಲ ಬೇಯಿಸಿ. ಬೆಂದ ಉಂಡೆಯನ್ನು ಶಾವಿಗೆ ಅಚ್ಚಿನಲ್ಲಿ ಹಾಕಿ ಒತ್ತಿ. ಬಿಸಿ ಅಕ್ಕಿಹಿಟ್ಟಿನ ಶಾವಿಗೆ ಚಟ್ನಿ, ಸಾಂಬಾರಿನೊಂದಿಗೆ ಸವಿಯಲು ಸಿದ್ಧ.
Advertisement
3. ರವೆ ಶಾವಿಗೆಬೇಕಾದ ಸಾಮಗ್ರಿ: ಮಧ್ಯಮ ರವೆ- 2 ಕಪ್, ನೀರು- 2 ಕಪ್, ಉಪ್ಪು- 1 ಚಮಚ ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಸಿ. ಅದು ಕುದಿಯುತ್ತಿರುವಂತೆ ಅದಕ್ಕೆ ರವೆಯನ್ನು ಸೇರಿಸಿ ಗಟ್ಟಿಯಾಗಿ ಹಿಟ್ಟನ್ನು ಕಲಸಿಕೊಳ್ಳಿ. ಈ ಹಿಟ್ಟನ್ನು ಶಾವಿಗೆ ಅಚ್ಚಿಗೆ ಹಾಕಿ ಇಡ್ಲಿ ಪ್ಲೇಟಿನಲ್ಲಿ ಚಿಕ್ಕ ಚಿಕ್ಕ ವೃತ್ತದಂತೆ ಒತ್ತಿ ಉಗಿಯಲ್ಲಿ ಹತ್ತು ನಿಮಿಷಗಳ ಕಾಲ ಬೇಯಿಸಿ. ದಿಡೀರ್ ರವೆ ಶಾವಿಗೆಯನ್ನು ಚಟ್ನಿಯೊಂದಿಗೆ ಸವಿಯಿರಿ. ಸುಮನ್ ದುಬೈ