Advertisement

ಗ್ರಾಮ ಸಹಾಯಕರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ: ಡಿ.ಕೆ.ಶಿವಕುಮಾರ್‌

09:14 PM Sep 22, 2021 | Team Udayavani |

ಬೆಂಗಳೂರು: ರಾಜ್ಯ ಸರ್ಕಾರಿ ಕಂದಾಯ ಇಲಾಖೆ ಗ್ರಾಮ ಸಹಾಯಕರಿಗೆ ವೇತನ ಹೆಚ್ಚಳ ಹಾಗೂ ಸೌಲಭ್ಯಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Advertisement

ಗ್ರಾಮ ಸಹಾಯಕರ ಪ್ರತಿಭಟನೆ ಸ್ಥಳಕ್ಕೆ ಹೋಗಿ ಅವರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ನಾನು ಹಾಗೂ ಕಾಂಗ್ರೆಸ್‌ ಪಕ್ಷ ನಿಮ್ಮೊಂದಿಗೆ ಇದೆ. ಸದನದಲ್ಲಿ ನಿಮ್ಮ ವಿಷಯ ಪ್ರಸ್ತಾಪಿಸಿ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಕೇಳಲು ಇಲ್ಲಿಗೆ ಬಂದಿಲ್ಲ. ಕಂದಾಯ ಇಲಾಖೆಯ ಗ್ರಾಮ ಸಹಾಯಕರ ಜತೆ ನಾನು ಇದ್ದೇನೆ ಎಂದು ಹೇಳಲು ಬಂದಿದ್ದೇನೆ ಎಂದು ಹೇಳಿದರು.

ಎರಡು ವರ್ಷಗಳಿಂದ ಕೋವಿಡ್‌ ಸಮಯದಲ್ಲಿ ನಿಮ್ಮ ಸೇವೆ ಹಾಗೂ ಶ್ರಮ ಅಪಾರ.

ನೀವು ನೊಂದಿದ್ದೀರಿ, ಬೆಂದಿದ್ದೀರಿ, ನಿಮಗೆ ಧ್ವನಿಯಾಗಬೇಕು ಎಂದು ಇಲ್ಲಿಗೆ ಬಂದಿದ್ದೇನೆ. ಅಧಿವೇಶನದಲ್ಲಿ ಒಂದು ದಿನ ಉಳಿದಿದೆ. ನಿಮ್ಮ ಪರವಾಗಿ ನಾನು ಧ್ವನಿ ಎತ್ತುತ್ತೇನೆ ಎಂದು ತಿಳಿಸಿದರು.

Advertisement

ಇದನ್ನೂ ಓದಿ:ಬೆಳಗಾವಿ : 28ರಿಂದ ಸವದತ್ತಿ ಶ್ರೀ ಯಲ್ಲಮ್ಮ ದೇವಿ ದರ್ಶನ ಭಾಗ್ಯ

ಅಶೋಕಣ್ಣ ಕೊಡುತ್ತಾನೋ ಬಿಡುತ್ತಾನೋ, ಆದರೆ ನಿಮ್ಮ ಆಶೀರ್ವಾದದಿಂದ ನಾವು ಅಲ್ಲಿ ಕೂರುವ ಅವಕಾಶವನ್ನು ಭಗವಂತ ನೀಡುತ್ತಾನೆ. ಆಗ ನಿಮ್ಮ ಋಣ ತೀರಿಸುತ್ತೇನೆ ಎಂದು ಹೇಳಿದರು.

ನಾವು ನುಡಿದಂತೆ ನಡೆಯುತ್ತೇವೆ. ಸರ್ಕಾರ ನಿಮಗೆ ನೀಡುವ 12 ಸಾವಿರ ರೂ. ವೇತನದಲ್ಲಿ ಜೀವನ ನಡೆಸಲು ಸಾಧ್ಯವಾ ಎಂಬ ಅರಿವು ನಮಗಿದೆ. ಕನಿಷ್ಠ ವೇತನ, ವಿಮೆ ಸೇರಿದಂತೆ ನಿಮ್ಮ ಬೇಡಿಕೆಗಳ ಪರ ನಾನು ಧ್ವನಿ ಎತ್ತುತ್ತೇನೆ. ನಿಮ್ಮ ಧ್ವನಿ ವಿಧಾನಸೌಧದಲ್ಲಿ ಕೇಳುತ್ತದೆ ಎಂದು ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next