Advertisement

ಏಶ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ: ಇಂದು ಭಾರತ-ಜಪಾನ್‌ ಮುಖಾಮುಖಿ

10:43 PM Dec 18, 2021 | Team Udayavani |

ಢಾಕಾ: ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿರುವ ಭಾರತ, ಏಶ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯ ಅಂತಿಮ ಲೀಗ್‌ ಪಂದ್ಯದಲ್ಲಿ ರವಿವಾರ ಜಪಾನ್‌ ತಂಡವನ್ನು ಎದುರಿಸಲಿದೆ.

Advertisement

ಭಾರತ ಒಂದು ಡ್ರಾ, ಎರಡು ಗೆಲುವಿನ ಸಾಧನೆಯೊಂದಿಗೆ 7 ಅಂಕ ಗಳಿಸಿ ಅಗ್ರಸ್ಥಾನ ಅಲಂಕರಿಸಿದೆ. ಕೊರಿಯಾ (5), ಜಪಾನ್‌ (2) ಮತ್ತು ಪಾಕಿಸ್ಥಾನ (1) ಅನಂತರದ ಸ್ಥಾನಲ್ಲಿವೆ. ಆತಿಥೇಯ ಬಾಂಗ್ಲಾದೇಶ ಇನ್ನೂ ಅಂಕದ ಖಾತೆ ತೆರೆದಿಲ್ಲ. ಮಲೇಶ್ಯ ಕಡೇ ಗಳಿಗೆಯಲ್ಲಿ ಹಿಂದೆ ಸರಿದಿತ್ತು.

ಬಲಿಷ್ಠ ಪಡೆಯನ್ನೇ ಹೊಂದಿರುವ ಜಪಾನ್‌ ಆಡಿದ ಎರಡೂ ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಈ ಫ‌ಲಿತಾಂಶ ದಾಖಲಾದದ್ದು ಬಲಿಷ್ಠ ತಂಡಗಳಾದ ಪಾಕಿಸ್ಥಾನ (0-0) ಮತ್ತು ಕೊರಿಯಾ (3-3) ವಿರುದ್ಧ ಎಂಬುದನ್ನು ಮರೆಯುವಂತಿಲ್ಲ. ಹೀಗಾಗಿ ಭಾರತ ಎಚ್ಚರಿಕೆಯಿಂದಲೇ ಹೆಜ್ಜೆ ಇಡಬೇಕಿದೆ.

ಇದನ್ನೂ ಓದಿ:“ಪರ್ಫೆಕ್ಟ್ 10 ವಿಕೆಟ್‌’ ಚೆಂಡಿಗೆ ಎಂಸಿಎಯಲ್ಲಿ ವಿಶೇಷ ಸ್ಥಾನ

Advertisement

Udayavani is now on Telegram. Click here to join our channel and stay updated with the latest news.

Next