Advertisement

ಕಿಶೋರ್‌ ಈಗ ಸೆಲ್ವ  

04:45 PM Dec 14, 2022 | Team Udayavani |

ನಟ ಕಿಶೋರ್‌ ಅಭಿನಯದ ಹೊಸ ಚಿತ್ರಕ್ಕೆ “ಸೆಲ್ವ’ ಎಂಬ ಟೈಟಲ್‌ ಇಡಲಾಗಿದೆ. ಈ ಚಿತ್ರವನ್ನು ಪದ್ಮ ನಾಭ ಅವರು ತನ್ವಿ ಮೀಡಿಯಾ ಕಾರ್ಪ್‌ ಸಂಸ್ಥೆ ಲಾಂಛನದಲ್ಲಿ ನಿರ್ಮಿಸುತ್ತಿದ್ದಾರೆ.

Advertisement

ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್‌ಇಂಡಿಯಾ ಸಿನಿಮಾ ಇದು. ನಂದು ಮಲೇಲ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಚಿತ್ರದ ಫ‌ಸ್ಟ್‌ ಲುಕ್‌ ಸದ್ಯದಲ್ಲೇ ಅನಾವರಣವಾಗಲಿದೆ. ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನಿರ್ದೇಶನ, ಸಜಾದ್‌ ಕಾಕ್ಕು ಛಾಯಾಗ್ರಹಣ, ಕೆ.ಎಂ.ಪ್ರಕಾಶ್‌ ಸಂಕಲನ ಹಾಗೂ ಮೋಹನ್‌ ಬಿ ಕೆರೆ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿರಲಿದೆ.

ಇತ್ತೀಚೆಗಷ್ಟೇ ಕಿಶೋರ್‌ “ಕಾಂತಾರ’ ಚಿತ್ರದ ಫಾರೆಸ್ಟ್‌ ಆಫೀಸರ್‌ ಪಾತ್ರದಲ್ಲಿ ಮಿಂಚಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next