Advertisement

ಕಾಳಸಂತೆಯಲ್ಲಿ ಪಡಿತರ ಮಾರಿದರೆ ಕಠಿಣ ಕ್ರಮ

11:48 AM May 12, 2020 | Lakshmi GovindaRaj |

ಬೆಂಗಳೂರು: ರಾಜ್ಯ ಸರ್ಕಾರ ಅನ್ನಭಾಗ್ಯ ಹಾಗೂ ಕೇಂದ್ರ ಯೋಜನೆಯಡಿ ಪೂರೈಕೆ ಮಾಡುವ ಪಡಿತರ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ ಕಠಿಣ ಕ್ರಮ ಕೈಗೊಳ್ಳಲಾವುದು ಎಂದು ಆಹಾರ  ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ಕೋಟ್ಯಂತರ ರೂ. ವೆಚ್ಚ ಮಾಡಿ ಬಡವರಿಗೆ ಆಹಾರ ಧಾನ್ಯ ವಿತರಿಸುತ್ತಿದೆ.

Advertisement

ಒಂದು ಕೆಜಿ ಅಕ್ಕಿ 25 ರೂ. ದರದಲ್ಲಿ ಖರೀದಿಸಿ  ಉಚಿತವಾಗಿ ಪೂರೈಕೆ ಮಾಡುತ್ತಿದ್ದೇವೆ. ಈ ಅಕ್ಕಿಯನ್ನು 10 ರಿಂದ 15 ರೂ.ಗೆ ಮಾರಾಟ ಮಾಡುತ್ತಿರುವ ದೂರುಗಳು ಬಂದಿವೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.  ವಿಧಾನಸೌಧದಲ್ಲಿ ಸೋಮವಾರ  ಅಧಿಕಾರಿಗಳ ಜತೆ ಸಭೆ ನಡೆಸಿ ಮಾತನಾಡಿ, ಪಡಿತರ ಮಾರಾಟ ಮಾಡುವವರ ವಿರುದ ಕ್ರಮಕ್ಕೆ ಅಗತ್ಯವಾದರೆ ಬಿಗಿ ಕಾನೂನು ತರುವ ಬಗ್ಗೆ ಮುಖ್ಯಮಂತ್ರಿ ಯವರ ಬಳಿ ಮಾತನಾಡುತ್ತೇನೆ.

ಸರ್ಕಾರ ಉಚಿತವಾಗಿ  ಕೊಡುವ ಪಡಿತರ ಮಾರಾಟ ಮಾಡುವವರ ಪಡಿತರ ಕಾರ್ಡ್‌ ರದ್ದು ಮಾಡಲೂ ಕಾನೂನು ತರುವ ಚಿಂತನೆಯಿದೆ ಎಂದರು. ಮೇಲ್ನೋಟಕ್ಕೆ ಪಡಿತರ ದುರ್ಬಳಕೆ ಮಾಡಿಕೊಂಡಿರುವ 499 ಅಂಗಡಿಗಳಿಗೆ ನೋಟಿಸ್‌   ನೀಡಿದ್ದೇವೆ. 33 ಲೈಸೆನ್ಸ್‌ ಗಳನ್ನು ರದ್ದು ಮಾಡಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next