ಅಸ್ಸಾಂ : ಅಸ್ಸಾಂ ನಲ್ಲಿ ನಮಗೆ ಅಧಿಕಾರ ಕೊಟ್ಟರೆ. ಇಲ್ಲಿ ಪೌರತ್ವ ತಿದ್ದಪಡಿ ಕಾಯ್ದೆಯನ್ನು ಜಾರಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಯಾವ ಧರ್ಮವೂ ದ್ವೇಷವನ್ನು ಕಲಿಸುವುದಿಲ್ಲ. ಬಿಜೆಪಿ ದ್ವೇಷವನ್ನು ಹರಡುವುದರ ಮೂಲಕ ಜನರನ್ನು ವಿಭಜಿಸುತ್ತಿದೆ ಎಂದು ಅಸ್ಸಾಂ ನ ದಿಬ್ರುಗರ್ ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಗಾಂಧಿ ಹೇಳಿದ್ದಾರೆ.
ಓದಿ : ಸುನಾಮಿಯಲ್ಲಿ ಕಣ್ಮರೆಯಾಗಿದ್ದ ಪೊಲೀಸ್ ಅಧಿಕಾರಿ 17 ವರ್ಷಗಳ ನಂತರ ಪತ್ತೆ
ಬಿಜೆಪಿ ಜನರ ನಡುವೆ ವಿಭಜನೆಯನ್ನು ತರಲು ದ್ವೇಷವನ್ನು ಹರಡುತ್ತದೆ. ಕಾಂಗ್ರೆಸ್ ಜನರ ನಡುವಿನ ಪ್ರೀತಿಯನ್ನು ಉತ್ತೇಜಿಸುತ್ತದೆ ಎಂದು ರಾಹುಲ್ ಹೇಳಿದ್ದಾರೆ.
ಇನ್ನು, ಆರ್ ಎಸ್ ಎಸ್ ನನ್ನು ಕೂಡ ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ನಾಗ್ಪುರದಲ್ಲೊಂದು ಶಕ್ತಿ ಇದೆ. ಅದು ಇಡೀ ದೇಶವನ್ನು ನಿಯಂತ್ರಣ ಮಾಡಲು ಪ್ರಯತ್ನಿಸುತ್ತಿದೆ. ಆದರೇ, ಯುವಕರು ಇದನ್ನು ಆತ್ಮ ವಿಶ್ವಾಸ ಮತ್ತು ಪ್ರೀತಿಯಿಂದ ವಿರೋಧಿಸಬೇಕು. ಏಕೆಂದರೇ, ಯುವಕರು ದೇಶದ ಭವಿಷ್ಯರಾಗುವವರು ಎಂದು ರಾಹುಲ್ ಹೇಳಿದ್ದಾರೆ.
ಇನ್ನು, ಎರಡು ದಿನಗಳ ಅಸ್ಸಾಂ ಭೇಟಿಯಲ್ಲಿರುವ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಪಕ್ಷದ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯನ್ನು ಶನಿವಾರ(ಮಾ. 20)ದಂದು ಬಿಡುಗಡೆ ಮಾಡಲು ಪಕ್ಷ ನಿರ್ಧರಿಸಿದೆ.
ಓದಿ : ಸಾಫ್ಟ್ ಸಿಗ್ನಲ್ ಗೆ ಬಲಿಯಾದ ಹಾರ್ಡ್ ಹಿಟ್ಟರ್ ಸೂರ್ಯ: ಏನಿದು ಸಾಫ್ಟ್ ಸಿಗ್ನಲ್?