Advertisement

ಗಾಂಜಾ ಮಾರಾಟ: ಇಬ್ಬರ ಬಂಧನ

11:41 AM Jan 25, 2022 | Team Udayavani |

ಕಲಬುರಗಿ: ನಗರದ ಸಂತ್ರಾಸವಾಡಿ ಪ್ರದೇಶದಲ್ಲಿ ಸೋಮವಾರ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರ ಪೊಲೀಸ್‌ ಆಯುಕ್ತಾಲಯದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Advertisement

ಸಂತ್ರಾಸವಾಡಿಯ ನಿವಾಸಿ ಶೇರು ಅಲಿಯಾಸ್‌ ನಜೀರ್‌ ಅಹ್ಮದ್‌ ಹಾಗೂ ಮಹಾರಾಷ್ಟ್ರದ ತೋರಳವಾಡಿಯ ನಿವಾಸಿ ರಾಮಲಿಂಗಪ್ಪ ಅಂಬಾಜಿ ಕೋರಳ್ಳಿ ಎಂಬುವವರೇ ಬಂಧಿತ ಆರೋಪಿಗಳು.

ಇಲ್ಲಿನ ನೀರಿನ ಟ್ಯಾಂಕ್‌ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಗರ ಪೊಲೀಸ್‌ ಆಯುಕ್ತ ಡಾ| ವೈ.ಎಸ್‌.ರವಿಕುಮಾರ, ಉಪ ಪೊಲೀಸ್‌ ಆಯುಕ್ತ ಅಡ್ಮೂರು ಶ್ರೀನಿವಾಸಲು ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸ್‌ ಇನ್‌ಸ್ಪೆಕ್ಟರ್‌ ವಾಜಿದ್‌ ಪಟೇಲ್‌ ನೇತೃತ್ವದಲ್ಲಿ ದಾಳಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಬಂಧಿತ ಆರೋಪಿಗಳಿಂದ 1.5 ಕೆಜಿ ಒಣ ಗಾಂಜಾ, 4 ಕೆಜಿ ಹಸಿ ಗಾಂಜಾ ಗಿಡಗಳು, ಎರಡು ಮೊಬೈಲ್‌ ಫೋನ್‌ಗಳು, ಒಂದು ಬೈಕ್‌ ಹಾಗೂ 2,500 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next