ಹೊಸಪೇಟೆ: ಜಿಲ್ಲೆಯಲ್ಲಿ ಕೆಲ ಅಂಗಡಿ-ಮುಂಗಟ್ಟು, ಶಾಪಿಂಗ್ ಮಹಲ್ ಗಳಲ್ಲಿ ಅಸುರಕ್ಷತಾ ಆಹಾರ ಪದಾರ್ಥ ಮಾರಾಟ ನಡೆಯುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಹೌದು! ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ತಾಲೂಕುಗಳ ಕೆಲ ಅಂಗಡಿ-ವ್ಯಾಪಾರ ಮಳಿಗೆಗಳಲ್ಲಿ ಆಹಾರ ಪದಾರ್ಥಗಳ ಗುಣಮಟ್ಟದಲ್ಲಿ ಏರುಪೇರು ಆಗಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಉಭಯ ಜಿಲ್ಲೆಗಳಲ್ಲಿ ಕಳೆದ ಮೂರು ವರ್ಷದ ಅವಧಿ ಯಲ್ಲಿ ಒಟ್ಟು 35 ಪ್ರಕರಣಗಳು ಬೆಳಕಿಗೆ ಬಂದಿವೆ.
ಯಾವಾವ ಪದಾರ್ಥಗಳು: ಐಸ್‌ಕ್ರೀಮ್, ಚಿಪ್ಸ್, ಮಜ್ಜಿಗೆ, ಕುಡಿಯುವ ನೀರಿನ ಬಾಟಲಿ, ಕೋವಾ, ಹಾಲು, ಪನ್ನೀರ್, ಹಿಟ್ಟು, ಮೆಣಸಿನ ಪುಡಿ, ಶೇಂಗಾ ಬೀಜ, ಮಡಿಕೆ, ಬಟಾಣೆ, ಕಾಳು ಪೊಟ್ಟಣ, ಅರಿಶಿಣ ಪುಡಿ ಹಾಗೂ ಗರಂ ಮಸಾಲ, ರಸುYಲ್ಲಾ, ಶೇಂಡಿಗೆ, ಕೇಕ್, ಬಿಸ್ಕತ್ತ್, ಅಕ್ಕಿ ಹಾಗೂ ಟಮೋಟಾ ಸಾಸ್ ಪದಾರ್ಥಗಳ ಗುಣಮಟ್ಟದಲ್ಲಿ ವ್ಯತಾಸ ಕಂಡು ಬಂದಿರುವುದು ಆಹಾರ ಸುಕರಕ್ಷತಾ ಇಲಾಖೆಯ ಗಮನಕ್ಕೆ ಬಂದಿದೆ. ಇವುಗಳಲ್ಲಿ ನಿಗದಿ ತ ಗುಣಮಟ್ಟ ಇಲ್ಲದಿರುವುದು, ಪೊಟ್ಟಣದ ಮೇಲೆ ತಪ್ಪು ಮಾಹಿತಿ ಲೇಬಲ್ ಅಂಟಿಸಿ ಗ್ರಾಹಕರಿಗೆ ವಂಚನೆ ಮಾಡುವ ಪ್ರಕರಣಗಳು ಬೆಳಕಿಗೆ ಬಂದಿವೆ.
ದೂರು ದಾಖಲು: ಆಹಾರ ಸುರಕ್ಷತಾ ಕಾಯ್ದೆ ಮತ್ತು ನಿಯಮಗಳು ಹಾಗೂ ನಿಬಂಧನೆಗಳು ಉಲ್ಲಂಘನೆ ಮಾಡಿರುವ ಆರೋಪದ ಅಡಿಯಲ್ಲಿ ಆಹಾರ ಸುರಕ್ಷತಾ ಇಲಾಖೆಯ ಅಂಕಿತ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದರು. ಕೆಲ ಪ್ರಕರಣಗಳ ವಿಚಾರಣೆ ನಡೆಸಿರುವ ಬಳ್ಳಾರಿ ಅಪರ ಜಿಲ್ಲಾ ಧಿಕಾರಿಗಳು ಆಹಾರ ಸುರಕ್ಷತೆ ಕಾಯ್ದೆಯಡಿಯಲ್ಲಿ ದಂಡ ವಿ ಧಿಸಿ ಇತ್ಯರ್ಥಗೊಳಿಸಿದರೆ ಇನ್ನು ಕೆಲ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ.
ಎಲ್ಲೆಲ್ಲಿ? ಹೊಸಪೇಟೆ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ 4, ಬಳ್ಳಾರಿ ಜೆಎಂಪಿಸಿ ನ್ಯಾಯಾಲಯದಲ್ಲಿ 1, ಹಗರಿಬೊಮ್ಮನಹಳ್ಳಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ 2 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.
ಕಲಬೆರಕೆ ಆಗುವ ಸಾಮಗ್ರಿಗಳು: ಬೆಣ್ಣೆ ಮತ್ತು ತುಪ್ಪ: ವನಸ್ಪತಿ, ಪ್ರಾಣಿಗಳ ಕೊಬ್ಬು, ಬೇಯಿಸಿದ ಆಲುಗಡ್ಡೆ, ನೀರು ಯೂರಿಯಾ, ಹಾಲು: ಬೋನಿಕ್ ಆಮ್ಲ, ಕೋವಾ: ಪಿಷ್ಟ ಪದಾರ್ಥಗಳು, ಪ್ರಾಣಿಗಳ ಕೊಬ್ಬು, ಖಾದ್ಯ ತೆ„ಲಗಳು: ಅರ್ಜಿಮೋನ್ ಆಯಿಲ್, ಹರಳೆಣ್ಣೆ, ಬಿಳಿ ಎಣ್ಣೆ, ದತ್ತೂರಿ ಬೀಜದ ಎಣ್ಣೆ, ಸಿಹಿ ತಿಂಡಿ, ಐಸ್‌ಕ್ರೀಮ್, ಶರಬತ್ತು: ಮೆಟಾಲಿನ್ ಹಳದಿ (ನಿಷೇಧಿ ತ ಬಣ್ಣ) ಕೃತಕ ಬಣ್ಣಗಳು ಅಧಿಕ ಪ್ರಮಾಣದಲ್ಲಿ ಬಳಕೆ. ಹಿಂಗು: ಬಣ್ಣದ ಸೇರಿಸಿದ ರಾಳ, ಚಹಾಪುಡಿ, ಬಣ್ಣ, ಹೊಟ್ಟು, ಉಪಯೋಗಿಸಿದ ಟಿ ಚರಟ, ಸಕ್ಕರೆ: ರವೆ, ಚಾಕ್ ಪೌಡರ್, ಮೆಣಸಿನ ಪುಡಿ: ನಿಷೇಧಿ ತ ಬಣ್ಣಗಳು ಮತ್ತು ಹೊಟ್ಟು. ಕಾಪಿಪುಡಿ. ಅರಿಶಿನ ಪುಡಿ: ಮೆಟಾನಿನ್ ಹಳದಿ (ನಿಷೇಧಿತ ಬಣ್ಣ)ಲೆಡ್ ಕ್ರೋಮೆಟ್ ಹಾಗೂ ಟಾಟ್ರಾನ್, ಜೇನುತುಪ್ಪ: ಸಕ್ಕರೆ ನೀರು, ಬೆಲ್ಲದ ಪಾಕ, ಅಡಿಕೆ ಪುಡಿ: ಮರದ ಹೊಟ್ಟು, ನಿಷೇ ಧಿತ ಬಣ್ಣಗಳು, ಮೆಣಸು: ಪರಂಗಿ ಬೀಜ, ಸಾಸಿವೆ: ರಾಗಿ, ಆರ್ಜಿಮೋನ್ ಬೀಜ, ಬೂರಾ ಸಕ್ಕರೆ: ವಾಷಿಂಗ್ ಸೋಡಾ, ತಂಪುಪಾನೀಯ: ಸ್ಯಾಕರಿನ್ ಬಳಕೆ, ಕೃತಕ ಬಣ್ಣಗಳ ಅಧಿಕ ಪ್ರಮಾಣದಲ್ಲಿ ಬಳಕೆ.
ಇವು ಹೆಚ್ಚಾಗಿ ಜನ ಸಾಮಾನ್ಯರು ದಿನನಿತ್ಯ ಬಳಕೆ ಮಾಡುವ ಪದಾರ್ಥಗಳಾಗಿರುವುದರಿಂದ ಹೆಚ್ಚಾಗಿ ಈ ಪದಾರ್ಥಗಳಲ್ಲಿ ಕಲಬೆರಕೆ ಮಾಡುವ ಸಾಧ್ಯತೆ ಹೆಚ್ಚು ಇದೆ ಎಂದು ಆಹಾರ ಸುರಕ್ಷತ ಹಾಗೂ ಗುಣಮಟ್ಟ ಇಲಾಖೆ ಗ್ರಾಹಕರಿಗೆ ಎಚ್ಚರಿಸಿದೆ.
-ಪಿ.ಸತ್ಯನಾರಾಯಣ