Advertisement

ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾರಾಟ: 8 ಮಂದಿ ಸೆರೆ

03:03 PM Mar 16, 2022 | Team Udayavani |

ಬೆಂಗಳೂರು: ನಕಲಿ ಛಾಪಾ ಕಾಗದ ಹಾಗೂ ಉಪನೋಂದಣಾಧಿಕಾರಿಗಳ ಕಚೇರಿಯ ಸೀಲ್‌ಗಳನ್ನು ಬಳಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿವೇಶನ ಮಾರಾಟ ಮಾಡುತ್ತಿದ್ದ ಮಹಿಳೆ ಸೇರಿ ಎಂಟು ಮಂದಿ ಯಲಹಂಕ ಉಪನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಯಲಹಂಕದ ಅಟ್ಟೂರು ಬಡಾವಣೆಯ ಪ್ರದೀಪ್‌ ಅಲಿಯಾಸ್‌ ಪಾಯ್ಸನ್‌ ಪ್ರದೀಪ್‌(28), ಚಿಕ್ಕಬೊಮ್ಮಸಂದ್ರದ ಧರ್ಮಲಿಂಗಂ (48), ಎಲ್‌ಬಿಎಸ್‌ ನಗರದ ಮಂಜುನಾಥ್‌ (43), ಇಡಬ್ಲೂéಎಸ್‌ 2ನೇ ಹಂತದ ಯಾರಬ್‌ ಅಲಿಯಾಸ್‌ ಅಬ್ದುಲ್‌ ರಬ್‌ (41), ಅಟ್ಟೂರು ಲೇಔಟ್‌ನ ವೈ.ಆರ್‌. ಮಂಜುನಾಥ (51), ಕೊಡಿಗೇಹಳ್ಳಿಯ ಅಬ್ದುಲ್‌ ಘನಿ (67), ಶಭಾನ ಭಾನು (42) ಹಾಗೂ ರಾಮಯ್ಯ ಅಲಿಯಾಸ್‌ ಆಟೋ ರಾಮ (43) ಬಂಧಿತರು.

ಆರೋಪಿಗಳಿಂದ ವಿವಿಧ ಮುಖ ಬೆಲೆಯ 2,130 ನಕಲಿ ಛಾಪಾ ಕಾಗದಗಳು, ಯಲಹಂಕ ಮತ್ತು ಚಿಕ್ಕಜಾಲ ಉಪನೋಂದಣಿ ಕಚೇರಿಯ 17 ನಕಲಿ ಸೀಲುಗಳು, ಟೈಪ್‌ರೈಟರ್‌ ಯಂತ್ರಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್‌ ಎ.ಶೆಟ್ಟಿ ಹೇಳಿದರು. ಆರೋಪಿಗಳ ಪೈಕಿ ರಾಮಯ್ಯ ಅಲಿಯಾಸ್‌ ಆಟೋ ರಾಮ ಈಗಾಗಲೇ ಕೊಲೆ ಮತ್ತು ಇತರೆ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸಿ, ಇತ್ತೀಚೆಗಷ್ಟೇ ಬಿಡಗಡೆಯಾಗಿದ್ದಾನೆ. ನಂತರ ಆರೋ ಪಿಗಳ ಜತೆ ಸೇರಿಕೊಂಡು ದಂಧೆ ನಡೆಸು ತ್ತಿದ್ದಾನೆ. ಈತ ನಿವೇಶನ ಮಾರಾಟ ಮಾಡಿ ಬಂದ ಹಣವನ್ನು ಗ್ಯಾಮ್ಲಿಂಗ್‌ಗೆ ಹೂಡಿಕೆ ಮಾಡುತ್ತಿದ್ದ. ಜತೆಗೆ ತನ್ನೊಂದಿಗೆ ಗ್ಯಾಮ್ಲಿಂಗ್‌ ಮಾಡುತ್ತಿದ್ದವರಿಗೆ ಸಾಲ ಕೊಡುತ್ತಿದ್ದ.

ಇದನ್ನೂ ಓದಿ: ಹಿಜಾಬ್ ತೀರ್ಪಿಗೆ ಅಸಮಾಧಾನ: ನಾಳೆ ಕರ್ನಾಟಕ ಬಂದ್ ಗೆ ಕರೆ

ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?: ಇತ್ತೀಚೆಗೆ ಯಲಹಂಕ ಉಪನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಚಿಕ್ಕಬೊಮ್ಮಸಂದ್ರದ ಡಾ.ಪ್ರಶಾಂತ್‌ರೆಡ್ಡಿ ಎಂಬವರು ಸರ್ವೆನಂಬರ್‌ 28,29/1 ರಲ್ಲಿ 2400 ಅಡಿ ವಿಸ್ತೀರ್ಣದ ನಿವೇಶನ ಹೊಂದಿದ್ದು, ಸದ್ಯ ಪ್ರಶಾಂತ್‌ರೆಡ್ಡಿ ವಿದೇಶಲಿದ್ದಾರೆ. ಈ ವಿಷಯ ತಿಳಿದುಕೊಂಡಿದ್ದ ಆರೋಪಿ ಪ್ರದೀಪ್‌, ಆ ನಿವೇಶನವನ್ನು ಕಬಳಿಸುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪ್ರಶಾಂತ್‌ ರೆಡ್ಡಿ ಅವರ ತಂದೆ ಜಯಪ್ರತಾಪ್‌ ರೆಡ್ಡಿಗೆ ನಿವೇಶನ ಬಿಡುವಂತೆ ಪ್ರಾಣ ಬೆದರಿಕೆ ಹಾಕಿದ್ದನು. ಈ ಸಂಬಂಧ ಪ್ರಶಾಂತ್‌ ರೆಡ್ಡಿ ಯಲಹಂಕ ಉಪನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಬಂಧನದಿಂದ ಆರು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ಹೇಳಿದರು.

Advertisement

ಇನ್ನು ಶಭಾನ ಬಾನು ಈ ಹಿಂದೆ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ನಂತರ ಮಂಜುನಾಥ್‌, ಅಬ್ದುಲ್‌ ಘನಿ, ಅಬ್ದುಲ್‌ ರಬ್‌ ಜತೆ ತಾಲೂಕು ಕಚೇರಿ, ಉಪನೋಂದಣಾಧಿಕಾರಿಗಳ ಕಚೇರಿ ಹೊರಭಾಗದಲ್ಲಿ ಸಾರ್ವಜನಿಕರಿಗೆ ಮಾಹಿತಿ ಕೊಡುವುದು, ಪತ್ರ ವ್ಯವಹಾರ ಸಂಬಂಧ ಸಣ್ಣ-ಪುಟ್ಟ ಕೆಲಸ ಮಾಡುತ್ತಿ ದ್ದರು. ಹೀಗಾಗಿ ನಕಲಿ ಛಾಪಾ ಕಾಗದ ಮಾಡುವ ಬಗ್ಗೆ ಚೆನ್ನಾಗಿ ತಿಳಿದುಕೊಂಡಿ ದ್ದರು. ಇನ್ನೂ ಪ್ರದೀಪ್‌ ರಿಯಲ್‌ ಎಸ್ಟೇಟ್‌ ದಂಧೆ ನಡೆಸುತ್ತಿದ್ದರಿಂದ ಖಾಲಿ ನಿವೇಶನಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ.

ಆರೋಪಿಗಳಲ್ಲಿ ಕೆಲವರು ನಗರದ ವಿವಿಧೆಡೆ ಸುತ್ತಾಡಿ ಖಾಲಿ ಇರುವ ಸೈಟ್‌ ಗಳ ಬಗ್ಗೆ ಹಾಗೂ ಸುಮಾರು ವರ್ಷಗಳಿಂದ ಯಾವುದೇ ರೀತಿಯ ಕಟ್ಟಡಗಳನ್ನು ಕಟ್ಟದೆ ಖಾಲಿ ಬಿಟ್ಟಿರುವ ಸೈಟ್‌ಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ಅದನ್ನು ಪ್ರದೀಪ್‌ಗೆ ಮಾಹಿತಿ ನೀಡುತ್ತಿ ದ್ದರು. ನಂತರ ಶಭಾನ ಬಾನು, ಅಬ್ದುಲ್‌ ಘನಿ, ಅಬ್ದುಲ್‌ ರಬ್‌ಗ ನಕಲಿ ಛಾಪಾ ಕಾಗದ ಸೃಷ್ಟಿಸುತ್ತಿದ್ದ.

ನಂತರ ನಕಲಿ ಸೀಲುಗಳು ಮತ್ತು ಬೇರೆಯವರ ಹೆಸರುಗಳಲ್ಲಿ ಸೇಲ್‌ಡೀಡ್‌ಗಳನ್ನು ಸೃಷ್ಟಿಸಿ ಜಿಪಿಎ ರಿಜಿಸ್ಟ್ರರ್‌, ಸೇಲ್‌ ಅಗ್ರಿಮೆಂಟ್‌ ಮತ್ತು ಸೇಲ್‌ಡೀಡ್‌ಗಳ ಮೂಲಕ ಮಾರಾಟ ಮಾಡಿ ವಂಚಿಸುತ್ತಿದ್ದರು. ಸುಮಾರು ವರ್ಷಗಳಿಂದ ಇದೇ ರೀತಿಯ ದಂಧೆಯಲ್ಲಿ ತೊಡಗಿದ್ದಾರೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next