Advertisement
ಘಟನೆ ವಿವರರಹೀಂ ಉಚ್ಚಿಲ್ ಕಳೆದ ಜೂ.23 ರಂದು ದುಬಾೖಗೆ ತೆರಳುವ ಸಂದರ್ಭದಲ್ಲಿ ಗನ್‌ಮ್ಯಾನ್ ಜತೆ ನಿಂತು ಫೋಟೊ ತೆಗೆಸಿಕೊಂಡಿದ್ದರು. ಬಳಿಕ ಅದಕ್ಕೆ ಶೀರ್ಷಿಕೆ ಸೇರಿಸಿ, ತಾನು ದುಬಾೖಗೆ ಹೋಗುವುದಾಗಿ ಫೇಸ್ ಬುಕ್‌ನಲ್ಲಿ ಫೋಟೊಗಳನ್ನು ಅಪ್‌ಲೋಡ್ ಮಾಡಿದ್ದರು. ಬಳಿಕ ಗನ್‌ಮ್ಯಾನ್ ಸಶಸ್ತ್ರ ಮೀಸಲು ಪಡೆಗೆ ತನ್ನ ಗನ್ ಒಪ್ಪಿಸಿ, ಯಾರಲ್ಲೂ ಹೇಳದೆ ಕೇಳದೆ ಊರಿಗೆ ಹೋಗಿದ್ದರು. ರಜೆ ಅರ್ಜಿಯನ್ನು ಕೂಡ ನೀಡಿರಲಿಲ್ಲ.
ರಹೀಂ ಉಚ್ಚಿಲ್ ಅವರು ಬ್ಯಾರಿ ಅಕಾಡೆಮಿ ಅಧ್ಯಕ್ಷರಾಗಿದ್ದಾಗ 2012 ಮಾರ್ಚ್ 15 ರಂದು ಅಕಾಡೆಮಿ ಕಚೇರಿಯಲ್ಲಿಯೇ ಅವರನ್ನು ಕೊಲೆ ಮಾಡಲು ಯತ್ನ ನಡೆದಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರೆಟ್ ವತಿಯಿಂದ ರಕ್ಷಣೆಗೆ ಗನ್ ಮ್ಯಾನ್ ಸೌಲಭ್ಯ ಒದಗಿಸಲಾಗಿತ್ತು. ಮಲ್ಲಿಕಾರ್ಜುನ ಅವರು ಗನ್ ಮ್ಯಾನ್ ಆಗಿ ನೇಮಕಗೊಂಡಿದ್ದರು.
Related Articles
ಗನ್ ಮ್ಯಾನ್ ವ್ಯವಸ್ಥೆಗೆ ಸಂಬಂಧಿಸಿ ಅದರದೇ ಆದ ನಿಯಮಾವಳಿಗಳಿವೆ. ಅದರಂತೆ ಅವರು ವಿಐಪಿಗಳ ಜತೆ ಫೋಟೊ ತೆಗೆಸಿಕೊಳ್ಳುವಂತಿಲ್ಲ ಮತ್ತು ಅದನ್ನು ಜಾಲತಾಣಗಳಲ್ಲಿ ಹಾಕುವಂತಿಲ್ಲ. ನಿಯಮ ಉಲ್ಲಂಘನೆಯ ಜತೆಗೆ ಮೇಲ ಧಿಕಾರಿಗಳ ಅನುಮತಿ ಪಡೆಯದೆ ರಜೆ ಹಾಕಿರುವ ಕಾರಣ ಅಮಾನತು ಮಾಡಲಾಗಿದೆ. ರಹೀಂ ಉಚ್ಚಿಲ್ ಅವರಿಗೆ ಬೇರೆ ಗನ್‌ಮ್ಯಾನ್ ಒದಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
Advertisement