Advertisement

ಭೈರಪ್ಪ ಜತೆ ಸೆಲ್ಫೀಗೆ ಮುಗಿಬಿದ್ದ ಸಭಿಕರು

07:26 AM Jan 20, 2019 | Team Udayavani |

ಮೈಸೂರು: ನಗರದ ಕಲಾಮಂದಿರದಲ್ಲಿ ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಆಯೋಜಿಸಿರುವ ಭೈರಪ್ಪ ಸಾಹಿತ್ಯೋತ್ಸವ-2019 ಮೊದಲ ದಿನದ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ನಡೆಯಿತು. ಪ್ರತಿ ಭಾಷಣಕಾರರಿಗೆ ಮಾತನಾಡಲು ಇಂತಿಷ್ಟೇ ಸಮಯ ಎಂದು ನಿಗದಿ ಮಾಡಲಾಗಿತ್ತು. ಅದನ್ನು ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿತ್ತು. ಶೇಖರ್‌ ಸೊಗಸಾಗಿ ನಿರ್ವಹಣೆ ಮಾಡಿದರು.

Advertisement

ಸಾಹಿತ್ಯದಲ್ಲಿ ಯುವಕರ ಆಸಕ್ತಿ ಕಡಿಮೆಯಾಗುತ್ತಿದೆ ಎಂಬುದಕ್ಕೆ ಕಲಾಮಂದಿರ ಸಾಕ್ಷಿಯಾಯಿತು. ಕಲಾಮಂದಿರ ಭರ್ತಿಯಾಗಿತ್ತು. ಸಭಿಕರಲ್ಲಿ ಮಧ್ಯವಯಸ್ಕರು ಹಾಗೂ ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೆ, ಯುವಕರ ಸಂಖ್ಯೆ ಬಹಳ ಕಡಿಮೆಯಿತ್ತು.

ಸೆಲ್ಫೀಗೆ ಡಿಮ್ಯಾಂಡ್‌: ಭೋಜನದ ಬಿಡುವಿನಲ್ಲಿ  ಡಾ. ಎಸ್‌.ಎಲ್‌. ಭೈರಪ್ಪ ಅವರೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಸಭಿಕರು ಮುಗಿಬಿದ್ದರು. ಅವರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿತ್ತು. ಪಿ. ಶೇಷಾದ್ರಿ ನಿರ್ದೇಶನ ಮೂಕಜ್ಜಿಯ ಕನಸುಗಳು ಚಿತ್ರದ ಟ್ರೈಲರ್‌ ಅನ್ನು ಅನ್ನು ಭೈರಪ್ಪ ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. 

ಮಧ್ಯಾಹ್ನ ಭೋಜನದ ಸಂದರ್ಭದಲ್ಲಿ ಸಭಿಕರಿಗೆ  ಪುಳಿಯೋಗರೆ, ಮೊಸರನ್ನ, ಬಜ್ಜಿಯ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ಮತ್ತು ಸಂಜೆ ಚಹಾ ವ್ಯವಸ್ಥೆ ಮಾಡಲಾಗಿತ್ತು. ಆಸಕ್ತ ಸಭಿಕರು ಗುಜುಗುಜು ಮಾಡದೇ ಗಂಭೀರವಾಗಿ ಕಾರ್ಯಕ್ರಮ ವೀಕ್ಷಿಸಿದರು. ಭೈರಪ್ಪನವರ ಪುಸ್ತಕಗಳ ಮಾರಾಟದ ವ್ಯವಸ್ಥೆಯನ್ನು ಸಹ  ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next