Advertisement
3 ವರ್ಷಗಳಿಂದ ಬೆಂಗಳೂರಿನಲ್ಲಿರುವ ಯುವಕ, ಗಾಂಧಿನಗರದ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಸಹಾಯಕನಾಗಿದ್ದ. ನ.6ರಂದು ಊರಿನಲ್ಲಿ ಅಂಕಲಿಂಗೇಶ್ವರ ದೇವಾಲಯ ಸ್ಥಾಪನೆ ಕಾರ್ಯಕ್ರಮ ಇದ್ದು, ಊರಿಗೆ ಹೋಗಲು ನಾಲ್ವರು ಸ್ನೇಹಿತರಿಗೆ ಕರೆ ಮಾಡಿ ದ್ದಾನೆ. ನಂತರ ರಾತ್ರಿ 10ಗಂಟೆ ಸುಮಾರಿಗೆ ಎಲ್ಲರೂ ಮೆಜೆಸ್ಟಿಕ್ ಬಂದಿದ್ದು, ಮಂಡ್ಯ ರೈಲು ಹತ್ತಿದ್ದಾರೆ. ತಡರಾತ್ರಿ 2 ಗಂಟೆ ಸುಮಾರಿಗೆ ಎಲ್ಲರೂ ರೈಲಿನ ಬಾಗಿಲ ಬಳಿ ಬಂದು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಜತೆಗೆ ಗ್ರೂಪ್ ಫೋಟೋ ಪಡೆದುಕೊಂಡಿದ್ದಾರೆ. ನಂತರ ತಮ್ಮ ಸೀಟುಗಳ ಬಳಿ ಹೋಗಿದ್ದಾರೆ.
Related Articles
Advertisement
ತನಿಖೆ ಆರಂಭಿಸಿದ ಪೊಲೀಸರು, ಮೊದಲಿಗೆ ಆತನ ಸ್ನೇಹಿತರ ವಿಚಾರಣೆ ನಡೆಸಿದ್ದಾರೆ. ಆಗ ನಡೆದ ಘಟನೆ ಯನ್ನು ವಿವರಿಸಿದ್ದಾರೆ. ಕೂಡಲೇ ಉಪ್ಪಾರಪೇಟೆ ಠಾಣೆ ಪೊಲೀಸರು ಮತ್ತು ರೈಲು ಪೊಲೀಸರು ಹಾಗೂ ಮಂಡ್ಯ ಜಿಲ್ಲೆ ಅಗ್ನಿಶಾಮಕ ಸಿಬ್ಬಂದಿ, ನುರಿತ ಮೀನುಗಾರರ ತಂಡ ನದಿಯಲ್ಲಿ ಹುಡುಕಾಟ ನಡೆಸಿದೆ. ಇದೇ ವೇಳೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ವ್ಯಾಪ್ತಿಯ ನದಿ ದಂಡೆ ಬಳಿ ಮೃತದೇಹ ಪತ್ತೆಯಾಗಿದೆ. ಅಲ್ಲಿಯೇ ಅಸಹಜ ಸಾವು ದಾಖಲಿಸಿಕೊಂಡಿದ್ದಾರೆ.
“ಯುವಕನ ಶವ ಪತ್ತೆ ಹಚ್ಚಿ, ಮರಣೋತ್ತರ ಪರೀಕ್ಷೆ ನಡೆಸಿ ಆತನ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ರೈಲಿನಲ್ಲಿ ಪ್ರಯಾಣಿಸುವ ಯುವಕರು ಸೇರಿ ಪ್ರತಿಯೊಬ್ಬ ಪ್ರಯಾಣಿಕರು ಡೋರ್ ಬಳಿ ನಿಂತು ಸೆಲ್ಫಿ ತೆಗೆಯುವುದು, ಮೊಬೈಲ್‌ನಲ್ಲಿ ಮಾತನಾಡುವುದು, ಡೋರ್ ಬಳಿ ನಿಂತುಕೊಳ್ಳುವುದನ್ನು ಬಿಡಬೇಕು.” – ಸಂಜೀವ್ ಎಂ.ಪಾಟೀಲ್, ಪಶ್ಚಿಮ ವಿಭಾಗ ಡಿಸಿಪಿ