Advertisement

India ಸ್ವಾವಲಂಬನೆಯನ್ನು “ಆರ್ಥಿಕ ರಕ್ಷಣಾ ನೀತಿ” ಎಂದು ತಪ್ಪಾಗಿ ಭಾವಿಸಬಾರದು: ಜೈಶಂಕರ್

07:16 PM Sep 27, 2023 | Team Udayavani |

ನ್ಯೂಯಾರ್ಕ್: ಸ್ವಾವಲಂಬಿ ಭಾರತವನ್ನು “ಆರ್ಥಿಕ ರಕ್ಷಣಾ ನೀತಿ” ಎಂದು ತಪ್ಪಾಗಿ ಗ್ರಹಿಸಬಾರದು. ಭಾರತವು ಸಹಯೋಗಕ್ಕೆ ಮುಕ್ತವಾಗಿದೆ ಆದರೆ ಅದರ ನಿಯಮಗಳ ಮೇಲೆ, ಅದರ ಕಾರ್ಯತಂತ್ರದ ಹಾದಿಯಲ್ಲಿದೆ ಎಂದು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿಕೆ ನೀಡಿದ್ದಾರೆ.

Advertisement

ವಿದೇಶಾಂಗ ಸಂಬಂಧಗಳ ಮಂಡಳಿಯಲ್ಲಿ ನಡೆದ ಸಂವಾದ ಮಾತನಾಡಿದ ಜೈಶಂಕರ್, “ನಾವು ಇಂದು ಸ್ವಾವಲಂಬಿ ಭಾರತದ ಬಗ್ಗೆ ಮಾತನಾಡುತ್ತೇವೆ. ನಮ್ಮ ದೇಶದಲ್ಲಿನ ಇಂದಿನ ವ್ಯತ್ಯಾಸಗಳಲ್ಲಿ ಇದೂ ಒಂದು. ಬಹಳಷ್ಟು ಜನರು ಇದನ್ನು ಆರ್ಥಿಕ ರಕ್ಷಣಾ ನೀತಿ ಎಂದು ತಪ್ಪಾಗಿ ಭಾವಿಸುತ್ತಾರೆ. ವಾಸ್ತವವಾಗಿ, ಇದು ವಿದೇಶಿ ಹೂಡಿಕೆಯನ್ನು ಆಹ್ವಾನಿಸುವಲ್ಲಿ ಮತ್ತು ವಿದೇಶಿ ತಂತ್ರಜ್ಞಾನಗಳನ್ನು ಹುಡುಕುವಲ್ಲಿ ನಾವು ತುಂಬಾ ಸಕ್ರಿಯವಾಗಿರುವ ಸಮಯವಾಗಿದೆ. ನಾವು ವಾಸ್ತವವಾಗಿ ಅರೆವಾಹಕಗಳಂತಹ ಕ್ಷೇತ್ರಗಳಲ್ಲಿ ಪ್ರೋತ್ಸಾಹಕ ಯೋಜನೆಗಳನ್ನು ಹೊಂದಿದ್ದೇವೆ” ಎಂದರು.

25 ವರ್ಷಗಳ ಹಿಂದೆ ಭಾರತ ಪೋಖ್ರಾನ್ ಪರಮಾಣು ಪರೀಕ್ಷೆ ನಡೆಸಿದ ನಂತರ ಭಾರತವು ತನ್ನದೇ ಆದ ಮಾರ್ಗವನ್ನು ಹೇಗೆ ರೂಪಿಸಿತು ಮತ್ತು ಅದರಲ್ಲಿ ಕೆಲವು ಪಾಠಗಳು, ವಿಶೇಷವಾಗಿ 5G ಮತ್ತು AI ನಂತಹ ತಂತ್ರಜ್ಞಾನವು ಹೇಗೆ ಉಪಯುಕ್ತವಾಗಿವೆ ಎಂದು ಕೇಳಿದಾಗ ಜೈಶಂಕರ್ ಉತ್ತರಿಸಿದರು.

“ 5G ಆಯ್ಕೆಗಳು ಚೀನ ಅಥವಾ ಯುರೋಪ್ ಎಂದು ಜನರು ಹೇಳುವ ಸಮಯವಿತ್ತು. ಬಹುಶಃ ನಾವೇ ಅಚ್ಚರಿ ಪಡುವಂತೆ, ನಮ್ಮದೇ ಆದ 5G ತಂತ್ರಜ್ಞಾನವನ್ನು ಹೊಂದುವಲ್ಲಿ ಸಮರ್ಥರಾಗಿದ್ದೇವೆ ಎಂದು ವಾಸ್ತವವಾಗಿ ಸಾಬೀತುಪಡಿಸಿದ್ದೇವೆ. ಅದು ಅಭಿವೃದ್ಧಿಯಾಗಿರಲಿ, ಭದ್ರತೆಯಾಗಿರಲಿ, ನೀತಿಯ ಆಯ್ಕೆಯಾಗಿರಲಿ, ಹವಾಮಾನ ಕ್ರಮದ ಮೇಲೆ, ಆಹಾರ ಭದ್ರತೆ ಅಥವಾ ಶಕ್ತಿಯ ಮೇಲೆಯಾಗಲಿ ”ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next