Advertisement
ನಗರದ ತೋಟಗಾರಿಕಾ ಮಹಾ ವಿದ್ಯಾಲಯದಲ್ಲಿ ಮಂಗಳವಾರ ಬಾಗಲಕೋಟೆ ತೋಟಗಾರಿಕೆ ವಿಶ್ವ ವಿದ್ಯಾಲಯ ಹಾಗೂ ಸಸ್ಯರೋಗಶಾಸ್ತ್ರ ಸೊಸೈಟಿ ಸಂಯುಕ್ತವಾಗಿ “ಹವಾಮಾನ ಬದಲಾವಣೆ ಸನ್ನಿವೇಶದಲ್ಲಿ ಸಸ್ಯ ಆರೋಗ್ಯ ನಿರ್ವಹಣೆಗೆ ಅನುಸರಿಸುತ್ತಿರುವ ಇತ್ತೀಚಿನ ವಿಧಾನಗಳು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಸಮರ್ಪಕ ಹಣ್ಣು-ತರಕಾರಿಗಾಗಿ ಈಗಲೂ ನಾವು ನೆರೆಯ ದೇಶಗಳನ್ನು ಅವಲಂಬಿಸಿದ್ದೇವೆ. ಹೇರಳವಾಗಿ ತರಕಾರಿ-ಹಣ್ಣು ಆಮದು ಮಾಡಿ ಕೊಳ್ಳುವುದರ ಪರಿಣಾಮ ತೈವಾನ್ ದೇಶದ ಒಟ್ಟಾರೆ ಆಂತರಿಕ ವೃದ್ಧಿ ದರ (ಜಿಡಿಪಿ) ಶೇ. 5ರಷ್ಟು ಹೆಚ್ಚಳವಾಗಿದೆ.ಈ ನಿಟ್ಟಿನಲ್ಲಿ ಸ್ವಾವಲಂಬನೆ ಸಾಧಿಸುವ ಅಗತ್ಯವಿದ್ದು, ಇದಕ್ಕಾಗಿ ಸ್ವಾಭಾವಿಕ ವಾಗಿ ರೋಗಗಳನ್ನು ತಡೆದುಕೊಳ್ಳುವ
ಸಾಮರ್ಥ್ಯ ಇರುವ ದೇಶೀಯ ತಳಿಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು. ಅಲ್ಲದೆ, ಹಣ್ಣು ಮತ್ತು ತರಕಾರಿ ಕ್ಷೇತ್ರವು ಮುಂದುವರಿದ ತಂತ್ರಜ್ಞಾನ ಬಳಕೆ ಮತ್ತು ಹೆಚ್ಚಿನ ಬಂಡವಾಳ ಹೂಡಿಕೆ ನಿರೀಕ್ಷೆಯಲ್ಲಿದೆ. ಸಂಶೋಧ ನೆಗೆ ಒತ್ತುಕೊಡುವ ಹಾಗೂ ಇದಕ್ಕಾಗಿ ಪ್ರತ್ಯೇಕವಾಗಿ ಹೆಚ್ಚಿನ ಅನುದಾನ ಮೀಸಲಿಡುವ ಕೆಲಸ ಆಗಬೇಕು. ಇಸ್ರೇಲ್, ನೆದರ್‌ಲ್ಯಾಂಡ್‌ನಂತಹ ದೇಶಗಳಲ್ಲಿ ಮಣ್ಣುರಹಿತ ಕೃಷಿ ಮಾಡುತ್ತಿದ್ದಾರೆ. ಆದರೆ, ನಮ್ಮಲ್ಲಿ ಸಾಕಷ್ಟು ಸಂಪನ್ಮೂಲವಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅದರ ಸದ್ಬಳಕೆ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Related Articles
Advertisement
ಬಾಗಲಕೋಟೆ ತೋಟಗಾರಿಕೆ ವಿವಿ ಕುಲಪತಿ ಡಾ.ಡಿ.ಎಲ್. ಮಹೇಶ್ವರ ಮಾತನಾಡಿ, ಮಳೆ ಮತ್ತು ವಾತಾವರಣವನ್ನು ಆಧರಿಸಿ ಯಾವ ಬೆಳೆ ಬೆಳೆಯ ಬೇಕು ಎನ್ನುವುದನ್ನು ನಿರ್ಧರಿಸು ವಂತಾಗಬೇಕು. ಈ ನಿಟ್ಟಿನಲ್ಲಿ ವಿಜ್ಞಾನಿಗಳ ಪಾತ್ರ ಬಹುಮುಖ್ಯ. ರೈತರಿಗೆ ಈ ಮಾಹಿತಿ ನೀಡುವಂತಾದರೆ, ರೈತರಿಗೆ ಆಗುತ್ತಿ ರುವ ನಷ್ಟವನ್ನು ತಗ್ಗಿಸಬಹುದು ಎಂದು ಹೇಳಿದರು.
ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಚ್. ಶಿವಣ್ಣ, ದೆಹಲಿಯ ಇಂಡಿಯನ್ ಫಿಟೋಪ್ಯಾಥಲಾಜಿಕಲ್ ಸೊಸೈಟಿ ಕಾರ್ಯದರ್ಶಿ ಡಾ.ದಿನೇಶ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.