Advertisement
ನಗರದ ಹುಳಿಯಾರು ರಸ್ತೆಯ ವೃತ್ತದಲ್ಲಿ ಮತ್ತು ಪ್ರವಾಸಿ ಮಂದಿರದ ಮುಂಭಾಗ ಹಾಗೂ ಹಾಸನ ರಸ್ತೆಯಲ್ಲಿ ನಂದಿನಿ ಹಾಲಿನ ಮಾರಾಟ ಕೇಂದ್ರಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ ಉತ್ತಮ ಮಳೆ, ಬೆಳೆಯಿಲ್ಲದೇ ಬರಗಾಲ ಪೀಡಿತ ಪ್ರದೇಶವಾಗಿರುವ ಕಾರಣ ಕೃಷಿಗೆ ಪೂರಕವಾದ ಗೋವುಗಳ ಸಾಕಾಣಿಕೆಯನ್ನು ರೈತರು ಸೇರಿದಂತೆ ಅನೇಕರು ಕೈಗೊಂಡಿರುವ ಕಾರಣ ಲಕ್ಷಾಂತರ ಜನರ ಜೀವನಕ್ಕೆ ಉತ್ತಮ ದಾರಿಯಾಗಿದೆ ಇಂತಹ ಉದ್ಯಮವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳ ಮೂಲಕ ಉತ್ತೇಜನ ನೀಡುತ್ತಿವೆ ಎಂದರು.
Related Articles
Advertisement
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಎಂ ಸಮೀವುಲ್ಲಾ, ಜಿಪಂ ಸದಸ್ಯ ಬಿಳಿಚೌಡಯ್ಯ, ಜೆಡಿಎಸ್ ಮುಖಂಡರಾದ ಧರ್ಮಶೇಖರ್, ಧರ್ಮೇಶ್, ಸುಬ್ರಹ್ಮಣ್ಯಬಾಬು, ಸಿಖಂದರ್, ನಗರಸಭೆ ಸದಸ್ಯರಾದ ಮೇಲಗಿರಿಗೌಡ, ಹರ್ಷವರ್ಧನ್, ಪುಟ್ಟರಾಜು, ಹಾಸನ ಕೆಎಂಎಫ್ನ ಸಹಾಯಕ ವ್ಯವಸ್ಥಾಪಕ ಮೋಹನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಹಾಲು ಮಾರಾಟ ಕೇಂದ್ರ ಸ್ಥಾಪನೆ: ರೈತರ ಹಿತದೃಷ್ಟಿಯಿಂದ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಹಾಲಿನ ಮಾರಾಟ ಕೇಂದ್ರಗಳನ್ನು ಸ್ಥಾಪಿಸಲು ಒತ್ತು ನೀಡಲಾಗಿದ್ದು, ಈ ಕೇಂದ್ರಗಳು ಎಲ್ಲೆಡೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಶಾಸಕ ಶಿವಲಿಂಗೇಗೌಡ ತಿಳಿಸಿದರು.
10 ಲಕ್ಷ ಲೀ. ಹಾಲು ಸಂಗ್ರಹ: ಹಾಸನ ಕೆಎಂಎಫ್ನ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಮಾತನಾಡಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಮಾರ್ಗದರ್ಶನದಲ್ಲಿ ಹಾಸನದ ಹಾಲು ಉತ್ಪಾದರ ಸಂಘ ಹಾಗೂ ಕೆಎಂಎಫ್ ಯಶಸ್ವಿಯಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಪ್ರತಿದಿನ ಹತ್ತು ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತದೆ ಎಂದರು.