Advertisement
ಇದನ್ನೂ ಓದಿ:ಶೇ.70ರಷ್ಟು ಜನರಿಗೆ ಕೋವಿಡ್ ಲಸಿಕೆ ನೀಡದೆ ಮುಂಬಯಿ ಲಾಕ್ ಡೌನ್ ತೆರವು ಬೇಡ: ಸಮಿತಿ
Related Articles
ಪ್ರಾಥಮಿಕ ತನಿಖೆ ಪ್ರಕಾರ, ಅಂಜು ಕಥೇರಿಯಾ 2005ರಲ್ಲಿ ಮೊದಲ ಬಾರಿಗೆ ಮಣಿಪುರಿ ಜಿಲ್ಲೆಯ ನಿವಾಸಿಯ ಯುವತಿಯೊಬ್ಬಳನ್ನು ವಿವಾಹವಾಗಿದ್ದ. ಇವರಿಬ್ಬರ ವಿವಾಹ ವಿಚ್ಛೇದನ ಪ್ರಕರಣ ಕೋರ್ಟ್ ನಲ್ಲಿದೆ. 2010ರಲ್ಲಿ ಅಂಜು ಬರೇಲಿ ಜಿಲ್ಲೆಯ ಯುವತಿಯೊಬ್ಬಳನ್ನು ವಿವಾಹವಾಗಿದ್ದು, ಆಕೆ ಕೂಡಾ ವಿವಾಹ ವಿಚ್ಛೇದನ ಅರ್ಜಿ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.
Advertisement
ನಾಲ್ಕು ವರ್ಷಗಳ ನಂತರ ಸ್ವಯಂಘೋಷಿತ ಬಾಬಾ ಆಯುರೈಯಾ ಜಿಲ್ಲೆಯ ಯುವತಿಯೊಬ್ಬಳನ್ನು ವಿವಾಹವಾಗಿದ್ದ. ಈತನ ಹಿಂದಿನ ವಿವಾಹದ ರಹಸ್ಯ ತಿಳಿದ ನಂತರ ಮೂರನೇ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಳು, ಬಳಿಕ ಅಂಜು ಮೂರನೇ ಹೆಂಡತಿಯ ಸಂಬಂಧಿಯೊಬ್ಬಳನ್ನು ವಿವಾಹವಾಗಿದ್ದ. 2019ರಲ್ಲಿ ಐದನೇ ವಿವಾಹವಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐದನೇ ಪತ್ನಿಯ ಬಳಿಯೂ ಈತ ತನ್ನ ಹಿಂದಿನ ವಿವಾಹದ ಗುಟ್ಟು ರಟ್ಟು ಮಾಡಿರಲಿಲ್ಲವಾಗಿತ್ತು. ಕೆಲವು ದಿನಗಳ ನಂತರ ಆಕೆಗೆ ಕಿರುಕುಳ ನೀಡಲಾರಂಭಿಸಿದ್ದ. ಇದರಿಂದ ರೋಸಿ ಹೋದ ಆಕೆ ಕಳೆದ ವರ್ಷ ಚಾಕೇರಿ ಪೊಲೀಸ್ ಠಾಣೆಯಲ್ಲಿ ಅಂಜು ವಿರುದ್ಧ ದೂರು ದಾಖಲಿಸಿದ್ದಳು. ಬಳಿಕ ಅಂಜು ಕಿದ್ವಾಯಿ ನಗರ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ವಾಸವಾಗಿದ್ದು, ಆರನೇ ಬಾರಿ ವಿವಾಹವಾಗಲು ಸಿದ್ಧತೆ ನಡೆಸಿದ ವೇಳೆ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.