Advertisement
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿಲ್ಲವ ಸೇವಾ ಸಮಾಜ ಟ್ರಸ್ಟ್ ಕೊಲ್ಯ ಸೋಮೇಶ್ವರದ ಆಶ್ರಯದಲ್ಲಿ ಉಳ್ಳಾಲ ತಾಲೂಕು ಬಿಲ್ಲವರ ಸಮಾವೇಶ ಸಮಿತಿಯ ಸಹಭಾಗಿತ್ವದಲ್ಲಿ ಉಳ್ಳಾಲ ತಾಲೂಕು ವ್ಯಾಪ್ತಿಯ ಬಿಲ್ಲವ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕೊಲ್ಯ ಬಿಲ್ಲವಸಮಾಜ ಸಂಘದ ಆವರಣದಲ್ಲಿ ನಡೆದ ಉಳ್ಳಾಲ ತಾಲೂಕು ಬಿಲ್ಲವರ ಸಮಾ ವೇಶದಲ್ಲಿ ಅವರು ಮಾತನಾಡಿದರು.
ಸೋಲೂರು ಮಠದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಪ್ರಾಮಾಣಿಕತೆ, ಸ್ವಾಮಿನಿಷ್ಠೆಗೆ ಹೆಸರೇ ಬಿಲ್ಲವ ಸಮಾಜ. ಅನ್ಯರಿಗೋಸ್ಕರ ಪ್ರಾಣತ್ಯಾಗ ಮಾಡಿದ ಪರಂಪರೆಯಿರುವ ಈ ಸಮಾಜಕ್ಕೆ ಸ್ಥಾನಮಾನ ಸಿಗಬೇಕಾದರೆ ಕಟ್ಟಕಡೆಯ ವ್ಯಕ್ತಿ ಶಿಕ್ಷಣ ಪಡೆಯುವಂತಾಗಬೇಕು ಎಂದರು.
Related Articles
Advertisement
ಸಮ್ಮಾನಪೊಲೀಸ್ ಸೇವೆಯಲ್ಲಿ ರಾಷ್ಟ್ರಪತಿ ಯವರಿಂದ ಶ್ಲಾಘನೀಯ ಸೇವಾ ಪದಕ ಪುರಸ್ಕೃತ ರಾಮ ಪೂಜಾರಿ, ಅಖೀಲ ಭಾರತ ವಿಶ್ವವಿದ್ಯಾನಿಲಯ ಮಟ್ಟದ ಕಬಡ್ಡಿ ಪಂದ್ಯದಲ್ಲಿ ಚಿನ್ನದ ಪದಕ ವಿಜೇತ ಯಶ್‌ಪಾಲ್ ಬಗಂಬಿಲ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಇರಾ ನೇಮು ಪೂಜಾರಿ, ಪ್ರಮೋದ್ ಉಳ್ಳಾಲ, ಬಿಲ್ಲವ ಭವನದ ನೀಲನಕ್ಷೆ ವಿನ್ಯಾಸ ಮಾಡಿದ ಧರ್ಮರಾಜ್ ಅಮ್ಮುಂಜೆ, ನಿಶಿತ್ ಡಿ. ಅಮ್ಮುಂಜೆ ಅವರನ್ನು ಗೌರವಿಸಲಾಯಿತು. ಕೊಲ್ಯ ಸೋಮೇಶ್ವರ ಬಿಲ್ಲವ ಸೇವಾ ಸಮಾಜ ಟ್ರಸ್ಟ್‌ನ ಅಧ್ಯಕ್ಷ ವೇಣುಗೋಪಾಲ್ ಸ್ವಾಗತಿಸಿದರು. ಕೊಲ್ಯ ಬಿಲ್ಲವ ಸೇವಾ ಸಮಾಜ ಸಮಗದ ಅದ್ಯಕ್ಷ ಹರೀಶ್ ಮುಂಡೋಳಿ ನಿರ್ಣಯ ಮಂಡಿಸಿದರು. ದಿನೇಶ್ ಸುವರ್ಣ ರಾಯಿ ಮತ್ತು ಪ್ರಜ್ಞಾ ಓಡಿನ್ನಾಳ ಕಾರ್ಯಕ್ರಮ ನಿರ್ವಹಿಸಿದರು. ಯುವ ವಾಹಿನಿ ಕೊಲ್ಯ ಘಟಕ ಅಧ್ಯಕ್ಷ ಲತೀಶ್ ಎಂ. ಸಂಕೊಳಿಗೆ ವಂದಿಸಿದರು. ಸಮಾವೇಶದ ನಿರ್ಣಯಗಳು
-ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ನಾಮಕರಣ ಮಾಡಬೇಕು
– ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ಬಜೆಟ್‌ನಲ್ಲಿ ಅನುದಾನ ನೀಡದೆ ತಾರತಮ್ಯ ಆಗಿದ್ದು, ಇದನ್ನು ಸರಿಪಡಿಸಬೇಕು.
-ಮಂಗಳೂರು ವಿ.ವಿ.ಯ ನಾರಾಯಣ ಗುರು ಅಧ್ಯಯನ ಪೀಠದ ಕಟ್ಟಡ ಪೂರ್ಣಗೊಳಿಸಲು ಆದ್ಯತೆ ಮತ್ತು ಅನುದಾನ ಬಿಡುಗಡೆ ಮಾಡಬೇಕು.
-ವಿವಿಧ ಅಭಿವೃದ್ಧಿ ನಿಗಮಗಳಲ್ಲಿ, ರಾಜಕೀಯ, ಧಾರ್ಮಿಕ ಕ್ಷೇತ್ರದಲ್ಲಿ ಪ್ರಾತಿನಿಧ್ಯ ಕಲ್ಪಿಸಬೇಕು.