Advertisement

ಪರರ ಆತ್ಮಗೌರವಕ್ಕೆ ಧಕ್ಕೆ ಸಲ್ಲ

04:14 PM Feb 23, 2018 | Team Udayavani |

ರಾಯಚೂರು: ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬರಿಗೂ ಆತ್ಮಗೌರವವಿರತ್ತದೆ. ಯಾವುದೇ ಕಾರಣಕ್ಕೂ ಜಾತಿ, ಧರ್ಮಗಳ ವಿಚಾರದಲ್ಲಿ ಅವರ ಘನತೆಗೆ ಧಕ್ಕೆ ಬಾರದಂತೆ ನಡೆದಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬೈಲೂರು ಶಂಕರರಾಮ್‌ ಹೇಳಿದರು.

Advertisement

ನಗರದ ವಿವೇಕಾನಂದ ಸಾಮಾಜಿಕ ಕಾರ್ಯ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿವೇಕಾನಂದ ಗ್ರಾಮೀಣ ಶಿಕ್ಷಣ ಸಂಸ್ಥೆ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಾಮಾಜಿಕ ಕಾರ್ಯ ನ್ಯಾಯ ದಿನಾಚರಣೆ ಮತ್ತು ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಾತಿ, ಮತ, ಧರ್ಮ, ವರ್ಣ ಬೇಧಗಳ ಮನೋಭಾವನೆ ಸಲ್ಲದು. ಸಮಾಜದಲ್ಲಿ ಯಾರಿಗೂ ತಾರತಮ್ಯ ಮಾಡಬಾರದು. ಎಲ್ಲರೂ ಏಕತೆಯಿಂದ ಸಾಮಾಜಿಕ ನ್ಯಾಯಯುತವಾಗಿ ಜೀವನ ಸಾಗಿಸಬೇಕು ಎಂದರು.

2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿರಾದಾರ ದೇವೇಂದ್ರಪ್ಪ ಎನ್‌. ಕಾನೂನಿನ ಬಗ್ಗೆ ವಿವರಿಸಿದರು. ಕಾನೂನು ಅರಿವು-ನೆರವು ಕುರಿತು ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಶ್ರೀಧರಯಲಿ ಮಾತನಾಡಿದರು. ವಿವೇಕಾನಂದ ಗ್ರಾಮೀಣ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಮಹಾದೇವಿ ಪಾಸೋಡಿ ಅಧ್ಯಕ್ಷತೆ ವಹಿಸಿದ್ದರು.

ರಾಜಶೇಖರ ಪಾಸೋಡಿ, ಸಂಸ್ಥೆ ಕಾನೂನು ಸಲಹೆಗಾರರಾದ ವಿಜಯಲಕ್ಷ್ಮೀ ಪಾಸೋಡಿ, ಸಂಸ್ಥೆ ಸದಸ್ಯ ಅಶೋಕ ಮಾಹೂರು, ಸಮಾಜ ಕಾರ್ಯ ಅಧ್ಯಯನ ವಿಭಾಗದ ಪ್ರಾಚಾರ್ಯ ಡಾ| ನೀಲಮ್ಮ ಹಳ್ಳಿ, ಬಿಪಿಇಡಿ ಕಾಲೇಜಿನ ಪ್ರಾಚಾರ್ಯ ನರಸಿಂಹಾಚಾರಿ, ಉಪನ್ಯಾಸಕರಾದ ಗೋವಿಂದರಾಜ್‌, ಮಲ್ಲಿಕಾರ್ಜುನ ಮಾನ್ವಿ, ದಾನಪ್ಪ ಪಾಸೋಡಿ, ಮಲ್ಲಿಕಾರ್ಜುನ ಭಜಂತ್ರಿ, ಸ್ವಾತಿ, ರೇಷ್ಮಾ, ಸಂಸ್ಥೆ ಆಡಳಿತಾಧಿಕಾರಿಗಳಾದ ಸುಧಾಕರ ಜೆ., ಹಣಮಂತರಾವ್‌ ಪಾಸೋಡಿ ಮತ್ತು ಸಿಬ್ಬಂದಿ ಇದ್ದರು. ಪ್ರಾಣೇಶ ಪ್ರಾರ್ಥಿಸಿದರು. ಪ್ರಾಚಾರ್ಯ ಶಾಮಣ್ಣ ಮದ್ದೂರು ಸ್ವಾಗತಿಸಿದರು. ಮಹಾಂತೇಶ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next