Advertisement

ನಿಂದಿಸಿ ಅಧಿಕಾರಿಗಳ ಆತ್ಮಸ್ಥೈರ್ಯ ಕುಂದಿಸಬೇಡಿ

01:13 PM May 18, 2021 | Team Udayavani |

ಮೈಸೂರು: ಇಡೀ ಜಗತ್ತನ್ನೇ ಇಂದು ಕೋವಿಡ್‌ ಬಾಧಿಸುತ್ತಿರುವ ಈ ಸಂಕಷ್ಟದ ಸಮಯದಲ್ಲಿ ರಾಜಕೀಯ ಪಕ್ಷಗಳು ಹಾಗೂ ಕೆಲ ನಾಯಕರು ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಆರೋಪ, ಟೀಕೆ ಮಾಡುವುದನ್ನು ಬಿಟ್ಟು ಅಗತ್ಯ ಸಲಹೆ, ಸೂಚನೆ ನೀಡುವ ಮೂಲಕ ಕೊರೊನಾ ಗೆಲ್ಲಲು ಕೈಜೋಡಿಸಿ ಎಂದು ಜಿಲ್ಲಾ ಟಾಸ್ಕ್ ಫೋರ್ಸ್‌ ಸಮಿತಿ ಸಂಚಾಲಕರಾದ ಎಚ್‌.ವಿ.ರಾಜೀವ್‌, ಆರ್‌.ರಘುಕೌಟಿಲ್ಯ, ಎಂ. ಅಪ್ಪಣ್ಣಹಾಗೂಎಲ್‌.ಆರ್‌.ಮಹದೇವಸ್ವಾಮಿ ಹೇಳಿದರು.

Advertisement

ಮುಡಾ ಕಚೇರಿಯಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಲ್ವರು, ಪ್ರತಿ ಪಕ್ಷಗಳ ನಾಯಕರ ನಡೆಗೆ ಅಸಮಾಧಾನ ಹೊರಹಾಕಿದರು. ಕೋವಿಡ್‌ ಸಂಕಷ್ಟದ ಸಮಯದಲ್ಲಿ ವ್ಯಕ್ತಿಗತ ನಿಂದನೆ, ಆರೋಪ ಮಾಡುವುದು ಬೇಡ. ಜೊತೆಗೆ ಈ ಪರಿಸ್ಥಿತಿಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಆಕ್ಷಮ್ಯ. ವಿರೋಧ ಮಾಡುವುದಕ್ಕೇ ವಿರೋಧ ಪಕ್ಷ ಎಂಬ ವರ್ತನೆಯನ್ನು ಬಿಟ್ಟು ಮಾನವೀಯತೆಯಿಂದ ವರ್ತಿಸುವಂತೆ ಆಗ್ರಹಿಸಿದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಅಧ್ಯಕ್ಷ ಆರ್‌.ರಘು ಮಾತನಾಡಿ, ಲಸಿಕೆ ಬಂದ ಆರಂಭದಲ್ಲಿ ಲಸಿಕೆ ಬಗ್ಗೆ ಅಪಪ್ರಚಾರ ನಡೆಸಿದ ಕಾಂಗ್ರೆಸ್‌ ಇಂದು ಲಸಿಕೆ ಎಲ್ಲಿ ಎಂದು ಬೊಬ್ಬೆ ಹೊಡೆಯುತ್ತಿದೆ. ಆರಂಭದಲ್ಲೇ ದೇಶದ ಜನತೆಗೆ ಅಪಪ್ರಚಾರ ಮಾಡದೆ ಲಸಿಕೆ ಪಡೆದು ಕೊಳ್ಳಲು ಪ್ರೋತ್ಸಾಹ ನೀಡಿದ್ದರೆ ಈ ಪ್ರಮಾಣದ ಸಾವುಗಳು ಸಂಭವಿಸುತ್ತಿರಲಿಲ್ಲ. ಈ ಎಲ್ಲಾ ಸಾವುಗಳಿಗೆ ಕಾಂಗ್ರೆಸ್‌ ನಿಲುವೆಕಾರಣ ಎಂದು ಕಿಡಿಕಾರಿದರು.

ಅಹೋರಾತ್ರಿ ಕೆಲಸ: ಮುಡಾ ಅಧ್ಯಕ್ಷ, ಬೆಡ್‌ ನಿರ್ವಹಣೆಗಳ ಸಂಚಾಲಕ ಎಚ್‌.ವಿ.ರಾಜೀವ್‌ ಮಾತನಾಡಿ ,ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ಹಗಲು ರಾತ್ರಿಕೆ ಲಸ ಮಾಡುತ್ತಿದ್ದಾರೆ. ವೈದ್ಯರು ಅಹೋರಾತ್ರಿ ದುಡಿಯುತ್ತ ರೋಗಿಗಳ ಜೀವ ಉಳಿಸಲು ಶ್ರಮಿಸುತ್ತಿದ್ದಾರೆ. ಆದರೆ, ವಿರೋಧ ಪಕ್ಷದ ನಾಯಕರು ಏನು ಮಾಡುತ್ತಿದ್ದಾರೆ? 5 ಮಂದಿಗಾದರೂ ಬೆಡ್‌ ವ್ಯವಸ್ಥೆ ಕಲ್ಪಿಸಿ ನೆರವಿಗೆ ಬರಬಾರದೇ ಎಂದು ಹೇಳಿದರು.

ಎಲ್ಲರೂ ಸಕಾರಾತ್ಮಕ ಚಿಂತನೆಯಲ್ಲಿ ಕೆಲಸ ಮಾಡಬೇಕಾದ ಸನ್ನಿವೇಶದಲ್ಲಿದ್ದೇವೆ.ಆದರೆವಿರೋಧ ಮಾಡಲು ಇದು ಸಕಾಲವೇ? ಜಿಲ್ಲೆಯಲ್ಲಿ ಬೆಡ್‌ ಬ್ಲಾಕಿಂಗ್‌ ನಡೆಯುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಈ ರೀತಿಯ ವರ್ತನೆ ಅತ್ಯಂತ ವಿಷಾದನೀಯ ಎಂದು ಹೇಳಿದರು.

Advertisement

ಪ್ರಚಾರಕ್ಕೆ ಟೀಕಿಸಬೇಡಿ: ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಟ್‌ ಅಧ್ಯಕ್ಷ, ಚಿತಾಗಾರಗಳ ನಿರ್ವಹಣೆ ಉಸ್ತುವಾರಿ ಅಪ್ಪಣ್ಣ ಮಾತನಾಡಿ, ಅಧಿಕಾರಿಗಳು ತಮ್ಮ ವೈಯಕ್ತಿಕ ನೋವು ನುಂಗಿಕೊಂಡು ಕೆಲಸ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಡೀಸಿಯಿಂದ ಡಿ ದರ್ಜೆ ನೌಕರರವರೆಗೂ ಎಲ್ಲರೂ ಶ್ರಮಿಸುತ್ತಿದ್ದಾರೆ. ಸಾ. ರಾ.ಮಹೇಶ್‌ ಅವರು ಸರಣಿ ಸುದ್ದಿಗೋಷ್ಠಿ ನಡೆಸಿ ವೈಯಕ್ತಿಕ ವಿಚಾರ ಪ್ರಸ್ತಾಪ ಮಾಡುವುದು ಸಲ್ಲದು. ಹಿರಿಯರಾದ ಆರ್‌.ಧ್ರುವ ನಾರಾಯಣ ಅವರು ಸೂಕ್ತ ಸಲಹೆ ಕೊಡಬೇಕು. ಪ್ರಚಾರಕೋಸ್ಕರ ಟೀಕೆ ಮಾಡುವುದು ಸರಿಯಲ್ಲ ಎಂದರು.

ಹಣ ಕೇಳಿದರೆ ಕ್ರಮಿನಲ್‌ ಕೇಸ್‌: ನಗರದ ಕೆಲವು ಖಾಸಗಿ ಆಸ್ಪತ್ರೆಯವರಿಗೆ ಮಾನವೀಯತೆಯೇ ಇಲ್ಲ. ಶವಯಿಟ್ಟುಕೊಂಡು ಹಣ ಕೇಳುತ್ತಾರೆ. ಇದನ್ನು ಪ್ರಶ್ನಿಸಿದರೆ ದಬ್ಟಾಳಿಕೆ ಮಾಡುತ್ತಾರೆ. ಶವ ನೀಡಲು ಖಾಸಗಿ ಆಸ್ಪತ್ರೆಯವರಿಗೆ ಹಣ ನೀಡಬೇಕಿಲ್ಲ. ಹಣ ಕೇಳಿದ ಪ್ರಕರಣಗಳು ವರದಿಯಾಗಿವೆ. ಅವರಿಗೆ ಮೊದಲು ಮನವಿ ಮಾಡುತ್ತೇವೆ. ಅನಂತರ ಕ್ರಿಮಿನಲ್‌ ಪ್ರಕರಣ ದಾಖಲಿಸುತ್ತೇವೆ ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿ ಕನ್ನಡತಿ,  ಸರ್ಕಾರದಲ್ಲಿ ಲೋಪಗಳು ಇಲ್ಲವೇ ಇಲ್ಲ ಎಂದು ಹೇಳಲಾಗದು.ಕೆಲ ಪಕ್ಷಗಳ ನಾಯಕರು, ಮುಖಂಡರ ನಿರಂತರ ಸುದ್ದಿಗೋಷ್ಠಿ ನಡೆಸಿ ಜಿಲ್ಲಾಧಿಕಾರಿ, ಜಿಲ್ಲಾಡಳಿತ ಹಾಗೂ ಸರ್ಕಾರದವಿರುದ್ಧ ವೈಯಕ್ತಿಕ ಆರೋಪ ಮಾಡುತ್ತಿದ್ದಾರೆ. ಅದರಲ್ಲೂ ಜಿಲ್ಲಾಧಿಕಾರಿ ವಿರುದ್ಧ ಜೆಡಿಎಸ್‌ ಶಾಸಕ ಸಾರಾ ಮಹೇಶ್‌ ವೈಯಕ್ತಿಕವಾಗಿ ತೇಜೋ ವಧೆಗಿಳಿದಿರುವುದು ಸರಿಯಲ್ಲ. ಡೀಸಿ ಕನ್ನಡತಿ.ಕನ್ನಡದಲ್ಲಿ ಆಡಳಿತ ಮಾಡುತ್ತಿದ್ದಾರೆ. ಜಾತಿ,ಭಾಷೆ, ಧರ್ಮದ ಹೆಸರಿನಲ್ಲಿ ನಿರಂತರವಾಗಿಟಾರ್ಗೆಟ್‌ ಮಾಡಿ ಅವರ ಆತ್ಮಸ್ಥೈರ್ಯ ಕುಂದಿಸುವುದು ಬೇಡ ಎಂದು ರಘುಕೌಟಿಲ್ಯ ಹೇಳಿದರು.

ಆ್ಯಂಬುಲೆನ್ಸ್‌ಕೊಡುಗೆ :

ಕೋವಿಡ್‌ ರೋಗಿಗಳಿಗೆ ನೆರವಾಗಲೆಂದು ಮಹ ದೇವಸ್ವಾಮಿ ಸ್ನೇಹ ಬಳಗದಿಂದ ಆ್ಯಂಬುಲೆನ್ಸ್‌ ಕೊಡುಗೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ32 ಆ್ಯಂಬುಲೆನ್ಸ್‌ಗಳಿವೆ. ಪುರಭವನ, ಜಿಲ್ಲಾ ಕೋವಿಡ್‌ ಆಸ್ಪತ್ರೆ, ತುಳಸಿದಾಸಪ್ಪ ಆಸ್ಪತ್ರೆ, ಸೇರಿ 4 ಕಡೆ ಆ್ಯಆಂಬುಲೆನ್ಸ್‌ಗಳು ದಿನದ24 ಗಂಟೆಯೂಸನ್ನಧ ಸ್ಥಿತಿಯಲ್ಲಿ ಇಡಲಾಗಿದೆ ಎಂದುಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಲ್‌.ಆರ್‌. ಮಹದೇವಸ್ವಾಮಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next