Advertisement
ಜೀವನದಲ್ಲಿ ಸವಾಲು ಸ್ವೀಕರಿಸಿ; ಅದು ಕೇವಲ ಒಂದು ಭಾಗವಾಗಿ ಅಲ್ಲ, ಜೀವನವೇ ಒಂದು ಸವಾಲು. ಈ ಮಧ್ಯೆ ನೀವು ಅಷ್ಟಕ್ಕೇ ಸಮಾಧಾನ ಪಟ್ಟರೇ ಸಾಲದು. ನಿಮ್ಮ ಜೀವನದ ಕೊನೆಯ ಘಳಿಗೆಯವರೆಗೂ ನೀವು ಸವಾಲಿನಲ್ಲಿಯೇ ಬದುಕಿದರೆ ನಿಮ್ಮ ಕನಸು ನಿಮ್ಮ ಜತೆಯಲ್ಲಿರುತ್ತದೆ ಇಂತಹದ್ದೊಂದು ಸವಾಲಿನ ಬದುಕಿನ ಬಗ್ಗೆ ಹೇಳಿದವರು, ಸ್ವತಃ ಅಂತಹ ಸವಾಲಿನೊಂದಿಗೆ ಬದುಕಿ ತೋರಿಸಿದ ಖ್ಯಾತ ಅಂತಾರಾಷ್ಟ್ರೀಯ ವಾಗ್ಮಿ ನಿಕ್ ವುಜಿಸಿಕ್.
Related Articles
Advertisement
ಮಿತಿಯಿಲ್ಲದ ಬದುಕು ಸಾಗಿಸಿಬೆಂಕಿಯಲ್ಲಿ ಅರಳಿದ ಹೂವಿನಂತೆ, ನಿಕ್ ಕೂಡ ಸವಾಲುಗಳಲ್ಲಿಯೇ ಅರಳಿದ ಸಾಧಕ. ಈತ ಹೇಳುವಂತೆ ಬದುಕಿಗೆ ಮಿತಿ ಹಾಗೂ ಚೌಕಟ್ಟು ಹಾಕಿರಬಾರದು ಎನ್ನುತ್ತಾನೆ. ಜೀವನಕ್ಕೊಂದು ಬೌಂಡರಿಯಿದ್ದರೆ, ನಾವು ಮುಂದೆ ಬರಲು ಸಾಧ್ಯವಿಲ್ಲ. ಲೈಫ್ ವಿಥೌಟ್ ಲಿಮಿಟ್ಸ್ ಎಂದು ನಿಕ್ ಹೇಳುತ್ತಾನೆ. ಜೀವನದಲ್ಲಿ ನೀವು ಅಂದುಕೊಂಡಿದ್ದನ್ನು ಸಾಧಿಸಬೇಕಿದ್ದರೆ, ನಿಮ್ಮಲ್ಲಿರುವ ಕೆಲವೊಂದು ಋಣಾತ್ಮಕ ಚಿಂತನೆಗಳನ್ನು ದೂರ ಮಾಡಿ ಬದುಕಿದಾಗ ನೀವು ಯಶಸ್ಸಿನ ಸಾಧಕರಾಗಿರುತ್ತೀರಿ ಎನ್ನುತ್ತಾನೆ ನಿಕ್. ಕಳೆದ ದಿನಗಳ ಚಿಂತೆಯೇಕೆ?
ನಾವು ಸ್ವಾಭಾವಿಕವಾಗಿ ನಮ್ಮ ಜೀವನದಲ್ಲಿ ಕಳೆದು ಹೋದ ಘಟನೆಗಳಿಂದ ಆದ ನೋವನ್ನೇ ಮೆಲುಕು ಹಾಕಿ ವ್ಯಥೆಪಡುತ್ತಿರುತ್ತೇವೆ. ಆದರೆ ನಿಕ್ ಹಾಗಲ್ಲ. ಆತ ಇಂದು ಹಾಗೂ ನಾಳೆಯ ಬಗ್ಗೆ ಚಿಂತಿಸಲ್ಲ, ಯೋಚಿಸುತ್ತಾನೆ. ಆತನೇ ಹೇಳುವಂತೆ, ನನಗೆ ಎರಡು ಕೈಯಿಲ್ಲ, ಎರಡೂ ಕಾಲಿಲ್ಲ, ಅದರ ಬಗ್ಗೆ ನಾನು ಚಿಂತೆಯೂ ಮಾಡಲ್ಲ ಎಂದೂ ನಿಕ್ ತನ್ನ ಜೀವನದ ಬಗ್ಗೆ ಆತ್ಮವಿಶ್ವಾಸದ ಮಾತುಗಳನ್ನು ಆಡುತ್ತಾನೆ. ಇದು ನಮ್ಮೆಲ್ಲರಿಗೂ ಸ್ಫೂರ್ತಿಯಾಗುವ ಮಾತುಗಳೇ, ಇದನ್ನ ಅರಿತು ನಾವು ಮುನ್ನಡೆದರೆ, ನಿಕ್‌ನಂತೆ ಕೂಡ ನಾವೂ ಮುಂದೆ ಬರಬಹುದು. ನಂಬಿಕೆಯೇ ಜೀವನ
ನಿಕ್ ವುಜಿಸಿಕ್ ಬಹುತೇಕ ಭಾಷಣ ಹಾಗೂ ಬರೆಹಗಳಲ್ಲಿ ವ್ಯಕ್ತವಾಗುತ್ತಿದ್ದ ಬಹುಮುಖ್ಯ ಅಂಶವೆಂದರೆ ನಂಬಿಕೆಯ ಬಗ್ಗೆ. ಆತ ಹೇಳುವಂತೆ ಜೀವನದಲ್ಲಿ ನೀವು ನಂಬಿಕೆ ಇಡದಿದ್ದರೆ, ಏನನ್ನೂ ಸಾಧಿಸಲೂ ಆಗುವುದಿಲ್ಲ. ನಾನು ಕೂಡ ನನ್ನ ಅಂಗವೈಕಲ್ಯದ ಬಗ್ಗೆ ಚಿಂತಿಸುತ್ತಾ ಕುಳಿತಿದ್ದರೆ, ವ್ಹೀಲ್ ಚೇರ್ ಮೇಲೆಯೇ ಕುಳಿತಿರಬೇಕಿತ್ತು. ಅದನ್ನು ಹಿಮ್ಮೆಟ್ಟಿಸಿ, ನಂಬಿಕೆಯ ಮೇಲೆ ಮುಂದೆ ಬಂದೆ ಎಲ್ಲವೂ ಸಾಧ್ಯವಾಯಿತು. ನಂಬಿಕೆಯಿಂದಲೇ ಇಂದು ನಾನು ಜಗತ್ತನ್ನು ಸುತ್ತುತ್ತಿದ್ದೇನೆ. ನನ್ನ ನಂಬಿಕೆಯಿಂದಲೇ ಇಂದು ನಾನು ಈಜುತ್ತೇನೆ, ಸ್ಕೈಡೈವ್ ಮಾಡುತ್ತೇನೆ. ಅದಕ್ಕಾಗಿ ನಂಬಿಕೆಯೇ ಜೀವನ ಎಂದು ನಿಕ್ ಹೇಳುತ್ತಾರೆ. ಕೈ, ಕಾಲುಗಳಿಲ್ಲದ ವ್ಯಕ್ತಿ ಕೈ, ಕಾಲುಗಳಿಲ್ಲದ ವ್ಯಕ್ತಿ ಸಾಧನೆಯ ಬಗ್ಗೆ ಕನಸು ಕಾಣುತ್ತಾನೆ ಅಂತಾದರೆ ನಮಗೆ ಯಾಕೆ ಸಾಧ್ಯವಿಲ್ಲ? ಯಾಕೆ ಸಾಧ್ಯವಿಲ್ಲ? ಯಾವತ್ತೂ ಒಳ್ಳೆಯ ಕೆಲಸಗಳನ್ನೇ ಮಾಡಲು ಪ್ರಯತ್ನಿಸಿ; ಉಳಿದುದನ್ನು ದೇವರು ನೋಡಿಕೊಳ್ಳುತ್ತಾನೆ. ನನ್ನಲ್ಲಿ ಏನು ಇಲ್ಲವೋ ಅದಕ್ಕಾಗಿ ನಾನು ದೇವರನ್ನು ದ್ವೇಷಿಸುತ್ತೇನೆ. ಹಾಗೆಯೇ ಇಂದು ನಾನು ಏನಾಗಿದ್ದೇನೆಯೋ ಅದಕ್ಕೆ ಕೃತಜ್ಞತೆ ಹೇಳಬಯಸುತ್ತೇನೆ. ಶಿವ ಸ್ಥಾವರ ಮಠ