Advertisement
ಭಾರತ ಸರಕಾರ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ಹೊಸ ದೆಹಲಿಯ ಎಐಸಿಟಿಇ ಸಂಯಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಸಸ ಸ ಸ ಸಸಾಫ್ಟ್‌ವೇರ್‌ನ ವಿಶ್ವದ ಅತಿ ದೊಡ್ಡ ಮುಕ್ತ ನಾವಿನ್ಯತೆ ಮಾದರಿ ಸ್ಪರ್ಧೆಯಲ್ಲಿ ವಿಎಸ್‌ಎಂಎಸರ್ ಆರ್‌ಕೆಐಟಿ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆಗೈದ್ದಾರೆ. ಪ್ರೊ| ಮಹಾದೇವ ಹರಕುಡೆ ಮಾರ್ಗದರ್ಶನದಲ್ಲಿ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಾದ ಪ್ರಶಾಂತ ಗುಳಗುಳೆ, ಪವನ ಕೋಕಣೆ, ಹೃಷಿಕೇಶ ಪವಾರ, ವಿಕಾಸ ಹಿರೆಕೊಡಿ ಸಿದ್ಧಪಡಿಸಿದ ಸೂರ್ಯಕಾಂತಿ ಬೀಜಗಳ ಶೆಲ್ಲಿಂಗ್ ಯಂತ್ರದ ವಿನ್ಯಾಸ ಮತ್ತು ಅಭಿವೃದ್ಧಿ ಯೋಜನೆ ಹಾಗೂ ಪ್ರೊ| ವಿದ್ಯಾವತಿ ದೇಶಪಾಂಡೆ ಮಾರ್ಗದರ್ಶನದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ರಫಿಯಾಬೇಗಂ ನದಾಫ್, ಪ್ರೇಮಾ ಬೋರಗಲ್ಲೆ, ಪೂಜಾ ಸುತಾರ, ದಿವ್ಯಾ ಕೇಸರಕರ, ಶುಭಾಂಗಿ ನಿಕಂ, ರಿಫತ್‌ನಾಜ್ ಅತ್ತಾರ ಸಿದ್ಧಪಡಿಸಿದ ಅಂಗವಿಕಲರಿಗೆ ವೈರ್‌ಲೆಸ್ ಹೆಡ್ ಗೆಸcರ್ ನಿಯಂತ್ರಿತ ಗಾಲಿಕುರ್ಚಿ ಯೋಜನೆ ಅಂತಿಮ ಹಂತಕ್ಕೆ ತಲುಪಿವೆ. ಈ ಯೋಜನೆಗಳಿಗೆ ಪ್ರೊ| ಮಲ್ಲಿಕಾರ್ಜುನ ಗಣಾಚಾರಿಯವರ ವಿಶೇಷ ಮಾರ್ಗದರ್ಶನ ಲಭಿಸಿದೆ.
ಫಿನಾಲೆ ಆ.1 ರಿಂದ 3ರವರೆಗೆ ನಡೆಯಲಿದ್ದು ಯೋಜನೆಗಳನ್ನು ಸಿದ್ಧಪಡಿಸಿದ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಂವಹನ ನಡೆಸುವ ಅವಕಾಶ ಪಡೆಯಲಿದ್ದಾರೆ. ಚೇರಮನ್ ಚಂದ್ರಕಾಂತ ಕೋಠಿವಾಲೆ ಮತ್ತು ಆಡಳಿತ ಮಂಡಳಿ, ಸಿಇಓ ಡಾ. ಸಿದ್ಧಗೌಡ ಪಾಟೀಲ, ಎಲ್ಲ ವಿಭಾಗದ ಮುಖ್ಯಸ್ಥರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.