Advertisement

ಸ್ಥಳೀಯ ಮುಖಂಡರಿಂದ ಅಭ್ಯರ್ಥಿಗಳ ಆಯ್ಕೆ

04:40 PM Dec 11, 2020 | Suhan S |

ಮಾಸ್ತಿ: ಬಿಜೆಪಿಯಿಂದ ಕಾಂಗ್ರೆಸ್‌ ಮುಕ್ತ ಮಾಡುವುದು ಕೇವಲ ಭ್ರಮೆಯಾಗಿದ್ದು, ದೇಶದಲ್ಲಿ ಬಿಜೆಪಿ ಮುಕ್ತ ಮಾಡಲು ಜನತೆ ಸಜ್ಜಾಗಿದ್ದಾರೆ ಎಂದು ಶಾಸಕ ಕೆ. ವೈ.ನಂಜೇಗೌಡ ಹೇಳಿದರು.

Advertisement

ಮಾಸ್ತಿ ಹಾಗೂ ಹೋಬಳಿಯ ಹಸಾಂಡಹಳ್ಳಿ, ತುರುಣಿಸಿ, ದಿನ್ನಹಳ್ಳಿ ಗ್ರಾಮಗಳಲ್ಲಿ ಬ್ಲಾಕ್‌ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಗ್ರಾಪಂ ಚುನಾವಣೆಯ ಪ್ರವಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾಸ್ತಿ ಗ್ರಾಮವು ಹೋಬಳಿಯ ಕೇಂದ್ರ ಸ್ಥಾನವಾಗಿದ್ದು,ಈಭಾಗ ಹಿಂದಿ ನಿಂದಲೂಕಾಂಗ್ರೆಸ್‌ಭದ್ರಕೋಟೆಯಾಗಿದೆ. ಮಾಸ್ತಿ ಗ್ರಾಪಂನಲ್ಲಿ 24 ಸದಸ್ಯರು ಹಾಗೂ ಹೋಬಳಿಯ ಪ್ರತಿ ಗ್ರಾಪಂನಲ್ಲೂ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಬೇಕಿದೆ. ತಾಲೂಕಿನ ಎಲ್ಲಾ 28 ಗ್ರಾಪಂಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು. ಅಭ್ಯರ್ಥಿಗಳ ಆಯ್ಕೆಯನ್ನು ಆಯಾ ಗ್ರಾಮದ ಮುಖಂಡರಿಗೆ ನೀಡುತ್ತೇನೆ ಎಂದರು.

ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ತಾಲೂಕಿನ ಗ್ರಾಮಗಳಿಗೆ ತಂದಿರುವ ವಿಶೇಷ ಅನುದಾನ ಬಳಸಿಕೊಂಡುಸಾಕಾಷ್ಟು ಅಭಿವೃದ್ಧಿ ಕಾರ್ಯಗಳನ್ನುಮಾಡಿರುವ ತೃಪ್ತಿ ನನಗಿದೆ. ಎರಡೂವರೆವರ್ಷದಲ್ಲಿ ನಡೆಸಿದ ಅಭಿವೃದ್ಧಿಕಾರ್ಯಗಳನ್ನು ಮುಂದಿಟ್ಟುಕೊಂಡು ಗ್ರಾಪಂ ಚುನಾವಣೆ ಮತಯಾಚನೆಮಾಡಲಾಗುವುದು ಎಂದರು.

ಮಾಸ್ತಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಟಿ.ಮುನಿಯಪ್ಪ, ಡಿಸಿಸಿ ಬ್ಯಾಂಕ್‌ ನಿರ್ದೇ ಶಕ ಚನ್ನರಾಯಪ್ಪ, ಎಪಿಎಂಸಿ ಸದಸ್ಯ ರಾದ ಸಬ್ದರ್‌ ಬೇಗ್‌, ಕೃಷ್ಣಕುಮಾರ್‌, ಕೆಡಿಪಿ ಮಾಜಿ ಸದಸ್ಯ ವಿಜಯನರಸಿಂಹ,ಗ್ರಾಪಂ ಮಾಜಿ ಉಪಾಧ್ಯಕ್ಷ ಎಚ್‌.ವಿ. ಸತೀಶ್‌, ಎ.ಅಶ್ವತ್ಥ್ರೆಡ್ಡಿ, ಮುನಿಶಾಮಿಗೌಡ, ಜೆಸಿಬಿ ನಾಗರಾಜ್‌, ಶೌಕತ್‌ ಉಲ್ಲಾಬೇಗ್‌, ಟೆಂಟ್‌ ವೆಂಕಟೇಶ್‌ಸೇರಿದಂತೆ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

Advertisement

 ಮೊದಲ ಹಂತದಲ್ಲಿ 1,520 ಗ್ರಾಪಂ ಸ್ಥಾನಗಳಿಗೆ ಚುನಾವಣೆ :

ಕೋಲಾರ: ಜಿಲ್ಲೆಯ ಕೋಲಾರ, ಮಾಲೂರು ಹಾಗೂ ಶ್ರೀನಿವಾಸಪುರ ವ್ಯಾಪ್ತಿಯ85 ಪಂಚಾಯ್ತಿಗಳಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಡಿ.11 ರಂದುಕೊನೆಗೊಳ್ಳಲಿದ್ದು, 1520 ಪಂಚಾಯ್ತಿ ಸ್ಥಾನಗಳಿಗೆ ಮೊದಲ ಹಂತದ ಚುನಾವಣೆ ನಡೆಯುತ್ತಿದೆ.

ನಾಮಪತ್ರಸಲ್ಲಿಕೆ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದ್ದು, ಡಿ.8 ರಂದುಕೋಲಾರದ32 ಗ್ರಾಪಂಗಳ569 ಸ್ಥಾನಗಳಿಗೆ36, ಮಾಲೂರು ತಾಲೂಕಿನ 28 ಗ್ರಾಪಂಗಳ 505 ಸ್ಥಾನಗಳಿಗೆ 35 ಹಾಗೂ ಶ್ರೀನಿವಾಸಪುರದ 25ಗ್ರಾಪಂಗಳ 446 ಸ್ಥಾನಗಳಿಗೆ 4 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಶುಕ್ರವಾರ ನಾಮಪತ್ರ ಭಾರೀ ಸಂಖ್ಯೆಯಲ್ಲಿ ಸಲ್ಲಿಕೆಯಾಗುವ ಸಾಧ್ಯತೆ ಇದೆ.12 ಪರಿಶೀಲನೆ, 14 ನಾಮಪತ್ರ ವಾಪಸ್‌ ಪಡೆಯುವ ಕೊನೆಯ ದಿನವಾಗಿರುತ್ತದೆ. 14 ರ ನಂತರವಷ್ಟೇ ಅವಿರೋಧ ಆಯ್ಕೆಯ ವಿವರಗಳು ಖಚಿತಪಡಲಿದೆ.

ಕೋಲಾರ ಜಿಲ್ಲೆಯಲ್ಲಿ ಜಿದ್ದಾಜಿದ್ದಿನ ರಾಜಕೀಯ ಪೈಪೋಟಿ ಇರುವುದರಿಂದ ಅವಿರೋಧ ಆಯ್ಕೆ ಸಾಧ್ಯತೆ ಕಡಿಮೆ. ಮೀಸಲಾತಿಗೆ ತಕ್ಕಅಭ್ಯರ್ಥಿಗಳು ಇಲ್ಲದಿದ್ದಾಗ ಮಾತ್ರವೇ ಅವಿರೋಧ ಆಯ್ಕೆಯಾಗುವ ಸಾಧ್ಯತೆಗಳಿವೆ. ಆದರೂ, ಕೆಲವೆಡೆ ಗ್ರಾಮದಲ್ಲಿ ಒಗ್ಗಟ್ಟು ಮತ್ತು ಶಾಂತಿ ಕಾಪಾಡುವ ಸಲುವಾಗಿ ಗ್ರಾಪಂ ಸ್ಥಾನಗಳನ್ನು ಹರಾಜು ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಕೋಲಾರ ತಾಲೂಕಿನ ಬೆದ್ಲಿ ಗ್ರಾಮದಲ್ಲಿ ಗ್ರಾಪಂ ಸ್ಥಾನವೊಂದನ್ನು ನಾಲ್ವರು ಅಭ್ಯರ್ಥಿ ಆಕಾಂಕ್ಷಿಗಳ ನಡುವೆ ಹರಾಜು ನಡೆಸಿ ಅಂತಿಮವಾಗಿ ಶ್ರೀರಾಮಪ್ಪ ಎಂಬುವರಿಗೆ5 ಲಕ್ಷ ರೂ.ಗೆ ಹರಾಜು ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಉಳಿದಂತೆ ಮುಳಬಾಗಿಲು, ಬಂಗಾರಪೇಟೆ ಮತ್ತು ಕೆಜಿಎಫ್ ತಾಲೂಕುಗಳಲ್ಲಿ ನಾಮಪತ್ರ ಸಲ್ಲಿಕೆ ಕಾರ್ಯವು 11 ರಂದು ಆರಂಭವಾಗಲಿದೆ. ಗ್ರಾಪಂ ನಾಮಪತ್ರ ಸಲ್ಲಿಕೆ ಕಾರ್ಯ ಸುಗಮವಾಗಿ ನಡೆಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next