Advertisement
ಎಲ್. ವಿ. ಅಮೀನ್ ಕನ್ನಡ ಸಂಘ ಸಾಂತಾಕ್ರೂಜ್ ಇದರ ಅಧ್ಯಕ್ಷರಾಗಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಾಜಿ ಅಧ್ಯಕ್ಷರಾಗಿ, ಭಾರತ್ ಬ್ಯಾಂಕಿನ ಮಾಜಿ ನಿರ್ದೇಶಕರಾಗಿ, ಮುಂಬಯಿ ಪ್ರದೇಶ ಬಿಜೆಪಿ ಪಕ್ಷದ ಧುರೀಣರಾಗಿ, ಬಜ್ಪೆ ದೊಡ್ಡಿಕಟ್ಟೆ ಶ್ರೀ ಸ್ವಯಂ ಭೂಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ, ಆಡಳಿತ ಮಂಡಳಿ ಅಧ್ಯಕ್ಷರಾಗಿ, ಸಮಾಜ ಸೇವಕ, ಧಾರ್ಮಿಕ ಮುಂದಾಳುವಾಗಿ, ಅಂಬಿಕಾ ಮೌಲ್ಡ್ ಟೆಕ್ ಪ್ರೈವೇಟ್ ಲಿಮಿಟೆಡ್ (ಎಸ್ಸೆಲ್) ಸಂಸ್ಥೆಯ ಆಡಳಿತ ನಿರ್ದೇಶಕರಾಗಿ ಓರ್ವ ಯಶಸ್ವಿ ಉದ್ಯಮಿಯಾಗಿ ಎಲ್. ವಿ. ಅಮೀನ್ ಅವರು ನಗರದಲ್ಲಿ ಗುರುತಿಸಿಕೊಂಡಿದ್ದಾರೆ.
ಸ್ವಾತಂತ್ರÂ ಹೋರಾಟಗಾರ ಹಾಗೂ ಹೆಸರಾಂತ ಸಮಾಜ ಸೇವಕ ಮತ್ತು ಮುಂಬಯಿ ಶಿಕ್ಷಣ ಕ್ಷೇತ್ರದ ದಿಗ್ಗಜ ಉಡುಪಿ ಜಿಲ್ಲೆಯ ಬಡ ಎರ್ಮಾಳು ಗರಡಿ ಮನೆತನದ ದಿ| ರಾಮ ಬಿ. ಸನಿಲ್ ಮತ್ತು ಬಜ್ಪೆ ದೊಡ್ಡಿಕಟ್ಟೆ ಮನೆತನದ ಗುಲಾಬಿ ರಾಮ ಸನಿಲ್ ದಂಪತಿಯ ಪುತ್ರರಾಗಿರುವ ಇವರು, ಸ್ಥಾಪತ್ಯವೇದ ವಾಸ್ತು ಪಾರಂಗತ ಪಂಡಿತರೆಂದೇ ಪ್ರಸಿದ್ಧರು. ಸನಿಲ್ ಅವರು ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳಾದ್ಯಂತ ಸೇರಿದಂತೆ ಹತ್ತಾರು ಪ್ರಸಿದ್ಧ ದೇವಸ್ಥಾನಗಳ ವಾಸ್ತು ಸಲಹಾಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಮಸ್ಕತ್, ಒಮಾನ್, ಕುವೇಟ್ ಹಾಗೂ ಕತಾರ್ ರಾಷ್ಟ್ರಗಳಿಗೂ ಭೇಟಿಗೈದು ವಾಸ್ತು ಸಂಶೋಧನೆ ಮತ್ತು ಪರ್ಯಾಲೋಚನಾ ಅಧ್ಯಯನ ನಡೆಸಿದ್ದಾರೆ. ವಾಸ್ತು ವಿದ್ಯಾಪಂಡಿತ್ ಮತ್ತು ವಾಸ್ತು ವಿಶಾರದ ಎಂಬ ಎರಡು ಪದವಿಗಳನ್ನು ಪಡೆದಿದ್ದಾರೆ. ಸುಮಾರು 46ಕ್ಕೂ ಅಧಿಕ ದೇವಸ್ಥಾನಗಳ ನಿರ್ಮಾಣಕ್ಕೆ ವಾಸ್ತುವಿನ ಸಲಹೆ ಸೂಚನೆಗಳನ್ನು ನೀಡಿ ಆ ಕ್ಷೇತ್ರಗಳ ಪ್ರಸಿದ್ಧಿಗೆ ಕಾರಣೀಭೂತರಾದ ಶ್ರೇಯಸ್ಸು ಇವರಿಗಿದೆ.
Related Articles
Advertisement
ಚಂದ್ರಶೇಖರ ಆರ್. ಬೆಳ್ಚಡ ಮೂಲತಃ ಕಟೀಲಿನ ರಾಮ ತಿಮ್ಮಪ್ಪ ಮತ್ತು ಸೀತು ರಾಮ ದಂಪತಿಯ ಪುತ್ರರಾಗಿರುವ ಇವರು, ಕಟೀಲ್‌ನಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದು, ಮುಂಬಯಿಗೆ ಆಗಮಿಸಿ ವಾಣಿಜ್ಯ ಪದವಿಯನ್ನು ಪಡೆದರು. ರಿಫ್ರಾÂಕ್ಚರ್ ಮೆಟೀರಿಯಲ್ ಕಂಪೆನಿಯಲ್ಲಿ ಕೆಲಸ ಆರಂಭಿಸಿದ ಇವರು, ಮುಂದೆ ಉನ್ನತ ಶಿಕ್ಷಣ ಪೂರೈಸಿ, ಉಪನಗರ ಥಾಣೆಯಲ್ಲಿ ತನ್ನದೇ ಆದ ಸ್ವಂತದ ಪಿ. ಪಿ. ರೆಫÅಕ್ಟೊರೀಸ್ ಕಾರ್ಪೊರೇಶನ್ ಸಂಸ್ಥೆಯನ್ನು ರೂಪಿಸಿಕೊಂಡರು. ಸಮಾಜ ಸೇವೆಯಲ್ಲೂ ವಿಶೇಷ ಆಸಕ್ತಿಯನ್ನು ಹೊಂದಿರುವ ಇವರು, ರೋಟರಿ ಕ್ಲಬ್ ಆಫ್ ಮುಂಬಯಿ ಇದರ ಮುಲುಂಡ್ ಪೂರ್ವ ವಲಯದ ಅಧ್ಯಕ್ಷರಾಗಿ ಜಿಲ್ಲಾ ಮಟ್ಟದಲ್ಲಿ ರೋಟರಿ ಇಂಟರ್‌ನ್ಯಾಷನಲ್ ಗೋಲ್ ಪೂರ್ಣಗೊಳಿಸುವ ಮೂಲಕ ತನ್ನ ಸೇವೆಯನ್ನು ಸಮಾಜ ಮುಖೀಯನ್ನಾಗಿಸಿಕೊಂಡರು. ಪ್ರಸ್ತುತ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಗ್ರ ಸಮೂದಾಯಗಳ ಜನತೆಯಲ್ಲಿ ಆತ್ಮೀಯರಾಗಿ, ಯುವ ನಾಯಕರಾಗಿ ಅತ್ಯುತ್ತಮ ಸಂಘಟನಾ ಚತುರರು ಎಂದೇ ಗುರುತಿಸಲ್ಪಟ್ಟ ಇವರು ತನ್ನ ಸ್ವ ಸಮುದಾಯವಾದ ತೀಯಾ ಸಮಾಜ ಮುಂಬಯಿ ಇದರ ಅಧ್ಯಕ್ಷರಾಗಿ ಮೂರನೇ ಅವಧಿಗೆ ಸರ್ವಾನುಮತದಿಂದ ಆಯ್ಕೆಯಾದ ಧುರೀಣರಾಗಿದ್ದಾರೆ. ತೀಯಾ ಸಮಾಜ ಮುಂಬಯಿ ಇದರ ಮುಖವಾಣಿ “ತೀಯಾ ಜ್ಯೋತಿ’ ಮಾಸಿಕಕ್ಕೆ ಹೊಸದಾಗಿ “ತೀಯಾ ಬೆಳಕು’ ಎಂದು ನಾಮಕರಣ ಮಾಡಿ ಮೌಲ್ಯಯುತ ಬರವಣಿಗೆ ಮೂಲಕ ಸಮಾಜದ ಜನತೆಗೆ ಒದಗಿಸುವಲ್ಲಿ ದಿಟ್ಟ ಹೆಜ್ಜೆಯನ್ನಿರಿಸಿದರು. ಅವರ ಸಿದ್ಧಿ-ಸಾಧನೆಗಳಿಗೆ ಸಮ್ಮಾನ, ಪುರಸ್ಕಾರಗಳು ಲಭಿಸಿವೆ.