Advertisement

ಹೆಲ್ತ್‌ ಸಿಟಿ ಯೋಜನೆಗೆ ಕೋಟೂರು ಗ್ರಾಮ ಆಯ್ಕೆ

01:03 PM Mar 06, 2017 | Team Udayavani |

ಹುಬ್ಬಳ್ಳಿ: ಇತ್ತೀಚೆಗೆ ಭಾರತಕ್ಕೆ ಆಗಮಿಸಿದ್ದ ಇಂಗ್ಲೆಂಡ್‌ ಪ್ರಧಾನಿ ಕೆಮರೂನ್‌ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಧ್ಯ ದೇಶದಲ್ಲಿ ಆರೋಗ್ಯ ನಗರ (ಹೆಲ್ತ್‌ ಸಿಟಿ)ಗಳ ರೂಪನೆ ಕುರಿತಾಗಿ ನಡೆದ ಒಡಂಬಡಿಕೆಯಂತೆ ಧಾರವಾಡ ಜಿಲ್ಲೆ ಕೋಟೂರು ಗ್ರಾಮ ಹೆಲ್ತ್‌ ಸಿಟಿ ಯೋಜನೆಗೆ ಆಯ್ಕೆಯಾಗಿರುವುದು ಕ್ಷೇತ್ರದ ಸಂಸ್ಥನಾಗಿ ಸಂತಸ ಮೂಡಿಸಿದೆ ಎಂದು ಸಂಸದ ಪ್ರಹ್ಲಾದ ಜೋಶಿ ತಿಳಿಸಿದರು. 

Advertisement

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಗ್ಲೆಂಡ್‌ ಪ್ರಧಾನಮಂತ್ರಿ ಕೆಮರೂನ್‌ ಹಾಗೂ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೇಶದಲ್ಲಿ 11 ಕಡೆ ಹೆಲ್ತ್‌ಸಿಟಿ ಮಾಡುವ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಈ ಯೋಜನೆಯಿಂದ ಕೋಟೂರು ಗ್ರಾಮದಲ್ಲಿ 1000 ಹಾಸಿಗೆ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣವಾಗಲಿದ್ದು, ಇಲ್ಲಿ ಆರೋಗ್ಯ ಗ್ರಾಮವನ್ನಾಗಿ ಮಾಡುವ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ. ಯೋಜನೆಗೆ ಕೇಂದ್ರ ಸರಕಾರದಿಂದ ಹಸಿರು ನಿಶಾನೆ ಸಿಕ್ಕಿದ್ದು, ರಾಜ್ಯ ಸರಕಾರ ಯೋಜನೆ ಅನುಷ್ಠಾನಕ್ಕೆ ಬೇಕಾದ ಎಲ್ಲ ಸಹಕಾರ, ವ್ಯವಸ್ಥೆಗೆ ಮುಂದಾಗಬೇಕಾಗಿದೆ ಎಂದರು.

ಖಂಡನೆ: ಅಮೆರಿಕಾದಲ್ಲಿ ಭಾರತೀಯ ಮೂಲದವರ ಹತ್ಯೆಗೈಯುವ ಹಾಗೂ ಹಲ್ಲೆ ಮಾಡುವ ಘಟನೆಗಳು ಖಂಡನೀಯ. ಇಂತಹ ಘಟನೆಗಳು ನಡೆಯಬಾರದು ಎಂದು ಸಂಸದ ಜೋಶಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next