Advertisement

ಕಾಯಕಯೋಗಿ ಚುನಾಯಿಸಿ

04:20 PM May 11, 2018 | Team Udayavani |

ದಾರವಾಡ: ಕಾಯಕ ಯೋಗಿಯನ್ನು ನಾಯಕನನ್ನಾಗಿ ಆಯ್ಕೆ ಮಾಡುವ ಮಹಾ ಅಸ್ತ್ರ ಮತದಾರ ಪ್ರಭುಗಳ ಕೈಯಲ್ಲಿಯೇ
ಇದೆ ಎಂದು ಬೈರನಟ್ಟಿ ಶ್ರೀದೊರೆಸ್ವಾಮಿ ವಿರಕ್ತಮಠದ ಪೀಠಾಧಿಪತಿ ಶಾಂತಲಿಂಗ ಸ್ವಾಮೀಜಿ ಹೇಳಿದರು. ನಗರದ ಕವಿಸಂನಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ವಿಧಾನಸಭಾ ಚುನಾವಣೆ-2018 ಮತದಾರರ ಜಾಗೃತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

Advertisement

ಹಣ, ಹೆಂಡ ಮತ್ತು ಜಾತಿಗಳ ಆಮಿಷಕ್ಕೆ ಬಲಿಯಾಗಿ ಮತದಾನ ಮಾಡದೇ ಮತದಾರ ಪ್ರಭು ಜಾಗೃತವಾದ ಹೆಜ್ಜೆ ಇಡುವುದು ದೇಶದ ಭವಿಷ್ಯತ್ತಿನ ದೃಷ್ಟಿಯಲ್ಲಿ ತೀರಾ ಅವಶ್ಯ. ಇಂದು ಸಮಾಜಸೇವೆ ಹೆಸರಿನಲ್ಲಿ ರಾಜಕೀಯ ಧುರೀಣರು ಲಾಭ ಮಾಡಿಕೊಳ್ಳುವ ದಂಧೆಗೆ ಇಳಿದಿದ್ದಾರೆ. ಈ ಸನ್ನಿವೇಶ ಬದಲಾಗಬೇಕಾದರೆ ಮತ್ತು ಉತ್ತಮ ಪ್ರಜಾಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಾದರೆ ನಿಷ್ಕಾಮ ಮತದಾನ ಆಗಬೇಕು ಎಂದರು.

ಸಿದ್ಧಾರೂಢಸ್ವಾಮಿ ಮಠದ ಧಮದರ್ಶಿ ಕೆ.ಎಲ್‌. ಪಾಟೀಲ, ಡಾ| ರಾಜನ್‌ ದೇಶಪಾಂಡೆ, ಪ್ರಾಚಾರ್ಯರಾದ ಡಾ| ರಾಜೇಶ್ವರಿ ಮಹೇಶ್ವರಯ್ಯ, ವೆಂಕಟೇಶ ಕುಲಕರ್ಣಿ ಮಾತನಾಡಿದರು. ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಪ್ರಫುಲ್ಲಾ ನಾಯಕ ಸ್ವಾಗತಿಸಿದರು. ಸದಾನಂದ ಶಿವಳ್ಳಿ ವಂದಿಸಿದರು. ಶಂಕರ ಕುಂಬಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next