Advertisement

ಟಿ10 ಲೀಗ್‌: ಮರಾಠ ತಂಡಕ್ಕೆ  ಸೆಹವಾಗ್‌ ಬ್ಯಾಟಿಂಗ್‌ ಕೋಚ್‌

03:26 PM Jul 30, 2018 | |

ದುಬಾೖ: ಟಿ20 ಕ್ರಿಕೆಟ್‌ಗಿಂತಲೂ ಮಿಗಿಲಾದ ರೋಚಕತೆ ಇರುವ 10 ಓವರ್‌ಗಳ ಟಿ10 ಕ್ರಿಕೆಟ್‌ ಕೂಟ ಕಳೆದ ವರ್ಷ ಆರಂಭವಾಗಿ ಭಾರೀ ಸದ್ದು ಮಾಡಿತ್ತು. ಇದೀಗ 2ನೇ ಆವೃತ್ತಿಗೆ ಸಜ್ಜಾಗಿದೆ. ಪ್ರಮುಖ ತಂಡವಾಗಿರುವ “ಮರಾಠ ಅರೆಬಿಯನ್ಸ್‌’ಗೆ ಭಾರತ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹವಾಗ್‌ ಬ್ಯಾಟಿಂಗ್‌ ಕೋಚ್‌ ಆಗಿ ಆಯ್ಕೆಯಾಗಿದ್ದಾರೆ. 

Advertisement

ಮರಾಠ ತಂಡದಲ್ಲಿ ಅಫ್ಘಾನಿಸ್ಥಾನದ ಪ್ರಮುಖ ಕ್ರಿಕೆಟಿಗ ರಶೀದ್‌ ಖಾನ್‌, ಪಾಕ್‌ನ ಕಮ್ರಾನ್‌ ಅಕ್ಮಲ್‌, ಇಂಗ್ಲೆಂಡ್‌ನ‌ ಅಲೆಕ್ಸ್‌ ಹೇಲ್ಸ್‌, ವಿಂಡೀಸ್‌ನ ಡ್ವೇನ್‌ ಬ್ರಾವೊ ಮತ್ತು ಆಸ್ಟ್ರೇಲಿಯದ ಜೇಮ್ಸ್‌ ಫಾಕ್ನರ್‌ ಇದ್ದಾರೆ. ಕೂಟದಲ್ಲಿ 8 ತಂಡಗಳು ಪಾಲ್ಗೊಳ್ಳುತ್ತಿವೆ. ಪ್ರತಿ ತಂಡದಲ್ಲೂ ಕ್ರಮವಾಗಿ 5 ಮಂದಿ ಆಟಗಾರರಿರುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next