ಮುಂಬಯಿ: ಇತ್ತೀಚೆಗೆ ಭಾರತ ಕ್ರಿಕೆಟ್ ತಂಡ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಕರೆದಿತ್ತು. ಇದಕ್ಕೆ ವೀರೇಂದ್ರ ಸೆಹವಾಗ್ ಅರ್ಜಿ ಯನ್ನೂ ಸಲ್ಲಿಸಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸುದ್ದಿ.
ಹೊಸ ಮಾಹಿತಿಯೆಂದರೆ, ಟ್ವೀಟ್‌ಗಳನ್ನು ಮಾಡುವ ರೀತಿಯೇ ಸೆಹ ವಾಗ್ ತಮ್ಮ ಅರ್ಜಿಯನ್ನೂ 2 ಸಾಲಿನಲ್ಲಿ ಬರೆದು ಕಳಿಸಿದ್ದಾರೆ. ಇದನ್ನು ತಿರಸ್ಕರಿಸಿರುವ ಬಿಸಿಸಿಐ ಅವರಿಗೆ ಇನ್ನೊಂದು ಅವಕಾಶ ನೀಡಿ ಪೂರ್ಣ ಪ್ರಮಾಣದ ಅರ್ಜಿ ಸಲ್ಲಿಸುವಂತೆ ತಿಳಿಸಿದೆ ಎಂದು ವರದಿಯಾಗಿದೆ. ಇದಕ್ಕೆ ಸೆಹವಾಗ್ ಹೇಗೆ ಪ್ರತಿಕ್ರಿಯಿಸುತ್ತಾರೆನ್ನುವುದು ಸದ್ಯದ ಪ್ರಶ್ನೆ.
ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಸ್ಫೋಟಕ ಬ್ಯಾಟ್ಸ್‌ಮನ್‌ಗಳಲ್ಲೊಬ್ಬರಾಗಿರುವ ಸೆಹವಾಗ್‌ಗೆ, ಇಂಥ ಸಹಜ ವಿಧಿಗಳೆಲ್ಲ ಗೊತ್ತಾಗದೆ ಹೋಯಿತೇ ಅಥವಾ ಬೇಕೆಂದೇ ಹೀಗೆ ಮಾಡಿದರೇ ಎಂಬ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ. ಒಂದು ವೇಳೆ ಅವರು ಉದ್ದೇಶಪೂರ್ವಕವಾಗಿ ಹೀಗೆ ಅರ್ಜಿ ಸಲ್ಲಿಸಿ ದ್ದರೆ ಕೋಚ್ ಹುದ್ದೆಯಲ್ಲಿ ಅವರಿಗೆ ಆಸಕ್ತಿಯಿಲ್ಲ ಎನ್ನುವುದನ್ನು ಬಿಂಬಿಸಿದಂತಾಗುವುದಿಲ್ಲವೇ ಎಂಬುದೊಂದು ಪ್ರಶ್ನೆ.
ಈ ಹಿಂದಿನ ವರದಿಗಳ ಪ್ರಕಾರ ಅನಿಲ್ ಕುಂಬ್ಳೆ ಕೋಚ್ ಸ್ಥಾನದಲ್ಲಿರು ವುದರಿಂದ ಜತೆಗೆ ಅವರು ಯಶಸ್ವೀ ಪ್ರದರ್ಶನ ನೀಡುತ್ತಿರುವುದರಿಂದ ವೀರೂಗೆ ಈ ಸ್ಥಾನದಲ್ಲಿ ಆಸಕ್ತಿ ಇಲ್ಲ ಎನ್ನಲಾಗಿತ್ತು. ಕುಂಬ್ಳೆ ಮೇಲಿನ ಗೌರವವೂ ಇಲ್ಲಿ ಕೆಲಸ ಮಾಡಿದೆ. ಆದರೆ ಬಿಸಿಸಿಐ ಒತ್ತಡ ಹಾಕಿದ್ದರಿಂದ ಮಾತ್ರ ವೀರೂ ಅರ್ಜಿ ಸಲ್ಲಿಸಬೇಕಾಗಿ ಬಂದಿದೆ. ಆದ್ದರಿಂದ ನಾಮಕೇವಾಸ್ತೆಗೆ ಇಂತಹ ಅರ್ಜಿ ಸಲ್ಲಿಸಿರಬಹುದೆಂಬ ಊಹೆಯೂ ಇದೆ.
ವೀರೂ ಅರ್ಜಿಯಲ್ಲೇನಿದೆ?: ಒಂದು ಮೂಲದ ಪ್ರಕಾರ ವೀರೂ ಕೇವಲ 2 ಸಾಲಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನಾನು ಕಿಂಗ್ಸ್ ಇಲೆವೆನ್ ತಂಡದ ಮೆಂಟರ್ ಮತ್ತು ಕೋಚ್ ಆಗಿದ್ದೇನೆ. ಈಗಿರುವ ಭಾರತ ತಂಡದ ಎಲ್ಲ ಕ್ರಿಕೆಟಿಗರೊಂದಿಗೆ ಆಡಿದ ಅನುಭವ ಹೊಂದಿದ್ದೇನೆ….ಬರೀ ಇಷ್ಟು ಮಾತ್ರ ಬರೆದಿದ್ದಾರೆ. ಆದರೆ ಬಿಸಿಸಿಐ ಇದನ್ನು ಒಪ್ಪಿಕೊಂಡಿಲ್ಲ. ಅವರಿಗೆ ಮತ್ತೂಂದು ಅವಕಾಶ ಕೊಡಲಾಗಿದೆ ಎಂದು ಹೇಳಿಕೊಂಡಿದೆ ಎನ್ನಲಾಗಿದೆ.